More

    ಯುವ ಮತದಾರರ ನೋಂದಣಿ ಅಭಿಯಾನ

    ಮಸ್ಕಿ: 18 ವರ್ಷ ಪೂರೈಸಿದ ಯುವ ಜನತೆ ಫಾರ್ಮ ನಂ6ರಲ್ಲಿ ವಿವರಗಳನ್ನು ತುಂಬಿ ಹೆಸರು ನೋಂದಾಯಿಸುವಂತೆ ಅಪರ ಜಿಲ್ಲಾಧಿಕಾರಿ ಡಾ.ದುರುಗೇಶ ಹೇಳಿದರು.

    ಇದನ್ನೂ ಓದಿ: ಓಡಿದರೂ ಬಿಡದೆ ಪೇದೆ ಮೇಲೆ ಸಿಐ ಲಾಠಿ ಚಾರ್ಜ್ – ಬೆಚ್ಚಿಬಿದ್ದ ಮತದಾರರು!

    ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯ ಚುನಾವಣಾ ಆಯೋಗ ಮತ್ತು ರಾಯಚೂರು ಜಿಲ್ಲಾಡಳಿತ, ಪದವಿ ಪೂರ್ವ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಯುವ ಮತದಾರರ ನೋಂದಣಿ ಅಭಿಯಾನದಲ್ಲಿ ಶುಕ್ರವಾರ ಮಾತನಾಡಿದರು.

    ಮತದಾನ ಮಾಡುವುದು ನಮ್ಮ ಹಕ್ಕು, ಅದನ್ನು ಚಲಾಯಿಸಬೇಕು. ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಲು ಇರುವ ಮಾರ್ಗವಾದ್ದರಿಂದ ಪ್ರಜ್ಞಾವಂತರಾದ ಯುವಕರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಸಲಹೆ ನೀಡಿದರು.

    ಜಿಲ್ಲಾ ತರಬೇತುದಾರ ಸದಾಶಿವಪ್ಪ, ತಹಸೀಲ್ದಾರ ಅರಮನೆ ಸುಧಾ, ತಾ.ಪಂ.ಯೋಜನಾಧಿಕಾರಿ ಅಹ್ಮದಪಟೇಲ್, ಮಲ್ಲಪ್ಪ ಗ್ರೇಡ್ 2 ತಹಸೀಲ್ದಾರ, ಸಿಡಿಪಿಒ ಅಶೋಕ, ಪುರಸಭೆ ಮುಖ್ಯಾಧಿಕಾರಿ ನರಸರಡ್ಡಿ, ಪ್ರಭಾರಿ ಶಿಕ್ಷಣಾಧಿಕಾರಿ ಬಸಪ್ಪ ತನಿಖೆದಾರ, ಉಪನ್ಯಾಸಕರಾದ ಮಹಾಂತೇಶ ಮಸ್ಕಿ, ರಂಗಯ್ಯ ಶಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts