More

    ಮದ್ಯಪಾನ ಮಾಡಿದವರು ಸತ್ತೇ ಹೋಗುತ್ತಾರೆ ಎಂದ ಬಿಹಾರದ ಸಿಎಂ..!

    ಪಟ್ನಾ: ದೇಶದಲ್ಲಿ ಮದ್ಯ ಬ್ಯಾನ್​ ಆಗಿರುವ 4 ರಾಜ್ಯಗಳ ಪೈಕಿ ಬಿಹಾರವೂ ಒಂದು. ಆದರೆ ಇಲ್ಲಿ ಇನ್ನೂ ಕಾಳಸಂತೆಯಲ್ಲಿ ಮದ್ಯಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ. ಇದರ ಪರಿಣಾಮ, ವಿಷಕಾರಿ ಮದ್ಯದಿಂದ ಜನರು ಸಾವಿನ ಕದ ತಟ್ಟುತ್ತಿದ್ದಾರೆ. ಅಂತಹದೇ ಘಟನೆ ಇತ್ತೀಚೆಗೆ ನಡೆದಿತ್ತು. ಬಿಹಾರದ ಛಾಪ್ರಾ ಹೂಚ್​ನಲ್ಲಿ ಸುಮಾರು 39 ಜನರು ಕಳ್ಳಭಟ್ಟಿ ಮದ್ಯವನ್ನು ಕುಡಿದು ಪ್ರಾಣ ಕಳೆದುಕೊಂಡಿದ್ದರು. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುತ್ತಲೇ ಇರುವುದು ದುರಂತ.

    ಇಂದು ಛಾಪ್ರಾ ಹೂಚ್ ದುರಂತದಲ್ಲಿ ಇದುವರೆಗೆ 39 ಸಾವುಗಳ ಕುರಿತು ಪ್ರತಿಕ್ರಿಯೆ ನೀಡಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ‘ನಕಲಿ ಮದ್ಯ ಸೇವಿಸಿದವರು ಸಾಯುತ್ತಾರೆ’ ಎಂದು ಹೇಳಿದ್ದಾರೆ.

    ಬಿಹಾರದಲ್ಲಿ ಮದ್ಯ ನಿಷೇಧವನ್ನು ಸಮರ್ಥಿಸಿಕೊಂಡಿರುವ ಅವರು, ‘ರಾಜ್ಯದ ಮದ್ಯ ನಿಷೇಧ ನೀತಿ ಹಲವಾರು ಜನರಿಗೆ ಉಪಕಾರ ಮಾಡಿದೆ. ಈ ಕ್ರಮಗಳಿಂದ ಹೆಚ್ಚಿನ ಸಂಖ್ಯೆಯ ಜನರು ಮದ್ಯಪಾನವನ್ನು ತ್ಯಜಿಸಿದ್ದಾರೆ. ಇದು ಒಳ್ಳೆಯದು. ಹಲವರು ಇದನ್ನು ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ಆದರೆ ಕೆಲವರು ತೊಂದರೆ ಕೊಡುತ್ತಿದ್ದಾರೆ. ಇಂತಹವರನ್ನು ಗುರುತಿಸಿ ಬಂಧಿಸಲು ನಾನು ಅಧಿಕಾರಿಗಳಿಗೆ ಹೇಳಿದ್ದೇನೆ’ ಎಂದು ಹೇಳಿದರು.

    ‘ಮದ್ಯಪಾನ ಮಾಡುವ ಬಡವರ ಬಡವರನ್ನು ಹಿಡಿಯಬಾರದು. ಬದಲಾಗಿ ಮದ್ಯವನ್ನು ತಯಾರಿಸುವ ಮತ್ತು ಮದ್ಯದ ವ್ಯಾಪಾರವನ್ನು ನಡೆಸುವ ಜನರನ್ನು ಹಿಡಿಯಬೇಕು. ಜನರು ತಮ್ಮ ಸ್ವಂತ ಕೆಲಸವನ್ನು ಪ್ರಾರಂಭಿಸಲು ತಲಾ 1 ಲಕ್ಷ ರೂಪಾಯಿ ನೀಡಲು ನಾನು ಸಿದ್ಧನಿದ್ದೇನೆ, ಅಗತ್ಯವಿದ್ದರೆ ಈ ಮೊತ್ತವನ್ನು ಹೆಚ್ಚಿಸಲಾಗುತ್ತದೆ. ಆದರೆ ಯಾರೂ ಮದ್ಯದ ವ್ಯವಹಾರದಲ್ಲಿ ತೊಡಗಬಾರದು’ ಎಂದು ನಿತೀಶ್​ ಕುಮಾರ್ ಹೇಳಿದ್ದಾರೆ.

    ‘ನಕಲಿ ಮದ್ಯಪಾನ ಮಾಡಿದ ಜನ ಸತ್ತರೆ ಅವರಿಗೆ ಪರಿಹಾರ ನೀಡಬೇಕು. ನಕಲಿ ಮದ್ಯ ಸೇವಿಸಿದವರು ಸಾಯುತ್ತಾರೆ. ಈಗ ಉದಾಹರಣೆ ನಮ್ಮ ಮುಂದಿದೆ. ಇದಕ್ಕೆ ನಾವು ಸಂತಾಪ ಸೂಚಿಸಬೇಕು. ಜೊತೆಗೆ ಆ ಸ್ಥಳಗಳಿಗೆ ಭೇಟಿ ನೀಡಬೇಕು’ ಎಂದು ಅವರ ಕ್ರಮಗಳ ಬಗ್ಗೆ ವಿವರಿಸಿದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts