More

    ಬಿಜೆಪಿ ಜನಪರವಲ್ಲ, ಜೆಡಿಎಸ್ ಅವಕಾಶವಾದಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ, ಪಾದಯಾತ್ರೆಗೆ ಚಾಲನೆ

    ಮಡಿವಾಳ: ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನರನ್ನು ವಂಚಿಸುತ್ತಿರುವ ಬಿಜೆಪಿ ಸರ್ಕಾರವನ್ನು ಕಿತ್ತೆಸೆದು, ಅವಕಾಶವಾದಿ ಜೆಡಿಎಸ್ ಅನ್ನು ನಿರ್ಲಕ್ಷಿಸಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಜನಪರವಾದ ಕಾಂಗ್ರೆಸ್ ಬೆಂಬಲಿಸಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

    ತೊರ‌್ನಹಳ್ಳಿ ಗ್ರಾಮದ ಸಪ್ಪಲಾಂಬ ದೇವಿಗೆ ಶನಿವಾರ ಪೂಜೆ ಸಲ್ಲಿಸಿ ಪಾದಯಾತ್ರೆಗೆ ಚಾಲನೆ ನೀಡಿ, ತಾಲೂಕಿನ ಶಿವಾರ ಪಟ್ಟಣ ಗ್ರಾಮದ ಶಾಲಾ ಮೈದಾನದಲ್ಲಿ ಅಮೃತ ಮಹೋತ್ಸವ ಪ್ರಯುಕ್ತ ಮಾಲೂರು ಮಾಸ್ತಿ ಬ್ಲಾಕ್ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಪಾದಯಾತ್ರೆ ಮತ್ತು ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಕಾಂಗ್ರೆಸ್ ಸ್ವಾತಂತ್ರ್ಯೋತ್ಸವವನ್ನು ಅಮೃತ ಮಹೋತ್ಸವ ಕಾರ್ಯಕ್ರಮವನ್ನಾಗಿ ಭಕ್ತಿಯಿಂದ ಆಚರಣೆ ಮಾಡುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳು ಕಳೆದಿದೆ. 1885ರಲ್ಲಿ ಪ್ರಾರಂಭವಾದ ಕಾಂಗ್ರೆಸ್‌ನ ತ್ಯಾಗ ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿತು. 1925ರಲ್ಲಿ ಉಗಮವಾದ ಆರ್‌ಎಸ್‌ಎಸ್ ಜಾತಿ, ಜನಾಂಗ, ಧರ್ಮ, ತತ್ವ ಸಿದ್ಧಾಂತ, ವರ್ಣ ಶ್ರುತಿ ಚೌತವರ್ಣ ಎಂದು ವಿಂಗಡಣೆ ಮಾಡಿತು. ರಾಜ್ಯ ಹಾಗೂ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯೂ ಸ್ವಾತಂತ್ರ್ಯ್ರದ ಒಂದು ಭಾಗವಾಗಿರಲಿಲ್ಲ. ಬಿಜೆಪಿಯವರದು ಜನಸಂಘ. ಆದು ಸ್ಥಾಪನೆಯಾಗುವ ಹೊತ್ತಿಗೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತು. ಹೆಡಗೆವಾರ್, ಸಾವರ್ಕರ್, ಗೋಳವಳಕರ್ ಸ್ವಾತಂತ್ರ್ಯ ಹೋರಾಟದ ಭಾಗವಾಗಿರಲಿಲ್ಲ, ಬ್ರಿಟಿಷರ ತೆ ಶಾಮೀಲಾಗಿದ್ದರು ಎಂದು ಚಾಟಿ ಬೀಸಿದರು.

    ನಮ್ಮ ಸರ್ಕಾರ ನೀಡಿರುವ ಜನಪರ ಯೋಜನೆಗಳನ್ನು ಕಡಿತಗೊಳಿಸಿ ಜನರನ್ನು ಬಿಜೆಪಿ ವಂಚಿಸುತ್ತಿದೆ ಎಂದು ಹರಿಹಾಯ್ದ ಸಿದ್ದರಾಮಯ್ಯ , ಆ.15ರಂದು ಕಾಂಗ್ರೆಸ್‌ನಿಂದ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
    ಶಾಸಕ ಕೆ.ಆರ್.ರಮೇಶ್ ಕುಮಾರ್ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಬಿಜೆಪಿ, ಜನಸಂಘದ ಕೊಡುಗೆ ಏನೂ ಇಲ್ಲ. ಸಂವಿಧಾನ ಜಾರಿಗೆ ಬಂದ ನಂತರ ಎಲ್ಲರೂ ಸಮಾನರು, ಮುಕ್ತ ಅವಕಾಶ ಸಿಕ್ಕಿದೆ, ದೇಶದ ಸ್ವಾತಂತ್ರ್ಯ ಕಳೆದುಕೊಳ್ಳಬಾರದು, ಸಂವಿಧಾನ ಕಾಪಾಡಿಕೊಳ್ಳಬೇಕು ಎಂದರು.

    ಮಾಲೂರು ಶಾಸಕ, ವಿಧಾನಪರಿಷತ್ ಸದಸ್ಯ ನಜೀರ್ ಅಹ್ಮದ್ ಪ್ರಾಸ್ತಾವಿಕ ಮಾತನಾಡಿದರು.

    ಕೋಲಾರ ಶಾಸಕ ಶ್ರೀನಿವಾಸಗೌಡ, ವಿಧಾನಪರಿಷತ್ ಸದಸ್ಯ ಅನಿಲ್ ಕುಮಾರ್, ನಾರಾಯಣಸ್ವಾಮಿ, ಮಾಜಿ ಶಾಸಕ ಕೊತ್ತೂರ್ ಮಂಜುನಾಥ್, ಎ.ನಾಗರಾಜು, ತಾಲೂಕು ಉಸ್ತುವಾರಿ ಮುನಿಸ್ವಾಮಿ, ಪುರಸಭಾ ಅಧ್ಯಕ್ಷೆ ಭವ್ಯಾ ಶಂಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂಜಿ ಮಧುಸೂದನ್, ವಿಜಯ ನರಸಿಂಹ, ಕೆಪಿಸಿಸಿ ಕಾರ್ಯದರ್ಶಿ ಸಿ.ಲಕ್ಷ್ಮೀನಾರಾಯಣ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರತ್ನಮ್ಮ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಜಾಕೀರ್ ಖಾನ್, ಅಶ್ವತರೆಡ್ಡಿ, ಚನ್ನರಾಯಪ್ಪ, ಅಂಜನಿ ಸೋಮಣ್ಣ, ಅಶೋಕ್ ಕುಮಾರ್, ಜಗನ್ನಾಥಾಚಾರಿ, ತೊರ‌್ನಹಳ್ಳಿ ಗ್ರಾಪಂ ಅಧ್ಯಕ್ಷ ಮುನಿಯಪ್ಪ, ಬಿ.ಎನ್.ಆನಂದ್ ಕುಮಾರ್, ಮಂಜುನಾಥ್ ಮತ್ತಿತರರಿದ್ದರು.

    ಸಂವಿಧಾನ ಬೇಡ ಎನ್ನುತ್ತಾರೆ: ಬಿಜೆಪಿಯವರು ದೇಶದ ಸ್ವಾತಂತ್ರ್ಯಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಆದರೂ ಸಹ 75 ವರ್ಷಗಳ ಅಮೃತ ಮಹೋತ್ಸವ ಅಂಗವಾಗಿ ಹರ್ ಘರ್ ತಿರಂಗಾ ಎಂದು ಮನೆ ಮನೆಯ ಮೇಲೆ ತ್ರಿವರ್ಣಧ್ವಜ ಹಾರಿಸಲು ಬಿಜೆಪಿಯವರಿಗೆ ನೈತಿಕತೆ ಇಲ್ಲ. ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಂವಿಧಾನ ಬೇಡ ಎಂದು ಆರ್‌ಎಸ್‌ಎಸ್‌ನವರು ಹೇಳುತ್ತಿದ್ದಾರೆ. ಅದರ ತೀರ್ಮಾನ ಜನರ ಕೈಯಲ್ಲೇ ಇದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

    ಸ್ಫರ್ಧೆ ಬಗ್ಗೆ ತೀರ್ಮಾನಿಸಿಲ್ಲ: ಕೋಲಾರ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ನಗರದಿಂದ ಸ್ಪರ್ಧಿಸಲು ಮನವಿ ಮಾಡುತ್ತಿದ್ದು, ಇನ್ನೂ ತೀರ್ಮಾನಿಸಿಲ್ಲ. ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿ ತೀರ್ಮಾನಿಸಲಾಗುವುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts