More

    ರಾತ್ರಿ ವೇಳೆ ದೇವಾಲಯ ಹೊಕ್ಕು ಶೂಟಿಂಗ್! ಯೂಟ್ಯೂಬರ್​ಗೆ ಮತ್ತೆ ಎದುರಾಯ್ತು ಸಂಕಷ್ಟ

    ಮಥುರ: ತಮ್ಮ ನಾಯಿಯನ್ನು ಬಲೂನಿಗೆ ಕಟ್ಟಿ ಆಕಾಶದಲ್ಲಿ ಹಾರಿಸಿದ್ದಕ್ಕಾಗಿ ಕೆಲವು ತಿಂಗಳ ಹಿಂದೆ ಪ್ರಾಣಿ ಹಿಂಸೆಯ ಆರೋಪದಡಿ ಬಂಧಿತರಾಗಿದ್ದ ದೆಹಲಿಯ ಯೂಟ್ಯೂಬರ್​​ ಗೌರವ್​ ಶರ್ಮಾ ಇದೀಗ ಹೊಸ ಸಂಕಷ್ಟಕ್ಕೆ ಸಿಲುಕಿದ್ದಾರೆ. ವೃಂದಾವನದ ‘ನಿಧಿವನ ರಾಜ್​’ ದೇವಾಲಯದಲ್ಲಿ ರಾತ್ರಿ ವೇಳೆ ವಿಡಿಯೋ ಶೂಟ್​ ಮಾಡಿದ್ದಕ್ಕಾಗಿ ಅವರನ್ನು ಮಥುರಾ ಪೊಲೀಸರು ಬಂಧಿಸಿದ್ದಾರೆ.

    ಉತ್ತರಪ್ರದೇಶದ ಮಥುರಾ ಜಿಲ್ಲೆಯ ವೃಂದಾವನದಲ್ಲಿರುವ ಕೃಷ್ಣ ದೇವಾಲಯ ನಿಧಿವನ ರಾಜ್​ಗೆ ರಾತ್ರಿ ಹೊತ್ತು ಯಾರೂ ಪ್ರವೇಶಿಸುವಂತಿಲ್ಲ. ಈ ಸಮಯದಲ್ಲಿ ಭಗವಾನ್​ ಕೃಷ್ಣ ಮತ್ತು ರಾಧೆ ಆ ಜಾಗದಲ್ಲಿ ರಾಸಲೀಲೆ ಆಡುತ್ತಾರೆ ಎಂಬುದು ಜನರ ನಂಬಿಕೆ. ನವೆಂಬರ್​ 6 ರ ರಾತ್ರಿ ಶರ್ಮಾ ಮತ್ತು ಅವರ ಸಹಾಯಕರು ದೇವಾಲಯದ ಗೋಡೆ ಹಾರಿ ಒಳಹೊಕ್ಕು ಅಲ್ಲಿ ವಿಡಿಯೋ ಚಿತ್ರೀಕರಿಸಿದ್ದರು. ಆ ಪವಿತ್ರ ಸ್ಥಳವನ್ನು ವಿಡಿಯೋಗ್ರಾಫರ್​ಗಳು ಶೂಸ್​ ಹಾಕಿಕೊಂಡು ಹೊಕ್ಕಿದ್ದರು ಎನ್ನಲಾಗಿದೆ.

    ಇದನ್ನೂ ಓದಿ: ನಕಲಿ​ ಲೈಸೆನ್ಸ್​ ಕೊಟ್ಟು​ ಪೊಲೀಸ್ ಇಲಾಖೆ ಸೇರಿದ್ದ 12 ಜನ ಡಿಸ್​ಮಿಸ್​

    ಅಂದಿನ ವಿಡಿಯೋವನ್ನು ತಮ್ಮ ‘ಗೌರವ್​​ಜೋನ್​’ ಎಂಬ 4 ಮಿಲಿಯನ್​ ಸದಸ್ಯರುಳ್ಳ ಯೂಟ್ಯೂಬ್​ ಚಾನೆಲ್​​ನಲ್ಲಿ ಶರ್ಮಾ ನ.9 ರಂದು ಶೇರ್​ ಮಾಡಿದ್ದರು. ಈ ಹಿನ್ನೆಲೆಯಲ್ಲಿ ದೇವಾಲಯದ ಅರ್ಚಕರು ಪೊಲೀಸರಿಗೆ ದೂರು ನೀಡಿದ್ದು, ಐಪಿಸಿ ಸೆಕ್ಷನ್​ 295 ಮತ್ತು ಐಟಿ ಕಾಯ್ದೆಯ ಸೆಕ್ಷನ್​ 66 ರಡಿ ಎಫ್​ಐಆರ್​ ದಾಖಲಿಸಲಾಯಿತು. ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಗೌರವ್​ ಶರ್ಮ ತಮ್ಮ ವಿಡಿಯೋವನ್ನು ಡೆಲೀಟ್​ ಮಾಡಿದ್ದರು. ಆದಾಗ್ಯೂ, ದೂರಿನ ಹಿನ್ನೆಲೆಯಲ್ಲಿ ಮಥುರಾ ಪೊಲೀಸರು ಅವರನ್ನು ನ.13 ರಂದು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ವರದಿ ತಿಳಿಸಿದೆ. (ಏಜೆನ್ಸೀಸ್)

    ಕೊನೆಯುಸಿರೆಳೆದ ಮಹಾಲಕ್ಷ್ಮೀ ದೇವಸ್ಥಾನದ ಆನೆ; ದುಃಖದಲ್ಲಿ ಗ್ರಾಮಸ್ಥರು

    ‘ಲಾಕ್​ಡೌನ್​ ಮಾಡಲು ಸಿದ್ಧ, ಆದರೆ…’ – ಸುಪ್ರೀಂ ಮುಂದೆ ದೆಹಲಿ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts