More

    ಯುವರಾಜ್ ಸಿಂಗ್ ಕ್ರಿಕೆಟ್‌ಗೆ ಮರಳದಂತೆ ತಡೆಯೊಡ್ಡಿದ ಬಿಸಿಸಿಐ

    ನವದೆಹಲಿ: ಮುಂಬರುವ ದೇಶೀಯ ಕ್ರಿಕೆಟ್ ಋತುವಿನಲ್ಲಿ ಆಡುವ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವ ಸಿದ್ಧತೆಯಲ್ಲಿದ್ದ ಯುವರಾಜ್ ಸಿಂಗ್ ಅವರಿಗೆ ಬಿಸಿಸಿಐ ತಡೆಯೊಡ್ಡಿದೆ. ಇದರಿಂದಾಗಿ ಪಂಜಾಬ್ ಕ್ರಿಕೆಟ್ ಸಂಸ್ಥೆ, ಮುಂಬರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಗೆ ಪ್ರಕಟಿಸಿರುವ ಪಂಜಾಬ್ ತಂಡದಲ್ಲಿ ಯುವರಾಜ್ ಸಿಂಗ್‌ಗೆ ಸ್ಥಾನ ಕಲ್ಪಿಸಿಲ್ಲ. ಮಂದೀಪ್ ಸಿಂಗ್ ಅವರನ್ನು ತಂಡದ ನಾಯಕರನ್ನಾಗಿ ನೇಮಿಸಲಾಗಿದೆ.

    2007ರ ಟಿ20 ಮತ್ತು 2011ರ ಏಕದಿನ ವಿಶ್ವಕಪ್ ಗೆಲುವಿನ ಹೀರೋ ಯುವರಾಜ್ ಸಿಂಗ್, 2019ರ ಜೂನ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಪ್ರಕಟಿಸಿದ್ದರು. ಬಳಿಕ ಬಿಸಿಸಿಐನಿಂದ ಎನ್‌ಒಸಿ ಪಡೆದು ಕೆನಡದ ಗ್ಲೋಬಲ್ ಟಿ20 ಲೀಗ್ ಮತ್ತು ಅಬುಧಾಬಿ ಟಿ10 ಲೀಗ್‌ಗಳಲ್ಲಿ ಆಡಿದ್ದರು. ಇದೀಗ ಪಂಜಾಬ್ ಕ್ರಿಕೆಟ್ ಸಂಸ್ಥೆಯ ಒತ್ತಾಯದ ಮೇರೆಗೆ 39 ವರ್ಷದ ಯುವರಾಜ್ ಕ್ರಿಕೆಟ್‌ಗೆ ಮರಳಲು ಒಪ್ಪಿಕೊಂಡಿದ್ದರು. ಅಲ್ಲದೆ ಪಂಜಾಬ್‌ನ ಸಂಭಾವ್ಯ ತಂಡದಲ್ಲೂ ಅವರಿಗೆ ಸ್ಥಾನ ಕಲ್ಪಿಸಲಾಗಿತ್ತು. ಆದರೆ, ಬಿಸಿಸಿಐ ಒಪ್ಪಿಗೆ ಇಲ್ಲದ ಕಾರಣ 20ರ ಬಳಗದಲ್ಲಿ ಸ್ಥಾನ ಪಡೆದಿಲ್ಲ.

    ಇದನ್ನೂ ಓದಿ: ಆಸೀಸ್‌ಗೆ ತಿರುಗೇಟು, ಬಾಕ್ಸಿಂಗ್ ಡೇ ಟೆಸ್ಟ್ ಜಯಿಸಿದ ಭಾರತ ತಂಡ

    ನಿವೃತ್ತಿ ಹಿಂಪಡೆದು ದೇಶೀಯ ಕ್ರಿಕೆಟ್‌ನಲ್ಲಿ ಆಡಲು ಅವಕಾಶ ಕಲ್ಪಿಸಬೇಕೆಂದು ಯುವರಾಜ್, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಪತ್ರವನ್ನೂ ಬರೆದಿದ್ದರು. ಆದರೆ, ಬಿಸಿಸಿಐ ನಿಯಮಾವಳಿ ಅನ್ವಯ, ಸಕ್ರಿಯ ಕ್ರಿಕೆಟಿಗರು ವಿದೇಶಿ ಲೀಗ್‌ಗಳಲ್ಲಿ ಆಡಲು ಅವಕಾಶವಿಲ್ಲ. ಯುವಿ ನಿವೃತ್ತಿ ಪಡೆದು ವಿದೇಶಿ ಲೀಗ್‌ಗಳಲ್ಲಿ ಆಡಿದ ಬಳಿಕ ಮತ್ತೆ ಸಕ್ರಿಯ ಕ್ರಿಕೆಟ್‌ಗೆ ಮರಳಲು ಬಯಸಿರುವುದರಿಂದ ಬಿಸಿಸಿಐ ಅವರಿಗೆ ಅವಕಾಶ ನಿರಾಕರಿಸಿದೆ ಎನ್ನಲಾಗಿದೆ.

    ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಪಂಜಾಬ್ ತಂಡ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಹಾಲಿ ಚಾಂಪಿಯನ್ ಕರ್ನಾಟಕ ತಂಡವೂ ಇದೇ ಗುಂಪಿನಲ್ಲಿದೆ. ಜನವರಿ 10ರಿಂದ ಬೆಂಗಳೂರು ಹೊರವಲಯದ ಆಲೂರಿನಲ್ಲಿ ಪಂದ್ಯಗಳು ನಡೆಯಲಿವೆ. ಜಮ್ಮು-ಕಾಶ್ಮೀರ, ಉತ್ತರ ಪ್ರದೇಶ, ರೈಲ್ವೇಸ್ ಮತ್ತು ತ್ರಿಪುರ ಈ ಗುಂಪಿನಲ್ಲಿರುವ ಇತರ ತಂಡಗಳು.

    ಐಪಿಎಲ್ ಆಡಿದಲ್ಲಿಗೆ ಹನಿಮೂನ್‌ಗೆ ಹೋದ ಯಜುವೇಂದ್ರ ಚಾಹಲ್

    ಐಸಿಸಿ ದಶಕದ ತಂಡಗಳಿಗೆ ಭಾರತೀಯರದ್ದೇ ಸಾರಥ್ಯ, ಪಾಕ್ ಕ್ರಿಕೆಟಿಗರಿಗೆ ನಿರಾಸೆ!

    ವಿರಾಟ್ ಕೊಹ್ಲಿಗೆ ಐಸಿಸಿ ದಶಕದ ಕ್ರಿಕೆಟಿಗ ಪ್ರಶಸ್ತಿ, ಧೋನಿಗೂ ಐಸಿಸಿ ಗೌರವ

    ಎಂಎಸ್ ಧೋನಿ, ವಿರಾಟ್ ಕೊಹ್ಲಿ ಸಾಲಿಗೆ ಸೇರ್ಪಡೆಗೊಂಡ ರವೀಂದ್ರ ಜಡೇಜಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts