More

    ನಾವೆಲ್ಲರೂ ಒಂದು, ವಿಶ್ವವೇ ನಮ್ಮ ಬಂಧು

    ಝಳಕಿ: ಸಮಾಜದಲ್ಲಿರುವ ಒಳಪಂಗಡಗಳನ್ನು ಮರೆತು ವೀರಶೈವ ಲಿಂಗಾಯತರು ನಾವೆಲ್ಲರೂ ಒಂದು, ವಿಶ್ವವೇ ನಮ್ಮ ಬಂಧು ಎಂದು ಭಾವಿಸಬೇಕೆಂದು ಶ್ರೀಶೈಲ ಪೀಠದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.
    ಸಮೀಪದ ಶಿಗಣಾಪುರದ ರುದ್ರ ಮಹಾಶಿವಯೋಗಿಗಳ 17ನೇ ಜಾತ್ರಾ ಮಹೋತ್ಸವದಲ್ಲಿ ಶನಿವಾರ ಮಹಾದ್ವಾರದ ಉದ್ಘಾಟನೆ, ಕಲಶಾರೋಹಣ ನೆರವೇರಿಸಿದ ನಂತರ ಧರ್ಮಸಭೆ ಉದ್ಘಾಟಿಸಿ ಅವರು ಮಾತನಾಡಿದರು.
    ಸಮಾಜದಲ್ಲಿ ಕನಿಷ್ಠರು, ಮಧ್ಯಮರು ಹಾಗೂ ಉತ್ತಮರು ಎಂಬ ಮೂರು ವರ್ಗದವರಿದ್ದಾರೆ. ಮುಂಬರುವ ಕೆಲಸಗಳನ್ನು ನೆನೆಸಿಕೊಂಡು ಭಯಪಟ್ಟು ಕೆಲಸ ಮಾಡದಿರುವವರು ಕನಿಷ್ಠರು ಅಥವಾ ಕೆಳವರ್ಗದವರು, ಯಾವುದೋ ಒಂದು ಕಷ್ಟದ ಕೆಲಸ ಬಂದಾಗ ಅರ್ಧಕ್ಕೆ ನಿಲ್ಲಿಸಿ ಕೈ ಬಿಡುವ ಜನರನ್ನು ಮಧ್ಯಮರು ಹಾಗೂ ಸಾವಿರ ಸಾವಿರ ಸಂಕಷ್ಟಗಳು ಬಂದರೂ ಎದೆಗುಂದದೆ ಹಿಡಿದ ಕೆಲಸ ಮಾಡಿ ತೋರಿಸುವ ಛಲಗಾರರನ್ನು ಉತ್ತಮರು ಎನ್ನುತ್ತಾರೆ ಎಂದರು.
    ವೀರಶೈವ ಲಿಂಗಾಯತರಿಗೂ 856 ಎಂಬ ಸಂಕೇತವಿದೆ. ಪ್ರತಿಯೊಬ್ಬರೂ ತಮ್ಮ ಮನೆಗಳ ಹಾಗೂ ವಾಹನಗಳ ಮೇಲೆ ನಮೂದಿಸಿ ನಾವೆಲ್ಲರೂ ವೀರಶೈವ ಲಿಂಗಾಯತರು ಎಂದು ಬಿಂಬಿಸುವಂತೆ ಮಾಡಬೇಕು ಎಂದರು.
    ಜೈನಾಪುರದ ರೇಣುಕ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.
    ಮಾಳಕೋಟಿಗಿಯ ಷಡಕ್ಷರಿ ಶಿವಾಚಾರ್ಯರು, ಉಮರಾಣಿಯ ಅಕ್ಕಮಹಾದೇವಿ ಅಮ್ಮನವರು, ಮಲ್ಲಿಕಾರ್ಜುನ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
    ಜೆಡಿಎಸ್ ಮುಖಂಡ ಎಂ.ಆರ್. ಪಾಟೀಲ, ಜಿಪಂ ಮಾಜಿ ಉಪಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ ಮಾತನಾಡಿದರು.
    ಬಿಜೆಪಿ ಮುಖಂಡ ಉಮೇಶ ಕಾರಜೋಳ, ತಾಪಂ ಸದಸ್ಯರಾದ ರಾಜು ಝಳಕಿ, ಗಣಪತಿ ಬಾಣಿಕೋಲ, ಮುಖಂಡರಾದ ರಾಜಶೇಖರ ಸಾಹುಕಾರ(ಕಾತ್ರಾಳ್), ಲಾಯಪ್ಪ ದೊಡಮನಿ, ಗ್ರಾಪಂ ಸದಸ್ಯ ಗಂಗಾಧರ ಹಿರೇಮಠ, ಕಲ್ಲನಗೌಡ ಬಿರಾದಾರ, ಭೀಮನಗೌಡ ಪಾಟೀಲ(ಧೂಮಕನಾಳ), ಸಿದ್ದು ಕಟ್ಟಿಮನಿ, ಶ್ರೀಪತಿಗೌಡ ಪಾಟೀಲ, ತುಕಾರಾಮ ಶಿಂಧೆ, ಜಾತ್ರಾ ಕಮಿಟಿ ಸದಸ್ಯರು ಇದ್ದರು.
    ಕೆಎಂಎಫ್ ಅಧ್ಯಕ್ಷ ರವಿಗೌಡ ಬಿರಾದಾರ, ಪ್ರಕಾಶಗೌಡ ಪಾಟೀಲ ನಿರೂಪಿಸಿ, ಸ್ವಾಗತಿಸಿದರು.

    ಭಾವಚಿತ್ರ ಮೆರವಣಿಗೆ

    ಇದಕ್ಕೂ ಮುನ್ನ ರುದ್ರ ಮಹಾಶಿವಯೋಗಿಗಳ ಭಾವಚಿತ್ರ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು. 251 ಪೂರ್ಣಕುಂಭ ಹೊತ್ತ ಮಹಿಳೆಯರು, ವಿವಿಧ ವಾದ್ಯ ಮೇಳಗಳ ಕಲಾ ತಂಡದವರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts