More

    ಕಾರ್ಮಿಕರ ಒಕ್ಕೂಟಕ್ಕೆ ಪುನೀತ್​ 10 ಲಕ್ಷ, ಹೊಂಬಾಳೆ ಫಿಲಂಸ್​ 32 ಲಕ್ಷ ರೂ ನೆರವು

    ಬೆಂಗಳೂರು: ಕರೊನಾದಿಂದ ಚಿತ್ರರಂಗಕ್ಕೆ ಆಗಿರುವ ನಷ್ಟ ಬಹಳ ದೊಡ್ಡದು. ಸಿನಿಮಾ ರಂಗದ ಸಾವಿರಾರು ಕಾರ್ಮಿಕರು ಇಷ್ಟು ದಿವಸ ಕೆಲಸವಿಲ್ಲದೇ ಇದ್ದದ್ದು, ಇದೇ ಮೊದಲು ಎನ್ನಬಹುದು. ಇಂತಹ ಸಂದರ್ಭದಲ್ಲಿ ನೊಂದವರಿಗೆ ಉಪೇಂದ್ರ, ಯಶ್​ ಸೇರಿದಂತೆ ಹಲವರು ಆಸರೆಯಾಗಿದ್ದಾರೆ.

    ಇದನ್ನೂ ಓದಿ: ‘ಮದರಂಗಿ’ ಕೃಷ್ಣ ಹುಟ್ಟುಹಬ್ಬಕ್ಕೆ ‘ಶುಗರ್ ಫ್ಯಾಕ್ಟರಿ’ ಟೀಸರ್ …

    ಪ್ರಮುಖವಾಗಿ ಕಾರ್ಮಿಕರ ಒಕ್ಕೂಟದ ಮೂರು ಸಾವಿರಕ್ಕೂ ಹೆಚ್ಚು ಕಾರ್ಮಿಕರಿಗೆ ಉಪೇಂದ್ರ ದಿನಸಿ ಕಿಟ್​ಗಳನ್ನು ವಿತರಿಸಿದ್ದರು. ನಂತರ ಯಶ್​, ಮೂರು ಸಾವಿರ ಕಾರ್ಮಿಕರಿಗೆ ತಲಾ ಐದು ಸಾವಿರದಂತೆ ಖಾತೆಗೆ ಹಣ ಹಾಕಿದ್ದರು. ಈಗ ಪುನೀತ್​ ರಾಜಕುಮಾರ್​ ಮತ್ತು ಹೊಂಬಾಳೆ ಫಿಲಂಸ್​ನ ವಿಜಯ್​ಕುಮಾರ್​ ಕಿರಗಂದೂರು ಸಹ ಕಾರ್ಮಿಕರ ನೆರವಿಗೆ ಬಂದಿದ್ದಾರೆ.

    ಪುನೀತ್​ ರಾಜಕುಮಾರ್​, ಕನ್ನಡ ಚಲನಚಿತ್ರ ಕಾರ್ಮಿಕರ ಮತ್ತು ತಂತ್ರಜ್ಱರ ಒಕ್ಕೂಟದ ಸದಸ್ಯರಿಗೆ ಸಹಾಯವಾಗುವ ನಿಟ್ಟಿನಲ್ಲಿ 10 ಲಕ್ಷ ರೂ.ಗಳನ್ನು ದೇಣಿಗೆ ನೀಡಿದರೆ, ವಿಜಯ್​ಕುಮಾರ್​ ಕಿರಗಂದರೂ 32 ಲಕ್ಷ ರೂ.ಗಳ ದೇಣಿಗೆ ನೀಡಿದ್ದಾರೆ. ಈ ಹಣವನ್ನು ಕಾರ್ಮಿಕರ ಒಳತಿಗಾಗಿ ಬಳಸಿಕೊಳ್ಳಲಾಗುತ್ತದೆ.

    ಕಾರ್ಮಿಕರ ಒಕ್ಕೂಟಕ್ಕೆ 32 ಲಕ್ಷ ರೂ.ಗಳನ್ನು ಕೊಡುವುದರ ಜತೆಗೆ, ಕಳೆದ ವರ್ಷ ಮೊದಲ ಲಾಕ್​ಡೌನ್​ ಸಂದರ್ಭದಲ್ಲಿ ವಿಜಯ್​ ಕಿರಂಗದೂರು ಅವರು ತಮ್ಮ ನಿರ್ಮಾಣದ ‘ಕೆಜಿಎಫ್ 2’ ಹಾಗೂ ‘ಯುವರತ್ನ’ ಚಿತ್ರತಂಡದ ಸದಸ್ಯರ ಖಾತೆಗೆ ಹಣವನ್ನು ಎರಡು ತಿಂಗಳು ವರ್ಗಾಯಿಸಿದ್ದರು ಹಾಗೂ ಕನ್ನಡ ಚಲನಚಿತ್ರ ಕಾರ್ಮಿಕರ‌ ಸಂಕಷ್ಟಕ್ಕೂ ನರೆವಾಗಿದ್ದರು. ಈ ವರ್ಷ ತಮ್ಮ ತವರು ಜಿಲ್ಲೆ ಮಂಡ್ಯ ಆಸ್ಪತ್ರೆಗೆ ಎರಡು ಆಕ್ಸಿಜನ್ ಪ್ಲಾಂಟ್ ಹಾಗೂ ಇಪ್ಪತ್ತು ಆಕ್ಸಿಜನ್ ಸೇರಿದಂತೆ ಉತ್ತಮ ಸೌಲಭ್ಯವುಳ್ಳ ಹಾಸಿಗೆಗಳ ಸೌಲಭ್ಯ ಕಲ್ಪಿಸುವುದರ ಜತೆಗೆ, ಹೊಂಬಾಳೆ ಸಂಸ್ಥೆಯಲ್ಲಿ ಕೆಲಸ ಮಾಡುವ 600ಕ್ಕೂ ಅಧಿಕ ಕಾರ್ಮಿಕರಿಗೆ ಹಾಗೂ ಅವರ ಕುಟುಂಬದವರಿಗೆ ಉಚಿತ ಕೊರೋನ ಲಸಿಕೆ ಹಾಕಿಸಿದ್ದಾರೆ ಹಾಗೂ ಅವರ ಎಲ್ಲಾ ಕಷ್ಟಗಳಿಗೂ ಸ್ಪಂದಿಸಿದ್ದಾರೆ.

    ಇದನ್ನೂ ಓದಿ: ಕರೊನಾ ಕಷ್ಟಕಾಲದಲ್ಲಿ ಹೀಗೊಂದು ಭರವಸೆಯ ಬದುಕು: ಆಲಾಪ್ ಕ್ರಿಯೇಷನ್ಸ್​ನಿಂದ ಹೊರಬರಲಿದೆ ವಿಶೇಷ ಗೀತೆ

    ಅಷ್ಟೇ ಅಲ್ಲ, ತಮ್ಮ ಸಂಸ್ಥೆಯ ಮೂಲಕ ನಿರ್ಮಾಣವಾಗುತ್ತಿರುವ ತೆಲುಗಿನ ‘ಸಲಾರ್’ ಚಿತ್ರಕ್ಕೆ ಕಾರ್ಯನಿರ್ವಹಿಸುತ್ತಿರುವ ಸುಮಾರು 150ಕ್ಕೂ ಅಧಿಕ ಚಿತ್ರತಂಡದ ಸದಸ್ಯರಿಗೂ ಇಲ್ಲಿನ ಹಾಗೆ ಎಲ್ಲಾ ಸೌಲಭ್ಯ ನೀಡಿದ್ದಾರೆ.

    ದುಬಾರಿ ಸೀತೆ; 12 ಕೋಟಿ ರೂ. ಸಂಭಾವನೆ ಕೇಳಿದರಂತೆ ಕರೀನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts