More

    ಝೆರೊಧಾ ಕಂಪನಿ ಸಂಸ್ಥಾಪಕ ನಿತಿನ್​ ಕಾಮತ್​ಗೆ ಸ್ಟ್ರೋಕ್​: ಫಿಟ್​ ಆಗಿದ್ರೂ ಹಿಂಗ್ಯಾಕಾಯ್ತು?

    ನವದೆಹಲಿ: ಭಾರತದ ಅತಿದೊಡ್ಡ ಸ್ಟಾಕ್ ಬ್ರೋಕರ್ ಕಂಪನಿ “ಝೆರೊಧಾ” ಸಂಸ್ಥಾಪಕ ನಿತಿನ್​ ಕಾಮತ್​ ಅವರು​ ಆರು ವಾರಗಳ ಹಿಂದಷ್ಟೇ “ಲಘು ಸ್ಟ್ರೋಕ್”​ನಿಂದ ಬಳಲಿದ್ದಾಗಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಸೋಮವಾರ (ಫೆ.26) ಬಹಿರಂಗಪಡಿಸಿದ್ದಾರೆ. ಸ್ಟ್ರೋಕ್​ಗೆ ಕಾರಣ ಏನೆಂಬುದನ್ನು ನಿತಿನ್​ ಕಾಮತ್​ ಸ್ಪಷ್ಟವಾಗಿ ದೃಢೀಕರಿಸದಿದ್ದರೂ, ಅನೇಕ ಅಂಶಗಳು ಇದಕ್ಕೆ ಕಾರಣವಾಗಿರಬಹುದು ಎಂದು ಹೇಳಿದ್ದಾರೆ.

    ಸುಮಾರು 6 ವಾರಗಳ ಹಿಂದೆ ನಾನು ಸೌಮ್ಯ ಸ್ವಭಾವದ ಸ್ಟ್ರೋಕ್​ನಿಂದ ಬಳಲಿದೆ. ತಂದೆಯ ನಿಧನದ ಚಿಂತೆ, ಕಳಪೆ ನಿದ್ರೆ, ನಿಶ್ಯಕ್ತಿ, ನಿರ್ಜಲೀಕರಣ ಮತ್ತು ಅತಿಯಾದ ಕೆಲಸ, ಇವುಗಳಲ್ಲಿ ಯಾವುದಾದರೂ ಸಂಭವನೀಯ ಕಾರಣಗಳಾಗಿರಬಹುದು ಎಂದು ಕಾಮತ್​ ತಮ್ಮ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಬರೆದುಕೊಂಡಿದ್ದಾರೆ.

    ತಮ್ಮ ಮುಖ ಇಳಿಬೀಳುತ್ತಿರುವುದನ್ನು ಕಾಮತ್ ಮೊದಲು​ ಗಮನಿಸಿದರು ಮತ್ತು ಅಂದಿನಿಂದ ಓದಲು ಮತ್ತು ಬರೆಯಲು ತುಂಬಾ ಕಷ್ಟಪಡಬೇಕಾಯಿತು. 3 ರಿಂದ 6 ತಿಂಗಳೊಳಗೆ ಸಂಪೂರ್ಣ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಕಾಮತ್​ ವ್ಯಕ್ತಪಡಿಸಿದ್ದಾರೆ.

    ಅಂದಹಾಗೆ ಕಾಮತ್ ಅವರು ಫಿಟ್ನೆಸ್ ಕಾಪಾಡಿಕೊಳ್ಳುವ ಮಹತ್ವದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಬಾರಿ ಬಹಿರಂಗವಾಗಿ ಮಾತನಾಡಿದ್ದಾರೆ. ಆದಾಗ್ಯೂ, ಸ್ಟ್ರೋಕ್​ ಅನುಭವಿಸಿದ ಅವರು ತಮ್ಮ ಅಭ್ಯಾಸಗಳನ್ನು ಮರುಪರಿಶೀಲಿಸಬೇಕಿದೆ ಒಪ್ಪಿಕೊಂಡರು. ಫಿಟ್ ಆಗಿರುವ ಮತ್ತು ತನ್ನು ಬಗ್ಗೆ ಆರೋಗ್ಯ ಕಾಳಜಿ ವಹಿಸುವ ವ್ಯಕ್ತಿಯ ಮೇಲೆ ಸ್ಟ್ರೋಕ್​ ಏಕೆ ಪರಿಣಾಮ ಬೀರಿತು ಎಂಬುದನ್ನು ಚಿಂತಿಸಿದಾಗ ನನಗೆ ಆಶ್ಚರ್ಯವಾಗುತ್ತದೆ ಎಂದಿದ್ದಾರೆ.

    ಸದ್ಯ ಕಾಮತ್​ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಸಂಪೂರ್ಣ ಗುಣಮುಖರಾದ ಬಳಿಕ ಮತ್ತೆ ಕೆಲಸ ಕಡೆ ಗಮನ ಹರಿಸಲಿದ್ದಾರೆ. (ಏಜೆನ್ಸೀಸ್​)

    ಪದ್ಮಶ್ರೀ ಪುರಸ್ಕೃತ ಪ್ರಖ್ಯಾತ ಗಝಲ್ ಗಾಯಕ ಪಂಕಜ್ ಉದಾಸ್ ನಿಧನ

    ಪ್ರಾಣಿ ಸಂಕುಲಕ್ಕೆ ಜೀವನಾಡಿ ವಂತಾರಾ ಯೋಜನೆ: ಅನಂತ್​ ಅಂಬಾನಿ ಘೋಷಣೆ, ಭಾರತದಲ್ಲಿ ಇದೇ ಮೊದಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts