More

    ಪರಿಸ್ಥಿತಿ ಹೀಗಿರುವಾಗ ಗೆಲುವು ನಿರೀಕ್ಷಿಸಬಹುದೇ? ಪಾಕ್​ ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟ ಮಾಜಿ ನಾಯಕ

    ನವದೆಹಲಿ: ಭಾರತದಲ್ಲಿ ನಡೆಯುತ್ತಿರುವ ಪ್ರಸಕ್ತ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ಅತ್ಯಂತ ಕಳಪೆ ನಿರ್ವಹಣೆ ತೋರಿದೆ. ಮೊದಲ ಎರಡು ಪಂದ್ಯಗಳನ್ನು ಬಿಟ್ಟರೆ ಉಳಿದೆಲ್ಲ ಪಂದ್ಯಗಳಲ್ಲಿ ಹೀನಾಯ ಸೋಲನ್ನು ಅನುಭವಿಸಿದೆ. ಇದುವರೆಗೂ 6 ಪಂದ್ಯಗಳನ್ನು ಆಡಿರುವ ಪಾಕ್​, ಎರಡರಲ್ಲಿ ಗೆಲುವು ಸಾಧಿಸಿ, 4ರಲ್ಲಿ ಬ್ಯಾಕ್​ ಟು ಬ್ಯಾಕ್​ ಸೋಲು ಅನುಭವಿಸಿದೆ. ಇದರಿಂದಾಗಿ ಪಾಕಿಸ್ತಾನದ ಸಮಿಫೈನಲ್​ ಹಾದಿ ಬಹುತೇಕ ಮುಚ್ಚಿದಂತಿದೆ.

    ಪಾಕಿಸ್ತಾನ ನಿರಂತರ ಸೋಲಿನಿಂದಾಗಿ ನಾಯಕ ಬಾಬರ್​ ಅಜಾಮ್​ ಸೇರಿದಂತೆ ತಂಡದ ಇತರೆ ಆಟಗಾರರು ತೀವ್ರ ಟೀಕೆ ಗುರಿಯಾಗಿದ್ದಾರೆ. ಪಾಕ್​ ಕ್ರೀಡಾಭಿಮಾನಿಗಳು ಮತ್ತು ಮಾಜಿ ಆಟಗಾರರು ತಮ್ಮ ಆಟಗಾರರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ನಾಯಕ ರಶೀದ್​ ಲತೀಫ್​ ಅವರು ಆಟಗಾರರ ಪರ ಬ್ಯಾಟ್​ ಬೀಸಿದ್ದು, ವಿಶ್ವಕಪ್​ ಸೋಲಿಗೆ ಪಾಕಿಸ್ತಾನ ಕ್ರಿಕೆಟ್​ ಬೋರ್ಡ್​ ಕಡೆ ಬೊಟ್ಟು ಮಾಡಿದ್ದಾರೆ.

    ಪಾಕ್​ ಆಟಗಾರರಿಗೆ ಕಳೆದ ಐದು ತಿಂಗಳಿಂದ ಸಂಬಳವನ್ನೇ ನೀಡಿಲ್ಲ. ನಾಯಕ ಬಾಬರ್​ ಅಜಾಮ್​ ಭಾರತದಿಂದಲೇ ಬೋರ್ಡ್​ನ ಹಿರಿಯರನ್ನು ಸಂಪರ್ಕಿಸಲು ಯತ್ನಿಸಿದರು ಆದರೆ, ಯಾರೊಬ್ಬರು ಬಾಬರ್​ ಕಡೆ ಗಮನ ಹರಿಸಲಿಲ್ಲ ಎಂದು ಇತ್ತೀಚೆಗೆ ನೀಡಿದ ಮಾಧ್ಯಮ ಸಂದರ್ಶನವೊಂದರಲ್ಲಿ ರಶೀದ್​ ಲತೀಫ್​ ಆರೋಪ ಮಾಡಿದ್ದಾರೆ.

    ಬಾಬರ್ ಅಜಾಮ್​ ಅವರು ಕಳೆದ ಎರಡು ದಿನಗಳ ಹಿಂದೆ ಪಾಕಿಸ್ತಾನ ಕ್ರಿಕೆಟ್​ ಬೋರ್ಡ್​ ಚೇರ್ಮನ್​ಗೆ ಮೆಸೇಜ್​ ಮಾಡಿದ್ದಾರೆ. ಆದರೆ, ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಅಲ್ಲದೆ, ಬೋರ್ಡ್​ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಲ್ಮಾನ್​ ನಾಸೀರ್​ ಮತ್ತು ನಿರ್ದೇಶಕ ಉಸ್ಮಾನ್​ ವಾಲ್ಹಾ ಅವರನ್ನು ಸಂಪರ್ಕಿಸಲು ಯತ್ನಿಸಿದರು. ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಯಾಕೆ ಅವರು ಬಾಬರ್​ ಜತೆ ಮಾತನಾಡಲಿಲ್ಲ? ಇದಕ್ಕೆ ಕಾರಣ ಏನು? ಪಿಸಿಬಿಯಲ್ಲಿ ಏನು ನಡೆಯುತ್ತಿದೆ ಎಂದು ಅರ್ಥವಾಗುತ್ತಿಲ್ಲ ಎಂದು ಲತೀಫ್​ ತಿಳಿಸಿದ್ದಾರೆ.

    ವಿಶ್ವಕಪ್‌ಗೂ ಮುನ್ನ ಆಟಗಾರರು ಸಹಿ ಮಾಡಿದ ಕೇಂದ್ರ ಒಪ್ಪಂದಗಳನ್ನು ಮರುಪರಿಶೀಲಿಸುವುದಾಗಿ ಪಿಸಿಬಿ ಹೇಳಿದೆ. ಇದರಿಂದಾಗಿ ಕಳೆದ ಐದು ತಿಂಗಳಿನಿಂದ ಪಾಕಿಸ್ತಾನಿ ಆಟಗಾರರಿಗೆ ಸಂಬಳವೇ ಸಿಕ್ಕಿಲ್ಲ. ಅಲ್ಲದೆ, ನಾಯಕನ ಸಂಪರ್ಕಕ್ಕೂ ಯಾರೂ ಸಿಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಆಟಗಾರರಿಂದ ಉತ್ತಮ ಪ್ರದರ್ಶನವನ್ನು ನಾವು ಹೇಗೆ ನಿರೀಕ್ಷಿಸಬಹುದು ಎಂದು ಲತೀಫ್ ರಶೀದ್ ಅವರು ಪಿಸಿಬಿಯನ್ನು ದೂಷಿಸಿದರು. (ಏಜೆನ್ಸೀಸ್​)

    ಲಿಪ್​ಲಾಕ್​ ಬಗ್ಗೆ ಸುಳ್ಳು ಹೇಳಿ ಸಿಕ್ಕಿಬಿದ್ದ ನಟಿ ಶ್ರೀಲೀಲಾ! ವೈರಲ್​ ಆಗ್ತಿದೆ ಸೌತ್​ ಬ್ಯೂಟಿಯ ಹಳೇ ವಿಡಿಯೋ

    ಚಂದ್ರಗ್ರಹಣ ಹಿನ್ನೆಲೆ: ಕೇದಾರನಾಥ, ಬದರಿನಾಥ ದೇವಾಲಯಗಳ ಬಾಗಿಲು ತೆರೆಯುವುದು ಯಾವಾಗ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts