More

    ಮಹಿಳೆಯರು ಇನ್ನೂ 6 ತಿಂಗಳು ಗರ್ಭ ಧರಿಸ ಬಾರದಂತೆ; ಇದು ಜಿಕಾ ಎಫೆಕ್ಟ್​..!

    ರಾಯಚೂರು: ರಾಜ್ಯದ ರಾಯಚೂರು ಜಿಲ್ಲೆಯಲ್ಲಿ ಮೊದಲ ಜಿಕಾ ವೈರಸ್ ಪ್ರಕರಣ ನಿನ್ನೆ ವರದಿಯಾಗಿದ್ದು, ಎಲ್ಲರಲ್ಲೂ ಆಂತಕ ಸೃಷ್ಟಿಸಿದೆ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ನಿಗಾ ವಹಿಸಬೇಕು ಎನ್ನುತ್ತಾರೆ ಮಕ್ಕಳ ತಜ್ಞರು. ಈ ನಡುವೆ ಆರೋಗ್ಯ ಇಲಾಖೆ, ಮುಂದಿನ ಆರು ತಿಂಗಳ ಕಾಲ ಯಾರೂ ಗರ್ಭ ಧರಿಸದಂತೆ, ಸೂಚನೆ ಪ್ರಕಟಿಸಿದೆ.

    ಜಿಕಾ ವೈರಸ್ ಒಂದೇ ಮಾದರಿಯ ಆರ್‌ಎನ್‌ಎ ವೈರಸ್ ಗುಂಪಿಗೆ (ಫ್ಲೇಮಿ ವೈರಸ್ ಗುಂಪು) ಸೇರಿದ್ದಾಗಿದೆ. ಈಡಿಸ್ ಜಾತಿಯ ಸೊಳ್ಳೆ ಕಚ್ಚುವುದರಿಂದ ಜಿಕಾ ಹರಡುತ್ತದೆ. ಡೆಂಘೆಗೂ ಇದೇ ಸೊಳ್ಳೆ ಕಾರಣ. ಹಳದಿ ಜ್ವರ, ಜಪಾನೀಸ್ ಎನ್ಸೆಲೈಟಿಸ್ ಮತ್ತು ವೆಸ್ಟ್​ ನೈಲ್ ವೈರಸ್​ಗಳೊಂದಿಗೆ ಇದು ನಿಕಟ ಸಂಬಂಧ ಹೊಂದಿದೆ ಎಂದು ಸಂಶೋಧನೆಯಿಂದ ಸಾಬೀತಾಗಿದೆ.

    ಇದೀಗ ರಾಯಚೂರು ಜಿಲ್ಲೆಯ ಮಕ್ಕಳ ಆಸ್ಪತ್ರೆಗಳು ತುಂಬಿ ತುಳುಕುತ್ತಿದ್ದು, ಜಿಕಾ ವೈರಸ್ ಕಾರಣ ಆತಂಕಗೊಂಡಿರುವ ಪೋಷಕರು ತಮ್ಮ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಾರೆ. ಈಗ ಆರೋಗ್ಯ ಇಲಾಖೆ ಒಟ್ಟು 57 ಗರ್ಭಿಣಿಯರ ರಕ್ತದ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಪರೀಕ್ಷೆ ಕಳುಹಿಸಿದೆ. ಕಳೆದ ವಾರವಷ್ಟೇ ರಾಜ್ಯದಲ್ಲಿ ಮೊದಲ ಬಾರಿಗೆ ಜಿಕಾ ವೈರಸ್ ಪತ್ತೆಯಾಗಿತ್ತು. ಇದು 5 ವರ್ಷದ ಬಾಲಕಿಗೆ ಓರ್ವಳಿಗೆ ಇದ್ದದ್ದು ಟೆಸ್ಟ್‌ನಲ್ಲಿ ದೃಢವಾಗಿತ್ತು. ಇದರ ಬೆನ್ನಲ್ಲೇ ಆರೋಗ್ಯ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು.

    ಇವೆಲ್ಲದರ ನಡುವೆ ಮಾಂಡೌಸ್​ ಚಂಡಮಾರುತದಿಂದಾಗಿ ಚಳಿ ಇನ್ನಷ್ಟು ಹೆಚ್ಚಿದೆ. ಮೊದಲೇ ಚಳಿಗಾಲ. ಅದರ ಜೊತೆ ಮಳೆಯೂ ಸೇರಿದ ಕಾರಣ ಮಕ್ಕಳಲ್ಲಿ ಜ್ವರ, ಕೆಮ್ಮು, ಶೀತ ಕಾಣಿಸಿಕೊಳ್ಳುತ್ತಿದೆ. ಈಗ ರಾಚೂರು ಜಿಲ್ಲೆಯಲ್ಲಿ ಜಿಕಾ ವೈರಸ್ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಸಾಮಾನ್ಯ ಜ್ವರ, ಶೀತ, ಕೆಮ್ಮಿನ ತೊಂದರೆಯಿಂದ ಬಳಲುತ್ತಿರುವ ಮಕ್ಕಳನ್ನು ಪೋಷಕರು ಆಸ್ಪತ್ರೆಯತ್ತ ಕರೆದುಕೊಂಡು ಬರುತ್ತಿದ್ದಾರೆ.

    ಜಿಕಾ ವೈರಸ್​ ಗರ್ಭ ಧರಿಸಿರುವ ತಾಯಿಯ ಮೂಲಕ ಮಗುವಿಗೆ ತಗುಲುತ್ತದೆ ಎನ್ನುವುದು ಸಂಶೋಧನೆಯಿಂದ ಧೃಢಪಟ್ಟಿದೆ. ಇದರಿಂದ ಮಗು ಹುಟ್ಟುವ ಮುನ್ನವೇ ಗಂಭೀರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಇದೆ. ಹೀಗಾಗಿ ಈಗ ಆರೋಗ್ಯ ಇಲಾಖೆ, ಮಹಿಳೆಯರಿಗೆ ಮುಂದಿನ ಆರು ತಿಂಗಳ ಕಾಲ ಗರ್ಭ ಧರಿಸದಂತೆ ಸೂಚನೆ ನೀಡಿದೆ.

    ಮನೆ ಮನೆಗೂ ತೆರಳಿ ಕಾಂಡೋಮ್​ ವಿತರಣೆ:

    ಮನೆ ಮನೆಗೂ ತೆರಳಿ ಆಶಾ ಕಾರ್ಯಕರ್ತೆಯರು ಮತ್ತು ಸರ್ಕಾರಿ ಆಸ್ಪತ್ರೆಯ ಸ್ಟಾಫ್ ನರ್ಸ್‌ಗಳು ಸರ್ವೆ ಕಾರ್ಯ ಮಾಡುತ್ತಿದ್ದಾರೆ. ಇದರ ಜೊತೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಕಾಂಡೋಮ್ ಬಳಸುವಂತೆ ಜನರಿಗೆ ಮಾಹಿತಿ ನೀಡಿ ಕಾಂಡೋಮ್ ವಿತರಣೆ ಮಾಡುತ್ತಿದ್ದಾರೆ. ಗರ್ಭಿಣಿ, ಬಾಣಂತಿಯರಲ್ಲಿ ಝೀಕಾ ವೈರಸ್ ಕಾಣಿಸಿಕೊಂಡರೆ ಹುಟ್ಟುವ ಮಕ್ಕಳಲ್ಲಿ ಅಂಗವೈಕಲ್ಯ ಎದುರಾಗುವ ಸಂಭವವಿರುವ ಕಾರಣ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಿವಂತೆ ಮಾಹಿತಿ ನೀಡಿ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಜೊತೆಗೆ, ಸುರಕ್ಷಿತ ಲೈಂಗಿಕ ಸಂಪರ್ಕ ಹೊಂದುವಂತೆ ಮಾಹಿತಿ ನೀಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts