More

    ಶೈಕ್ಷಣಿಕ ಪ್ರಗತಿಗೆ ಟ್ಯಾಬ್ ಬಳಕೆ ಸಹಕಾರಿ

    ಝಳಕಿ: ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸರ್ಕಾರ ಅಗತ್ಯ ನೆರವು ನೀಡುತ್ತಿದೆ. ಅವುಗಳ ಸದುಪಯೋಗ ಪಡೆದುಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಿ ಎಂದು ಗ್ರಾ.ಪಂ. ಅಧ್ಯಕ್ಷ ಸಣ್ಣಪ್ಪ ತಳವಾರ ಹೇಳಿದರು.

    ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳಿಗೆ ಬುಧವಾರ ಟ್ಯಾಬ್ ವಿತರಿಸಿ ಅವರು ಮಾತನಾಡಿದರು.
    ಶಿಕ್ಷಣದ ವಿಷಯದಲ್ಲಿ ಸರ್ಕಾರ ಹೆಚ್ಚಿನ ಕಾಳಜಿ ವಹಿಸಿದೆ. ವಿದ್ಯಾರ್ಥಿಗಳು ಸರ್ಕಾರ ವಿತರಿಸಿದ ಟ್ಯಾಬ್‌ಗಳನ್ನು ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಿ ಎಂದು ಹೇಳಿದರು.

    ಪ್ರಾಚಾರ್ಯ ಶಿವಪುತ್ರ ಜವಳಿ ಮಾತನಾಡಿ, ಕಾಲೇಜಿನಲ್ಲಿ ಸಿವಿಲ್, ಮೆಕ್ಯಾನಿಕಲ್, ಎಲೆಕಟ್ಟೆಾನಿಕ್, ಕಂಪ್ಯೂಟರ್ ಸೈನ್ಸ್ ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ವರ್ಕ್‌ಶಾಪ್ ಕಟ್ಟಡವು ಪೂರ್ಣಗೊಂಡಿದ್ದು, ಅದನ್ನು ಲ್ಯಾಂಡ್ ಆರ್ಮಿಯವರು ಗುತ್ತಿಗೆಯಲ್ಲಿ ಕಟ್ಟಲಾಗಿದ್ದು, ಅಂದಾಜು 7 ವರ್ಷಗಳಿಂದ ಕಟ್ಟಡವನ್ನು ನಮಗೆ ಹಸ್ತಾಂತರಿಸಿಲ್ಲ. ಕಾಲೇಜಿನಲ್ಲಿ ಸದ್ಯ ಕೇವಲ 7 ಕೊಠಡಿಗಳಿವೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ತೊಂದರೆಯಾಗುತ್ತಿದೆ. ಆದರಿಂದ ಕಟ್ಟಡ ಬಳಕೆಗೆ ಅನುಮತಿ ನೀಡಬೇಕು ಎಂದರು.

    ಸರ್ಕಾರದಿಂದ ಎರಡು ವಸತಿ ನಿಲಯ ಕಟ್ಟಲು ರೈಟ್ಸ್ ಕಂಪನಿಗೆ ಅನುಮೋದನೆ ನೀಡಿದ್ದರೂ ಇಲ್ಲಿವರೆಗೆ ಬಾಲಕರ ವಸತಿ ನಿಲಯದ ಕಟ್ಟಡ ಕಾಮಗಾರಿ ಪ್ರಾರಂಭವಾಗಿಲ್ಲ. ಅದರಂತೆ ಬಾಲಕಿಯರ ವಸತಿ ನಿಲಯದ ಕಾಮಗಾರಿ 3 ವರ್ಷಗಳಿಂದ ಪ್ರಗತಿಯಲ್ಲಿದ್ದು, ಇನ್ನೂ ಪೂರ್ಣಗೊಂಡಿಲ್ಲ. ಕಾಲೇಜು ಆವರಣದಲ್ಲಿ ದೀಪಗಳ ಅಳವಡಿಕೆ ಹೀಗೆ ಹಲವಾರು ಬೇಡಿಕೆಗಳಿದ್ದು, ಅವನ್ನು ಪೂರೈಸಬೇಕೆಂಬ ಮನವಿಯನ್ನು ಗ್ರಾಪಂ ಅಧ್ಯಕ್ಷ ಸಣ್ಣಪ್ಪ ತಳವಾರ ಮೂಲಕ ಶಾಸಕರಿಗೆ ಮನವಿ ಸಲ್ಲಿಸಿದರು.

    ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸತೀಶ ಪಾಟೀಲ, ನಾರಾಯಣ ಜಾಹಾಗೀರದಾರ್, ಶಂಕರಗೌಡ ಬಿರಾದಾರ, ರಾಘವೇಂದ್ರ ಕೆಂಗಾರ, ರವಿಕುಮಾರ ಹೂಗಾರ, ಪವನ ಪಾಟೀಲ, ಹಾಗೂ ಶಿಕ್ಷಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts