ಪದ್ಮಶ್ರೀ ಪುರಸ್ಕೃತ ಪ್ರಖ್ಯಾತ ಗಝಲ್ ಗಾಯಕ ಪಂಕಜ್ ಉದಾಸ್ ನಿಧನ

ನವದೆಹಲಿ: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಖ್ಯಾತ ಗಝಲ್ ಗಾಯಕ ಪಂಕಜ್ ಉದಾಸ್ ಅವರು ಚಿಕಿತ್ಸೆ ಫಲಿಸದೇ ಇಂದು (ಫೆ.26) ಇಹಲೋಕ ತ್ಯಜಿಸಿರುವುದಾಗಿ ಅವರ ಕುಟುಂಬ ಖಚಿತಪಡಿಸಿದೆ. ಭಾರವಾದ ಹೃದಯದೊಂದಿಗೆ ಪದ್ಮಶ್ರೀ ಪುರಸ್ಕೃತ, ಗಾಯಕ ಪಂಕಜ್​ ಉದಾಸ್​ ಅವರು ದೀರ್ಘಕಾಲದ ಅನಾರೋಗ್ಯದ ಕಾರಣದಿಂದ ಫೆ. 26ರಂದು ಮೃತಪಟ್ಟಿದ್ದಾರೆಂದು ನಿಮಗೆ ತಿಳಿಸಲು ತುಂಬಾ ದುಃಖವಾಗುತ್ತಿದೆ ಎಂದು ಉದಾಸ್​ ಕುಟುಂಬ ಹೇಳಿಕೆಯಲ್ಲಿ ತಿಳಿಸಿದೆ. ಇಂದು ಬೆಳಗ್ಗೆ 11 ಗಂಟೆಗೆ ಮುಂಬೈನ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯಲ್ಲಿ ಉದಾಸ್​ ಕೊನೆಯುಸಿರೆಳೆದರು. ಮೂಲಗಳ ಪ್ರಕಾರ ಉದಾಸ್​ … Continue reading ಪದ್ಮಶ್ರೀ ಪುರಸ್ಕೃತ ಪ್ರಖ್ಯಾತ ಗಝಲ್ ಗಾಯಕ ಪಂಕಜ್ ಉದಾಸ್ ನಿಧನ