More

    ಚಂದ್ರಗ್ರಹಣ ಹಿನ್ನೆಲೆ: ಕೇದಾರನಾಥ, ಬದರಿನಾಥ ದೇವಾಲಯಗಳ ಬಾಗಿಲು ತೆರೆಯುವುದು ಯಾವಾಗ?

    ಚಂದ್ರಗ್ರಹಣದ ದೃಷ್ಟಿಯಿಂದ ಶ್ರೀ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿಯು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಸೂತಕದ ಅವಧಿಯು ಒಂಬತ್ತು ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಈ ಅವಧಿಯಲ್ಲಿ ಧಾಮಗಳಲ್ಲಿ ಪೂಜೆ ನಡೆಯುವುದಿಲ್ಲ.

    ಬೆಂಗಳೂರು: 2023 ರ ಕೊನೆಯ ಚಂದ್ರಗ್ರಹಣವು ಶನಿವಾರ (28 ಅಕ್ಟೋಬರ್) ಶರದ್ ಪೂರ್ಣಿಮೆಯಂದು ನಡೆಯುತ್ತಿದೆ. ಬೆಂಗಳೂರು ಸೇರಿದಂತೆ ದೇಶದ ಇತರ ನಗರಗಳಲ್ಲಿ ಚಂದ್ರಗ್ರಹಣವನ್ನು ಕಾಣಬಹುದು. ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಶ್ರೀ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ ಮಹತ್ವದ ನಿರ್ಧಾರ ಕೈಗೊಂಡಿದೆ. ಶನಿವಾರ ಸಂಜೆ 4 ಗಂಟೆಗೆ ಬದರಿನಾಥ ಮತ್ತು ಕೇದಾರನಾಥ ದೇವಾಲಯಗಳ ಬಾಗಿಲು ಮುಚ್ಚಲಾಗುವುದು.

    ಶ್ರೀ ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿಯ ಅಧ್ಯಕ್ಷ ಅಜೇಂದ್ರ ಅಜಯ್, ಚಂದ್ರಗ್ರಹಣದ ಸಮಯ 01:04 ಕ್ಕೆ ಮತ್ತು ಸೂತಕ ಅವಧಿಯು ಒಂಬತ್ತು ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ ಎಂದು ಹೇಳಿದರು. ಸೂತಕ ಕಾಲದಲ್ಲಿ ದೇವರನ್ನು ಪೂಜಿಸುವುದು ಅಶುಭವೆಂದು ಪರಿಗಣಿಸಲಾಗಿದೆ. ಹೀಗಾಗಿ ಬದರಿನಾಥ ಮತ್ತು ಕೇದಾರನಾಥ ದೇವಾಲಯಗಳನ್ನು ಸಂಜೆ 4 ಗಂಟೆಗೆ ಮುಚ್ಚಲಾಗುತ್ತದೆ. ಈ ಅವಧಿಯಲ್ಲಿ ಧಾಮಗಳಲ್ಲಿ ಪೂಜೆ ನಡೆಯುವುದಿಲ್ಲ ಎಂದರು.

    ದೇವಾಲಯಗಳನ್ನು ಮುಚ್ಚಲಾಗುವುದು
    ಭಕ್ತರಿಗೆ ಆರಾಧ್ಯ ದೇವರ ದರ್ಶನವೂ ಆಗುವುದಿಲ್ಲ. ಈ ನಿರ್ಧಾರವು ಶ್ರೀ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿಯ ವ್ಯಾಪ್ತಿಯಲ್ಲಿರುವ ಎಲ್ಲಾ ದೇವಾಲಯಗಳಿಗೂ ಅನ್ವಯಿಸುತ್ತದೆ ಎಂದು ಅವರು ಹೇಳಿದರು. ಭಾನುವಾರ ಅಂದರೆ ಅಕ್ಟೋಬರ್ 29 ರಂದು ಬೆಳಗ್ಗೆ ಶುದ್ಧೀಕರಣ ಪೂಜೆಯ ನಂತರ ಬ್ರಹ್ಮ ಮುಹೂರ್ತದಲ್ಲಿ ಬದರಿನಾಥ್ ಮತ್ತು ಕೇದಾರನಾಥ ದೇವಾಲಯಗಳ ಬಾಗಿಲು ತೆರೆಯಲಾಗುವುದು ಎಂದು ಅಜೇಂದ್ರ ಅಜಯ್ ಹೇಳಿದರು.

    ಇದನ್ನೂ ಓದಿ: Lunar Eclipse 2023: ಚಂದ್ರಗ್ರಹಣ ಸಮಯದಲ್ಲಿ ಈ ಕೆಲಸ ಮಾಡಬಾರದಂತೆ…

    ಅಕ್ಟೋಬರ್ 29 ರಂದು ತೆರೆಯಲಿದೆ ಬಾಗಿಲು
    ನಿಗದಿತ ಸಮಯಕ್ಕೆ ಮಹಾಭಿಷೇಕ, ರುದ್ರಾಭಿಷೇಕ ಸೇರಿದಂತೆ ಎಲ್ಲ ಮುಂಜಾನೆ ಪೂಜೆಗಳು ನಡೆಯಲಿವೆ ಎಂದರು. ಶ್ರೀ ನರಸಿಂಹ ದೇವಸ್ಥಾನ ಜೋಶಿಮಠ, ಎರಡನೇ ಕೇದಾರ ಮದ್ಮಹೇಶ್ವರ, ಮೂರನೇ ಕೇದಾರ ತುಂಗನಾಥ, ಶ್ರೀ ಓಂಕಾರೇಶ್ವರ ದೇವಸ್ಥಾನ ಉಖಿಮಠ, ಯೋಗ ಬದ್ರಿ ಪಾಂಡುಕೇಶ್ವರ ಸೇರಿದಂತೆ ಇತರ ದೇವಸ್ಥಾನಗಳಲ್ಲಿ ಚಂದ್ರಗ್ರಹಣದ ಸಂದರ್ಭದಲ್ಲಿ ಇದೇ ರೀತಿಯ ಪೂಜೆ ವ್ಯವಸ್ಥೆಗಳನ್ನು ಮಾಡಲಾಗುತ್ತದೆ ಎಂದು ಅಜಯ್ ಹೇಳಿದರು.

    ಅಕ್ಟೋಬರ್ 28 ರಂದು ಚಂದ್ರಗ್ರಹಣವು ಮಧ್ಯರಾತ್ರಿ 01:04 ಕ್ಕೆ ಪ್ರಾರಂಭವಾಗುತ್ತದೆ. ಅಕ್ಟೋಬರ್ 28-29 ರ ಮಧ್ಯರಾತ್ರಿ ಸಂಭವಿಸುವ ಚಂದ್ರಗ್ರಹಣವು ವರ್ಷದ ಎರಡನೇ ಮತ್ತು ಕೊನೆಯದಾಗಿರುತ್ತದೆ.

    ಇಂದು ಈ ವರ್ಷದ ಕೊನೆಯ ಚಂದ್ರಗ್ರಹಣ; ಬರಿಗಣ್ಣಿನಿಂದ ನೋಡಬೇಕೇ ಅಥವಾ ಬೇಡವೇ?, ಇಲ್ಲಿದೆ ಸತ್ಯ ಹಾಗೂ ಮಿಥ್ಯೆಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts