More

    ಇಂದಿನಿಂದ ‘ಯುವರತ್ನ’ನ ಯುವಘರ್ಜನೆ ಶುರು

    ಬೆಂಗಳೂರು: ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಇಂದು (ಏ.1) ಬಿಡುಗಡೆಯಾಗುತ್ತಿದೆ. 2019ರಲ್ಲಿ ಬಂದ ‘ನಟಸಾರ್ವಭೌಮ’ ನಂತರ ಪುನೀತ್ ಅಭಿನಯದ ಯಾವುದೇ ಚಿತ್ರ ಬಿಡುಗಡೆಯಾಗಿರಲಿಲ್ಲ. ಎರಡು ವರ್ಷಗಳ ನಂತರ ಅವರ ಚಿತ್ರವೊಂದು ಬಿಡುಗಡೆಯಾಗುತ್ತಿರುವುದರಿಂದ ಅಭಿಮಾನಿಗಳ ವಲಯದಲ್ಲಿ ಕುತೂಹಲ ಮತ್ತು ನಿರೀಕ್ಷೆಗಳು ಎರಡೂ ಹೆಚ್ಚಿವೆ.

    ‘ಯುವರತ್ನ’ ಚಿತ್ರವು ಕರ್ನಾಟಕದಲ್ಲಿ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಇನ್ನು ಆಂಧ್ರ ಮತ್ತು ತೆಲಂಗಾಣಗಳೆರೆಡೂ ಸೇರಿ 200 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದು, ಒಟ್ಟಾರೆ 600 ಚಿತ್ರಮಂದಿರಗಳಿಂದ ಪ್ರತಿದಿನ 2800ಕ್ಕೂ ಹೆಚ್ಚು ಪ್ರದರ್ಶನಗಳು ನಡೆಯಲಿವೆ.

    ಈ ಪೈಕಿ ಬೆಂಗಳೂರಿನ ಒರಾಯನ್ ಮಾಲ್​ನ ಪಿವಿಆರ್ ಚಿತ್ರಮಂದಿರದಲ್ಲಿ 31 ಪ್ರದರ್ಶನಗಳು ಕಾಣುತ್ತಿರುವುದು ಹೊಸ ದಾಖಲೆ ಎಂದು ಹೇಳಲಾಗುತ್ತಿದೆ. ಅದೇ ರೀತಿ ಶಿವಮೊಗ್ಗದ ಮಲ್ಟಿಪ್ಲೆಕ್ಸ್​ನಲ್ಲಿ ದಿನಕ್ಕೆ 20 ಪ್ರದರ್ಶನಗಳು ಕಾಣುತ್ತಿರುವುದು ಹೊಸ ದಾಖಲೆಯಂತೆ. ಚಿತ್ರದ ಬಗ್ಗೆ ಮಾತನಾಡುವ ಸಂತೋಷ್ ಆನಂದರಾಮ್ ‘ಉತ್ಸಾಹ, ಕುತೂಹಲ, ಖುಷಿ ಎಲ್ಲವೂ ಇದೆ. ಇದೊಂದು ಯೂಥ್​ಫುಲ್ ಕತೆ. ಇವತ್ತಿನ ಶೈಕ್ಷಣಿಕ ಪದ್ಧತಿಯ ಕುರಿತಾದ ಚಿತ್ರ. ಓದಿನ ಜತೆಗೆ ಮೌಲ್ಯ ಎಷ್ಟು ಮುಖ್ಯ ಎಂದು ಹೇಳುವ ಚಿತ್ರ. ದೊಡ್ಡ ಕ್ಯಾನ್ವಾಸ್​ನಲ್ಲಿ ಬಹಳ ನೈಜವಾಗಿ ಮೂಡಿಬಂದಿದೆ’ ಎನ್ನುತ್ತಾರೆ ಸಂತೋಷ್.

    ಇನ್ನು, ಚಿತ್ರದಲ್ಲಿ ಪುನೀತ್, ಪ್ರಕಾಶ್ ರೈ, ರಂಗಾಯಣ ರಘು, ಅಚ್ಯುತ್ ಕುಮಾರ್, ಅವಿನಾಶ್, ಸುಧಾರಾಣಿ, ದಿಗಂತ್, ಸೋನು ಸೇರಿ ಹಲವು ಜನಪ್ರಿಯ ನಟರ ದಂಡೇ ಇದೆ. ಇಂಥದ್ದೊಂದು ತಾರಾಗಣದ ಬಗ್ಗೆ ಮಾತನಾಡುವ ಸಂತೋಷ್, ‘ಯಾವ ಪಾತ್ರ ಸಹ ಸುಮ್ಮನೆ ಬಂದು ಹೋಗುವುದಿಲ್ಲ. ಎಲ್ಲ ಪಾತ್ರಗಳಿಗೂ ಪ್ರಾಮುಖ್ಯತೆ ಇದೆ. ಒಂದೊಳ್ಳೆಯ ವಿಷಯವನ್ನು ಜನರಿಗೆ ಮುಟ್ಟಿಸುವುದಕ್ಕೆ ಬರೀ ಜನಪ್ರಿಯ ಮುಖಗಳಷ್ಟೇ ಅಲ್ಲ, ಜನರ ಮನವೊಲಿಸುವ ನಟರ ಅವಶ್ಯಕತೆ ಇತ್ತು. ಹಾಗಾಗಿ ಅಂತಹ ಕಲಾವಿದರನ್ನು ಆಯ್ಕೆ ಮಾಡಿದ್ದೇವೆ’ ಎನ್ನುತ್ತಾರೆ . ‘ಯುವರತ್ನ’ ಚಿತ್ರಕ್ಕೆ ತೆಲುಗಿನ ಜನಪ್ರಿಯ ಸಂಗೀತ ನಿರ್ದೇಶಕ ಎಸ್.ಎಸ್. ತಮನ್ ಸಂಗೀತ ಸಂಯೋಜಿಸಿದ್ದು, ಚಿತ್ರವು ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

    ಎಸ್ತರ್ ಸಂಗೀತ ಸಾಹಸ; ನಟನೆಗೂ ಸೈ, ರಾಗ ಸಂಯೋಜನೆ ಜೈ..

    01

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts