More

    ಆಗಲ್ಲ ಎಂದ ರಾಜ್ಯ ಸರ್ಕಾರ, ಆಗ್ಲೇಬೇಕು ಎಂದ ಮೋದಿ; ಕೊನೆಗೂ ಕರ್ನಾಟಕದಲ್ಲೇ ನಡೆಯುಲಿರುವ ಯುವಜನೋತ್ಸವ!

    ಧಾರವಾಡ: ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜ. 12ರಂದೇ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನೆ ಆಗಲಿದ್ದು, ಅದಕ್ಕಾಗಿ ರಾಜ್ಯದ ಧಾರವಾಡದಲ್ಲಿ ಈಗಾಗಲೇ ಎಲ್ಲ ಸಿದ್ಧತೆಗಳು ಆರಂಭಗೊಂಡಿವೆ. ಇದರ ಹಿಂದೆಯೇ ಈಗ ಈ ಕುರಿತ ಇನ್ನೊಂದು ಸಂಗತಿ ಬಹಿರಂಗಗೊಂಡಿದೆ.

    ಧಾರವಾಡದಲ್ಲಿ ರಾಷ್ಟ್ರೀಯ ಯುವಜನೋತ್ಸವ ಆಯೋಜನೆಗೊಳ್ಳಲಿರುವ ಕುರಿತು ನಿನ್ನೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಸುದ್ದಿಗೋಷ್ಠಿ ನಡೆಸಿ ಒಂದಷ್ಟು ಮಾಹಿತಿಯನ್ನೂ ಹಂಚಿಕೊಂಡಿದ್ದರು. ಅವರು ಸುದ್ದಿಗೋಷ್ಠಿ ನಡೆಸುತ್ತಿರುವ ಸಮಯದಲ್ಲೇ ನಟ ಅಕ್ಷಯ್​ಕುಮಾರ್ ಕೂಡ ಅವರಿಗೆ ಕರೆ ಮಾಡಿ ಮಾತನಾಡಿದ್ದರು.

    ರಾಷ್ಟ್ರೀಯ ಯುವಜನೋತ್ಸವದಲ್ಲಿ ಪಾಲ್ಗೊಳ್ಳುವ ಸಲುವಾಗಿ ಅಕ್ಷಯ್​ಕುಮಾರ್​ಗೆ ಸಂಪರ್ಕಿಸಿದ್ದ ಹಿನ್ನೆಲೆಯಲ್ಲಿ ಅವರು ನಿನ್ನೆ ಕರೆ ಮಾಡಿದ್ದರು. ಜ. 12ರಂದು ಪ್ರಧಾನಿ ನರೇಂದ್ರ ಮೋದಿಯವರು ಉತ್ಸವವನ್ನು ಉದ್ಘಾಟಿಸಿದ್ದು, ಜ. 16ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವಂತೆ ಅಕ್ಷಯ್​ಕುಮಾರ್​ಗೆ ಜೋಶಿ ಫೋನ್​ ಕರೆ ಸಂದರ್ಭದಲ್ಲಿ ಹೇಳಿದ್ದರು. ಆದರೆ ಅಕ್ಷಯ್​ಕುಮಾರ್ ತಾವು ಕೂಡ ಉದ್ಘಾಟನೆ ದಿನವೇ ಬರುವುದಾಗಿ ಹೇಳಿದ್ದರು. ಅಂದು ಪ್ರಧಾನಿ ಕಾರ್ಯಕ್ರಮದ ಭದ್ರತೆ ವಿಷಯ ಇರುತ್ತೆ ಎಂದು ಜೋಶಿ ಅಕ್ಷಯ್​ಕುಮಾರ್​ಗೆ ಪ್ರತಿಕ್ರಿಯಿಸಿದ್ದು, ಅಕ್ಷಯ್​ ಯಾವತ್ತು ಬರಲಿದ್ದಾರೆ ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿಯಲಿದೆ.

    ಇಂದು ಇದೇ ಯುವ ಜನೋತ್ಸವಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಯವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ಅವರು ಸುದ್ದಿಗೋಷ್ಠಿ ನಡೆಸಿದ್ದು, ಇನ್ನೊಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಅವರು ನೀಡಿರುವ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ ಈ ಯುವ ಜನೋತ್ಸವ ಆಗುತ್ತಿರುವುದು ಮೋದಿಯವರ ಒತ್ತಾಸೆಯಿಂದ ಎಂಬುದು ಬಹಿರಂಗಗೊಂಡಿದೆ.

    ರಾಷ್ಟ್ರೀಯ ಯುವ ಜನೋತ್ಸವವನ್ನು ತಮಗೆ ಮಾಡಲು ಆಗುವುದಿಲ್ಲ ಎಂದು ರಾಜ್ಯ ಸರ್ಕಾರದ ಕಡೆಯಿಂದ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿಕೊಳ್ಳಲಾಗಿತ್ತು. ಆದರೆ ಕರ್ನಾಟಕದಲ್ಲಿಯೇ ರಾಷ್ಟ್ರೀಯ ಯುವಜನೋತ್ಸವ ನಡೆಯಬೇಕು ಎಂದು ಪ್ರಧಾನಿ ಮೋದಿಯವರು ಪಟ್ಟು ಹಿಡಿದಿದ್ದರು ಎಂದು ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ.

    ಹೀಗಾಗಿ ಕರ್ನಾಟಕದ ಧಾರವಾಡದಲ್ಲಿ ರಾಷ್ಟ್ರೀಯ ಯುವಜನೋತ್ಸವ ನಡೆಯಲಿದ್ದು, ಅದನ್ನು ಜ. 12ರಂದು ಪ್ರಧಾನಿ ನರೇಂದ್ರ ಮೋದಿಯವರೇ ಉದ್ಘಾಟಿಸಲಿದ್ದಾರೆ. ಕರ್ನಾಟಕ ಕಾಲೇಜು ಆವರಣದಲ್ಲಿ ಬಹುತೇಕ ಎಲ್ಲ ಕಾರ್ಯಕ್ರಮಗಳು ನಡೆಯಲಿದ್ದು, ಪ್ರಧಾನಿ ಭದ್ರತೆ ಹಿನ್ನೆಲೆಯಲ್ಲಿ ಉದ್ಘಾಟನೆ ಎಲ್ಲಿ ಎಂಬುದು ಇನ್ನೂ ನಿಗದಿಯಾಗಿಲ್ಲ ಎನ್ನಲಾಗಿದೆ.

    ಮೈದಾನದಲ್ಲೇ ಕುಸಿದು ಬಿದ್ದು ಸಾವಿಗೀಡಾದ ಕ್ರಿಕೆಟಿಗ; ರನ್​ಗಾಗಿ ಓಡುತ್ತಿದ್ದಾಗ ಹೃದಯಾಘಾತ..

    ನಿಧಿ ಇದೆ ಎಂದು ಕನಸಲ್ಲಿ ಬಂದು ಹೇಳಿದ ದೇವರು!; ಹಾಗೆಂದು ಕಾಡಲ್ಲಿ ಬಾವಿ ತೋಡಲು ಹೋದರು.. ಆಮೇಲಾಗಿದ್ದೇನು?

    ಕಾಲೇಜು ವಿದ್ಯಾರ್ಥಿನಿಯರಿಗೂ ಹೆರಿಗೆ ರಜೆ ನೀಡಲು ಮುಂದಾದ ವಿಶ್ವವಿದ್ಯಾಲಯ; ಎಲ್ಲಿ, ಎಷ್ಟು ತಿಂಗಳು?

    ರಾಯಚೂರಲ್ಲಿ ಪ್ರೇಮಿಗಳಿಬ್ಬರ ದೇಹ ಎರಡೆರಡು ಚೂರು; ಹಳಿಗೆ ತಲೆಯೊಡ್ಡಿ ಪ್ರಾಣ ಕಳ್ಕೊಂಡ ಲವರ್ಸ್, ಇಬ್ಬರ ರುಂಡವೂ ಕಟ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts