More

    ಪ್ರಿಯತಮೆಗೆ ಬೆಂಕಿ ಹಚ್ಚಿ ತಾನೂ ಬೆಂಕಿ ಹಚ್ಚಿಕೊಂಡಿದ್ದ ಪ್ರೇಮಿ; ಚಿಕಿತ್ಸೆ ಫಲಾಕಾರಿಯಾಗದೆ ಮೃತ್ಯು

    ಬಾಗಲಕೋಟೆ: ಪ್ರಿಯತಮೆಗೆ ಬೆಂಕಿ ಹಚ್ಚಿ, ಬಳಿಕ ಪ್ರಿಯಕರನೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆ ಕಳೆದ ಮಾರ್ಚ್ 27 ರಂದು ಗುಡೂರು ಗ್ರಾಮದಲ್ಲಿ ನಡೆದಿತ್ತು. ಇದೀಗ ಗಂಭೀರವಾಗಿ ಗಾಯಗೊಂಡ ಆಸ್ಪತ್ರೆ ಸೇರಿದ್ದ ಪಾಗಲ್ ಪ್ರೇಮಿ ಅಫ್ಜಲ್ ಸೊಲ್ಲಾಪುರ (27) ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.

    ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಾಡಾಳ್ ವಿರೂಪಾಕ್ಷಪ್ಪ; ಕೈದಿ ಸಂಖ್ಯೆ 3411

    ಮೃತ ಅಫ್ಜಲ್ ಸೊಲ್ಲಾಪುರ, ನೇತ್ರಾವತಿ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ನೇತ್ರಾವತಿಗೆ ಮನೆಯಲ್ಲಿ ನೋಡಿದ್ದ ಹುಡುಗನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳು. ಇದಿರಿಂದ ತಾಳ್ಮೆ ಕಳೆದುಕೊಂಡಿದ್ದ ಅಫ್ಜಲ್, ನೇತ್ರಾವತಿ ಕೋಳಿ ಫಾರಂಗೆ ತೆರಳುತ್ತಿದ್ದ ವೇಳೆ, ಎಳೆದೊಯ್ದು ಕೃತ್ಯ ಎಸಗಿದ್ದ. ಬಳಿಕ ತಾನೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಘಟನೆಯಿಂದ ನೇತ್ರಾವತಿಯ ದೇಹ ಶೇ 70 ರಷ್ಟು ಸುಟ್ಟು ಹೋಗಿತ್ತು.

    ಅಫ್ಜಲ್​ನ ಕೃತ್ಯ ಕಂಡ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿ, ಇಬ್ಬರನ್ನೂ ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಅಫ್ಜಲ್ ಹಾಗೂ ನೇತ್ರಾವತಿ ಚಿಕಿತ್ಸೆ ಪಡೆಯುತ್ತಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಅಪ್ಜಲ್ ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಅಮೀನಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: VIDEO | ನೀತಾ ಅಂಬಾನಿಯ ನೃತ್ಯ ನೋಡಿ ಮನಸೋತ ಬಾಲಿವುಡ್ ಮಂದಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts