More

    ಈ ನಟಿಯ ವಯಸ್ಸೆಷ್ಟು ಊಹಿಸಿ?: 30ರ ಆಸುಪಾಸು ಅಂದ್ರೆ ನಿಮ್ಮ ಗೆಸ್ ಖಂಡಿತ​ ತಪ್ಪು!

    ಬೀಜಿಂಗ್​: ಬಹುತೇಕ ನಟಿಯರಿಗೆ ವಯಸ್ಸಾದರೂ ಸಹ ತಮ್ಮ ಸೌಂದರ್ಯದಿಂದಲೇ ನೋಡುಗರ ಕಣ್ಮನ ಸೆಳೆಯುತ್ತಾರೆ. ಅವರ ನಿಜ ವಯಸ್ಸು ತಿಳಿದರೂ ಸಹ ಅಭಿಮಾನಿಗಳಿಗೆ ನಂಬಲಾಗುವುದಿಲ್ಲ. ಇದೇ ರೀತಿಯಲ್ಲಿ ತಮ್ಮ ಮಾದಕ ಮೈಮಾಟದಿಂದಲೇ ಹಾಂಗ್​ಕಾಂಗ್​ನ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿರುವ ನಟಿಯೊಬ್ಬರು ಕೊನೆಗೂ ತಮ್ಮ ವಯಸ್ಸನ್ನು ಬಹಿರಂಗಪಡಿಸಿದ್ದು ನೆಟ್ಟಿಗರ ಹುಬ್ಬೇರಿಸಿದೆ.

    ನಟಿ ಕಾರ್ಮನ್​ ಲೀ ಯೂಕ್​ ಟಂಗ್​ ಸುಮಾರು 1990ರಲ್ಲಿ ಕ್ಯಾಸೆಟ್​ ಜಾಹೀರಾತು ನೀಡಿದಾಗಿನಿಂದಲೂ ತುಂಬಾ ಪ್ರಖ್ಯಾತಿಯನ್ನು ಗಳಿಸುತ್ತಾ ಬಂದಿದ್ದಾರೆ. ಸುಮಾರು ಮೂರು ದಶಕಗಳಿಂದ ಅವರು ತಮ್ಮ ವಯಸ್ಸನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ. ಕೊನೆಗೂ ತಮ್ಮ ವಯಸ್ಸನ್ನು ಕಾರ್ಮನ್​ ಲೀ ಬಹಿರಂಗಪಡಿಸಿದ್ದಾರೆ. ಈಗಲೂ ಚಿರಯೌವ್ವನದಂತೆ ಕಂಗೊಳಿಸುವ ಅವರ ನಿಜವಾದ ವಯಸ್ಸು 54 ಅಂದರೂ ಯಾರಿಗೂ ನಂಬಲು ಸಾಧ್ಯವಾಗುತ್ತಿಲ್ಲ.

    ಇದನ್ನೂ ಓದಿ: ಪತಿಯ ಜನನಾಂಗ ಕತ್ತರಿಸಿ ಕೊಲೆಗೈದ ಮಹಿಳೆ ತನ್ನ ಮಕ್ಕಳಿಗೆ ಹೇಳಿದ್ದು ಶಾಕ್​ ಆಗುವ ವಿಚಾರ!

    ಕಾರ್ಮನ್​ ಲೀ ಅವರ ದೋಷವಿಲ್ಲದ ಮುಖ, ವಯಸ್ಸನ್ನೇ ಮರೆಮಾಚುವ ನೋಟ ಮತ್ತು ನಂಬಲಾಗದ ಮಾದಕ ಮೈಮಾಟ ನೋಡಿದರೆ ಎಂತವರು ಸಹ ಅವರ ವಯಸ್ಸು 35 ದಾಟಿಲ್ಲ ಎನ್ನುತ್ತಾರೆ. ಆದರೆ, ನಿಜವಾದ ವಯಸ್ಸು 54 ಎಂದರೆ ಅಚ್ಚರಿಯಾಗದೇ ಇರದು. ಈ ಕಾರಣದಿಂದಲೇ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದಾರೆ.

    ಈ ನಟಿಯ ವಯಸ್ಸೆಷ್ಟು ಊಹಿಸಿ?: 30ರ ಆಸುಪಾಸು ಅಂದ್ರೆ ನಿಮ್ಮ ಗೆಸ್ ಖಂಡಿತ​ ತಪ್ಪು!

    ಕಾರ್ಮನ್​ ಅವರು ಮೊನ್ನೆಯಷ್ಟೇ (ಭಾನುವಾರ) 54ನೇ ಬರ್ತಡೇ ಆಚರಿಸಿಕೊಂಡಿದ್ದಾರೆ. ನಾನು ನನ್ನ ಜೀವನದ ಬಹುಭಾಗವನ್ನು ಕಳೆದಿದ್ದೇನೆ ಮತ್ತು ನನ್ನ 54ನೇ ಹುಟ್ಟುಹಬ್ಬವನ್ನು ಸ್ವಾಗತಿಸಿದ್ದೇನೆಂದು ಕಾರ್ಮನ್​ ಲೀ ಅವರು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

    ಮಹಿಳೆಯರು 30 ವಯಸ್ಸು ದಾಟಿದರೆ ಅವರ ಜೀವನ ಬಹುತೇಕ ಮುಗಿಯಿತೆಂದು ಅನೇಕರು ಭಾವಿಸಿದ್ದಾರೆ. ನಿಜವಾಗಿ ಹೇಳಬೇಕೆಂದರೆ ವಯಸ್ಸು ಎಂಬುದು ಒಂದು ವಿಚಾರವೇ ಅಲ್ಲ. ಇಂದಿಗೂ ನನ್ನ ಯಾವುದೇ ಕೆಲಸ ನಿಂತಿಲ್ಲ. ಮುಂದುವರಿಯುತ್ತಲೇ ಇದೆ ಎನ್ನುತ್ತಾರೆ ಲೀ. ತಮ್ಮ ಜಾಲತಾಣದಲ್ಲಿ 5.3 ಮಿಲಿಯನ್​ ಹಿಂಬಾಲಕರನ್ನು ಲೀ ಹೊಂದಿದ್ದಾರೆ.

    ಇದನ್ನೂ ಓದಿ: ಕೌನ್ಸಿಲ್​ ಸಭೆ ಮಧ್ಯೆಯೇ ಸೆಕ್ಸ್​ನಲ್ಲಿ ಬಿಜಿಯಾದ ದಂಪತಿ: ಗೊತ್ತಿದ್ರೂ ಮುಂದುವರಿದ ಚರ್ಚೆ, ವೈರಲ್​ ಆಯ್ತು ವಿಡಿಯೋ!

    ತಮ್ಮ ಸೌಂದರ್ಯದ ಬಗ್ಗೆ ಮಾತನಾಡಿರುವ ಲೀ, ಮಹಿಳೆಯರು ತಮ್ಮ ಚರ್ಮವನ್ನು ಯಾವಾಗಲೂ ಮೊಶ್ಚರೈಸ್​ ಆಗಿ ಇಟ್ಟುಕೊಳ್ಳಬೇಕು. ಅದರಲ್ಲೂ ಕೈ ಮತ್ತು ಕುತ್ತಿಗೆ ಭಾಗದ ಚರ್ಮದ ಮೇಲೆ ಹೆಚ್ಚು ಗಮನವಹಿಸಬೇಕು ಎಂದಿದ್ದಾರೆ. ಅಲ್ಲದೆ, ಬೇಸಿಗೆ ಕಾಲದಲ್ಲಿ ಚರ್ಮ ಟ್ಯಾನ್​ ಆಗುವುದು ತಪ್ಪಿಸಬೇಕು. ಚೆನ್ನಾಗಿ ನಿದ್ರೆ ಮಾಡಬೇಕು. ಸ್ನ್ಯಾಕ್ಸ್​ಗಳನ್ನು ವಿರಳವಾಗಿ ಬಳಸಬೇಕು. ಆಹಾರ ಬೀಜಗಳನ್ನು ಸೇವಿಸಬೇಕು. ಪ್ರತಿದಿನ ತುಂಬಾ ನೀರು ಕುಡಿಯಬೇಕು. ನಾನಂತೂ ಕಾಫಿ ಅಥವಾ ಟೀ ಮುಟ್ಟುವುದೇ ಇಲ್ಲ. ನಿಯಮಿತ ವ್ಯಾಯಾಮ ಮಾಡಬೇಕು ಎನ್ನುತ್ತಾರೆ ಕಾರ್ಮನ್​ ಲೀ.

    ಕಾರ್ಮನ್​ ಲೀ ಜಾಹಿರಾತುಗಳಲ್ಲೇ ಅನೇಕ ಸ್ಥಳೀಯ ಸಿನಿಮಾಗಳಲ್ಲಿಯೂ ನಟಿಸಿದ್ದು, ತುಂಬಾ ಪ್ರಸಿದ್ದಿ ಪಡೆದಿದ್ದಾರೆ. (ಏಜೆನ್ಸೀಸ್​)

    13ರ ಶಾಲಾ ಬಾಲಕಿಗೆ ಹೆಣ್ಣು ಮಗು ಜನನ: 10ರ ಬಾಲಕನೇ ತಂದೆ, ಇದರ ಹಿಂದಿದೆ ಮತ್ತೊಂದು ಟ್ವಿಸ್ಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts