More

    ದೇವನಹಳ್ಳಿಯಲ್ಲಿ ಬೆಳೆಯುತ್ತಿದ್ದ ಯುವ ನಾಯಕನ ಅನುಮಾನಾಸ್ಪದ ಅಂತ್ಯ…

    ಬೆಂಗಳೂರು: ವಿನೋದ್​ ದೇವನಹಳ್ಳಿ ಏರಿಯಾದಲ್ಲಿ ಜನರ ಸಮಸ್ಯೆಗೆ ಸ್ಪಂದಿಸುತ್ತಾ ಜನರ ಬಳಿ ಒಡನಾಟವಿಟ್ಟುಕೊಂಡಿದ್ದ ವ್ಯಕ್ತಿ. ಹೀಗಾಗಿ ರಾಜಕೀಯ ನಾಯಕರು ಸಹ ಆತನನ್ನ ತಮ್ಮ ಪಕ್ಷಕ್ಕೆ ಬರಮಾಡಿಕೊಂಡು ಪಕ್ಷಕ್ಕಾಗಿ ದುಡಿಸಿಕೊಳ್ಳುತ್ತಿದ್ದರು. ಆದರೆ ಚೆನ್ನಾಗಿದ್ದ ಆತ ನೆನ್ನೆ ಮನೆಯಿಂದ ಹೊರ ಹೋದವನು ಈಗ ಹೆಣವಾಗಿ ಪತ್ತೆಯಾಗಿದ್ದಾನೆ. ಈಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳೀಯ ಯುವಕರ ಗುಂಪು ಕಟ್ಟಿಕೊಂಡು ನಾಯಕನಾಗಿ ಬೆಳೆಯುತ್ತಿದ್ದ ವಿನೋದ್ ಏಕಾಏಕಿ ಆತ್ಮಹತ್ಯೆಗೆ ಶರಣಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಕೆರೆ ದಡದಲ್ಲಿ ಚಪ್ಪಲಿ ಮತ್ತು ಡೆತ್ ನೋಟ್ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹವನ್ನ ಹೊರತೆಗೆದಿದ್ದಾರೆ. ಪತ್ನಿ ಅತ್ತೆ ಸೇರಿದಂತೆ ಕುಟುಂಬಸ್ಥರೆಲ್ಲ ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಆಕ್ರೋಶ ಹೊರ ಹಾಕಿದರು.

    ನಗರಸಭೆ ಸದಸ್ಯೆಯ ಪತಿ ಮಂಜುನಾಥ್ ಕಿರುಕುಳ ಮತ್ತು ಅಪ್ರಾಪ್ತೆ ಬರೆದಿದ್ದ ಅನಾಮಿಕ ಪತ್ರದಿಂದ ವಿನೋದ್ ಮನನೊಂದಿದ್ದು ಮಂಜುನಾಥ್ ಸೇರಿದಂತೆ ಡೆತ್ ನೋಟ್​ನಲ್ಲಿ ಉಲ್ಲೇಖ ಮಾಡಿರುವ ನಾಲ್ಕು ಜನರ ವಿರುದ್ದ ಕ್ರಮ ಕೈಗೊಳ್ಳುವಂತೆ ಕುಟುಂಬವರು ಒತ್ತಾಯಿಸಿದರು.ಬೆಂಗಳ

    ಈ ವಿಚಾರ ತಿಳಿಯುತ್ತಿದ್ದಂತೆ ನಗರಸಭೆ ಸದಸ್ಯೆ ಮತ್ತು ಆಕೆಯ ಪತಿ ಮಂಜುನಾಥ್ ಸೇರಿದಂತೆ ಎಲ್ಲರೂ ನಾಪತ್ತೆಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ ಕಛೇರಿಪಾಳ್ಯದ ನಿವಾಸಿಯಾದ ವಿನೋದ್, ಏರಿಯಾದಲ್ಲಿ ತನ್ನದೆ ಆದ ಆಪ್ತ ಬಳಗವನ್ನು ಇಟ್ಟುಕೊಂಡಿದ್ದ. ಜತೆಗೆ ಕಳೆದ ದೊಡ್ಡಬಳ್ಳಾಪುರ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಮಂಜುನಾಥ್ ಪತ್ನಿ ಪರವಾಗಿ ವಿನೋದ್​ ಕೆಲಸ ಮಾಡಿ ಆಕೆಯನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಗೆದ್ದ ನಂತರ ಮಂಜುನಾಥ್ ವಿನೋದ್​ರನ್ನು ತನ್ನಿಂದ ದೂರ ತಳ್ಳಲು ಶುರುಮಾಡಿದ್ದ. ಈ ಸಂದರ್ಭ ವಿನೋದ್ ವಿರುದ್ಧ ಮಂಜುನಾಥ್ ಪಿತೂರಿ ಮಾಡಿದ್ದನಂತೆ. ಹೀಗಾಗಿ ನಗರಸಭೆ ಸದಸ್ಯೆಯ ಪತಿ ವಿರುದ್ದ ಮುನಿಸಿಕೊಂಡಿದ್ದ ವಿನೋದ್ ಟಾಂಗ್ ನೀಡಲು ಮುಂದಾಗಿದ್ದು ಇತ್ತೀಚೆಗಷ್ಟೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದ.

    ಹೀಗಾಗಿ ವಿನೋದ್ ಮೇಲೆ ಇಲ್ಲ ಸಲ್ಲದ ಆರೋಪಗಳನ್ನ ಮಾಡಿದ್ದ ಮಂಜುನಾಥ್ ಹಲವು ಭಾರಿ ಮೃತ ವಿನೋದ್ ನನ್ನ ಠಾಣೆಗೆ ಕರೆಸಿ ಪೊಲೀಸರಿಂದ ಕಿರುಕುಳ ನೀಡಿಸಿದ್ದ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಮನನೊಂದಿದ್ದ ವಿನೋದ್, ನಿನ್ನೆ ಮದ್ಯಾಹ್ನ ಪತ್ನಿ ಕೈಗೆ 2 ಸಾವಿರ ರೂ. ನೀಡಿ ಮಕ್ಕಳನ್ನು ಚೆನ್ನಾಗಿ ನೋಡ್ಕೋ ಎಂದು ಹೇಳಿ ಮನೆಬಿಟ್ಟು ಹೋಗಿದ್ದ. ಆದರೆ ಮನೆಬಿಟ್ಟು ಹೋದವನು ಎಷ್ಟು ಹೊತ್ತಾದರೂ ಮನೆಗೆ ಬಾರದಿದ್ದಾಗ ಕುಟುಂಬವರು ಅನುಮಾನಗೊಂಡು ಹುಡುಕಾಡಿದ್ದಾರೆ.

    ಒಟ್ಟಾರೆ ಏರಿಯಾದಲ್ಲಿ ಇತ್ತೀಚೆಗೆ, ಯುವಕರನ್ನು ಸೇರಿಸಿಕೊಂಡು ಬೆಳೆಯುತ್ತಿದ್ದ ವಿನೋದ್ ಏಕಾಏಕಿ ಆತ್ಮಹತ್ಯೆಗೆ ಶರಣಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇನ್ನು ಅನಾಮಿಕ ಪತ್ರ ಮತ್ತು ಪೊಲೀಸರ ಕಿರುಕುಳದ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದು ಸಂಪೂರ್ಣ ತನಿಖೆಯ ನಂತರವಷ್ಟೆ ವಿನೋದ್ ಸಾವಿನ ಹಿಂದಿನ ಸತ್ಯ ಹೊರಗಡೆ ಬರಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts