More

    ಯುವಕರೆಂದರೆ ಯುವಾವಸ್ಥೆಯಲ್ಲಿರುವ ಚೇತನ

    ನೀವು ಅನೇಕ ಸಲ ಸತ್ತು ಹೋಗಿದ್ದೀರಿ ಮತ್ತು ಹೊಸದಾಗಿ ಹುಟ್ಟಿದ್ದೀರಿ. ನೀವು ಪ್ರತಿ ಕ್ಷಣವೂ ಸಾಯಬಲ್ಲಿರಾದರೆ ಮತ್ತು ಪ್ರತಿ ಕ್ಷಣವೂ ಹುಟ್ಟಬಲ್ಲಿರಾದರೆ, ಅದೇ ಮೋಕ್ಷ, ಅದೇ ಸಂತೋಷ. ವರ್ತಮಾನ ಕ್ಷಣದಲ್ಲಿರುವುದು! ನವೀನವಾದ ಹೊಸ ಜೀವನ. ಗತವೆಲ್ಲವೂ ಹೊರಟು ಹೋಯಿತು.

    ಶ್ರೀ ಸ್ಫೂರ್ತಿಕಾಲವು ಯುವಕರ ಸ್ವತ್ತು. ಪ್ರತಿಕ್ಷಣವೂ ಅವರ ಸ್ವಂತ. ನಿಮ್ಮ ಚೇತನವು ಯುವಾವಸ್ಥೆಯಲ್ಲಿ ಇದೆಯೆಂದು ನಿಮಗನ್ನಿಸಿದರೆ ಸಾಕು, ಇಡೀ ವರ್ಷ ಪ್ರತಿ ಕ್ಷಣವೂ ನಿಮ್ಮದಾಗುತ್ತದೆ. ಯುವಕರೆಂದರೆ ಕೇವಲ ವಯಸ್ಸಿಗೆ ಸಂಬಂಧಿಸಿದ್ದಲ್ಲ. ಯುವಾವಸ್ಥೆಯಲ್ಲಿರುವ ಚೇತನ. ಇದನ್ನು ನೆನಪಿನಲ್ಲಿಟ್ಟುಕೊಳ್ಳಿ.

    ಕೆಲ ಕಾಲ ಕಣ್ಣು ಮುಚ್ಚಿ ಕುಳಿತು, ಕಳೆದುಹೋದ ಸಮಯ ದಿಂದ ನೀವೇನು ಕಲಿತಿರಿ ಮತ್ತು ಹಿಂದೆ ಏನೇನು ತಪ್ಪುಗಳನ್ನು ಮಾಡಿದ್ದೀರೆಂದು ಅವಲೋಕಿಸಿ ನೋಡಿ. ಮಾಡಿದ ತಪ್ಪುಗಳಿಗಾಗಿ ಪಶ್ಚಾತ್ತಾಪವನ್ನು ಪಡುವುದು ಬೇಡ, ಆ ತಪ್ಪುಗಳನ್ನು ಮತ್ತೆ ಮಾಡುವು

    ದಿಲ್ಲ ಎಂಬ ದೃಢನಿಶ್ಚಯವನ್ನು ಮಾಡಿಕೊಳ್ಳಿ. ಹಾಗೆಯೇ ದೊಡ್ಡ ತಪ್ಪುಗಳನ್ನು ಮಾಡಿದ ಇತರರಿಂದಲೂ ಪಾಠವನ್ನು ಕಲಿಯಿರಿ. ಸಾಮಾನ್ಯವಾಗಿ ನಾವು ತಪ್ಪು ಮಾಡಿದವರ ಮೇಲೆ ಕೋಪಿಸಿಕೊಳ್ಳುತ್ತೇವೆ. ಹಾಗೆ ಮಾಡದೆ, ಅವರಿಗೆ ಧನ್ಯವಾದಗಳನ್ನು ತಿಳಿಸಿ. ಅವರು ಪತನಗೊಂಡು, ತಮ್ಮ ಜೀವನವನ್ನು ನಾಶ ಮಾಡಿಕೊಂಡು, ದೊಡ್ಡ ಬೆಲೆಯನ್ನು ತೆತ್ತು ನಿಮಗೆ ಪಾಠ ಕಲಿಸುತ್ತಿದ್ದಾರೆ. ‘ನಾನು ಎಂತಹ ತಪ್ಪು ಮಾಡಿದೆ ನೋಡು. ನೀನೂ ಹಾಗೆ ಮಾಡಬೇಡ’ ಎಂದು ಹೇಳಿ ಕೊಡುತ್ತಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿ.

    ಒಂದು ವೇಳೆ ಈಗ ನೀವು ಸಾವನ್ನಪ್ಪಿ, ಬೇರೆ ಹೊಸ ಸ್ಥಳದಲ್ಲಿ ನಿಮ್ಮ ಜನನವಾದರೆ, ನಿಮ್ಮ ಜೀವನ ಹೇಗಿರುತ್ತದೆ? ಮತ್ತೆ ಹೊಸ ಜೀವನ ಆರಂಭವಾಗುತ್ತದೆ ಅಲ್ಲವೇ? ಒಂದು ವೇಳೆ ನೀವು ಕೊರಿಯಾದಲ್ಲಿ ಜನಿಸಿದರೆ ಎಲ್ಲವೂ ಈಗಿನದಕ್ಕಿಂತಲೂ ಹೊಸತಾಗಿರುತ್ತದೆ, ಅಲ್ಲವೇ? ಸುತ್ತಲಿನ ಜನರು ಬೇರೆಯ ಭಾಷೆಯನ್ನೇ ಮಾತನಾಡುತ್ತಿರುತ್ತಾರೆ. ಎಲ್ಲವೂ ಹೊಸತಾಗಿರುತ್ತದೆ ಮತ್ತು ಆಸಕ್ತಕರವಾಗಿರುತ್ತದೆ. ಆಧ್ಯಾತ್ಮಿಕ ಪಥದಲ್ಲಿರುವವರು ಪ್ರತಿ ಕ್ಷಣವೂ ಸಾಯಬೇಕು. ಗತದ ವಿಷಯದಲ್ಲಿ ಸತ್ತು ಹೋಗಬೇಕು! ನೀವು ಸತ್ತಾಗ ಎಲ್ಲವೂ ಹೊರಟು ಹೋಗುತ್ತದೆ. ಮುಂದೇನು? ‘ಈಗ, ನಾನು ಆ ತಪ್ಪು ಮಾಡಿದೆ ಅಥವಾ ಅವಳು ಆ ತಪ್ಪನ್ನು ಮಾಡಿದಳು’ ಎಂದು ಹಲುಬುತ್ತಿರಬೇಡಿ. ಎಲ್ಲವನ್ನೂ ಮೂಟೆ ಕಟ್ಟಿ ಸಮುದ್ರದೊಳಗೆ ಎಸೆದುಬಿಡಿ. ನಂತರ ಎಚ್ಛೆತ್ತು ಜಗತ್ತನ್ನು ಹೊಸ ಕಣ್ಣುಗಳಿಂದ, ಹೊಸ ಮನಸ್ಸಿನಿಂದ ನೋಡಿ. ಎಲ್ಲವನ್ನೂ ಹೊಸತಾಗಿ ಕಾಣಿ, ಎಲ್ಲರನ್ನೂ ಹೊಸದಾಗಿ ನೋಡಿ.

    ಜೀವನ ಚಕ್ರ ಇದೇ ರೀತಿ ಸಾಗುತ್ತಿರುತ್ತದೆ. ಈ ರೀತಿಯ ಸಾವು- ಹುಟ್ಟುಗಳು ಅನೇಕ ಸಲ ನಡೆದಿವೆ. ನೀವು ಅನೇಕ ಸಲ ಸತ್ತು ಹೋಗಿದ್ದೀರಿ ಮತ್ತು ಹೊಸದಾಗಿ ಹುಟ್ಟಿದ್ದೀರಿ. ನೀವು ಪ್ರತಿ ಕ್ಷಣವೂ ಸಾಯಬಲ್ಲಿರಾದರೆ ಮತ್ತು ಪ್ರತಿ ಕ್ಷಣವೂ ಹುಟ್ಟಬಲ್ಲಿರಾದರೆ, ಅದೇ ಮೋಕ್ಷ, ಅದೇ ಸಂತೋಷ. ವರ್ತಮಾನ ಕ್ಷಣದಲ್ಲಿರುವುದು! ನವೀನವಾದ ಹೊಸ ಜೀವನ. ಗತವೆಲ್ಲವೂ ಹೊರಟು ಹೋಯಿತು. ಈಗ! ಈ ಕ್ಷಣ ನೂರು ಪ್ರತಿಶತ ಜೀವಿಸಿ, ಜೀವನದ ಸವಾಲುಗಳನ್ನು ಎದುರಿಸಲು

    ಸಿದ್ಧರಾಗಿ ಮುನ್ನಡೆಯಿರಿ. ನಿಮ್ಮ ಸುತ್ತಲೂ ಇರುವವರಿಗೆ ನೀವು ಹೇಗೆ ಉಪಯುಕ್ತರಾಗಬಲ್ಲಿರೆಂದು ಆಲೋಚಿಸಿ. ಈ ಆಲೋಚನೆಯನ್ನು ಹೊತ್ತುಕೊಂಡು ಮುನ್ನಡೆಯಿರಿ. ಮನಸ್ಸನ್ನು ನಾಶಪಡಿಸುವು ದೆಂದರೆ ಇದೇ. ಮನಸ್ಸನ್ನು ನಾಶಗೊಳಿಸಿ ಬೆಳಕಿನೆಡೆಗೆ ನಡೆಯಿರಿ. ಮನಸ್ಸನ್ನು ನಾಶಪಡಿಸಿದಾಗ ನೀವೇ ಬೆಳಕೆಂದು ಅರಿತುಕೊಳ್ಳುತ್ತೀರಿ. ಮನಸ್ಸೆಂದರೇನು? ನಮ್ಮ ಸಂಸ್ಕಾರಗಳು, ಗತಕ್ಕೆ ಅಂಟಿಕೊಳ್ಳುವುದು, ಪಶ್ಚಾತ್ತಾಪ ಪಡುವುದು, ಇತರರ ಮೇಲೆ ಮತ್ತು ನಿಮ್ಮ ಮೇಲೆ ಕೋಪಿಸಿ ಕೊಳ್ಳುವುದು, ಒಂದು ಕೊನೆಯಿಲ್ಲದ ಚಕ್ರದಲ್ಲಿ ಸಿಲುಕಿಕೊಳ್ಳುವುದು. ಆ ಮನಸ್ಸನ್ನು ಬಿಟ್ಟು ಪ್ರತಿ ಕ್ಷಣವೂ ಮರಣಿಸಿ. ಹಾಗಿದ್ದರೆ ನನ್ನ ಮನೆಗೆ ದಾರಿಯನ್ನು ಮರೆತುಹೋದರೆ? ಎಂದು ಕೇಳಬೇಡಿ!

    ನೀವು ಪ್ರತಿ ಕ್ಷಣವೂ ಸಾಯುತ್ತೀರಿ, ಪ್ರತಿ ಕ್ಷಣವೂ ಜನಿಸುತ್ತೀರಿ ಎಂದು ತಿಳಿದಾಗ ನಿಮ್ಮ ಸ್ಮೃಯು ತೀಕ್ಷ್ಣವಾಗಿ, ನೀವೆಂದಿಗೂ ಸಾಯಲಿಲ್ಲ ಮತ್ತು ನೀವೆಂದಿಗೂ ಜನಿಸಲಿಲ್ಲ ಎಂದು ಅರಿತುಕೊಳ್ಳು ತ್ತೀರಿ. ನಿಮ್ಮ ಜೀವನ ಅನಂತ ಎಂದು ನಿಮ್ಮ ಆತ್ಮಕ್ಕೆ ತಿಳಿಯುತ್ತದೆ. ಐದು ಅಥವಾ ಹತ್ತು ಸಾವಿರ ವರ್ಷಗಳ ಹಿಂದಿನ ಸ್ಮೃ ಮತ್ತು ಹಿಂದೆ ಈ ಭೂಮಿಯ ಮೇಲೆ ಬಂದ ಎಲ್ಲಾ ಜನ್ಮಗಳ ಸ್ಮೃಯೂ ಬರಬಹುದು.

    ಕೊಹ್ಲಿ ತಬ್ಬಿಕೊಂಡು ಜೈಲು ಪಾಲಾಗಿದ್ದ ಅಭಿಮಾನಿಗೆ ಸಿಕ್ತು ಭರ್ಜರಿ ಸ್ವಾಗತ; ವಿಡಿಯೋ ವೈರಲ್

    ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಆಹ್ವಾನ ತಿರಸ್ಕಾರ: ಅಂಬೇಡ್ಕರ್ ಮೊಮ್ಮಗ ನೀಡಿದ ಕಾರಣವೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts