ಬೆಂಗಳೂರು: ಇದು ಇವರಿಬ್ಬರ ನಡುವಿನ ಸಂಘರ್ಷ, ಆದರೆ ಅದಕ್ಕೆ ಕಾರಣ ಅವಳು. ಆಕೆಗಾಗಿ ಈ ಇಬ್ಬರೂ ಯಾವ ಪರಿ ಕಾದಾಡಿದ್ದರೆಂದರೆ ಒಬ್ಬ ಇನ್ನೊಬ್ಬನನ್ನು ಚಾಕುವಿನಿಂದ ಇರಿದೇ ಬಿಟ್ಟಿದ್ದ. ಕೊನೆಗೂ ಯುವತಿಗಾಗಿ ಜಗಳ ಮಾಡಿಕೊಂಡು ಇರಿದು ಪರಾರಿಯಾಗಿದ್ದ ಇಬ್ಬರನ್ನು ಪೊಲೀಸರು ಪತ್ತೆ ಮಾಡಿ ಬಂಧಿಸಿದ್ದಾರೆ.
ಮುತ್ತುರಾಜ್ ಮತ್ತು ಹೇಮಂತ್ ಬಂಧಿತ ಆರೋಪಿಗಳು. ಹರಿಕೀರ್ತನ್ ಎಂಬಾತ ಇರಿತಕ್ಕೊಳಗಾದ ಯುವಕ. ನಿನ್ನೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳಿಬ್ಬರು ಹರಿಕೀರ್ತನ್ ಚೂರಿ ಇರಿದು ಪರಾರಿಯಾಗಿದ್ದರು.
ಇದನ್ನೂ ಓದಿ: ಭಜರಂಗದಳದ ಕಾರ್ಯಕರ್ತರ ಮೇಲೆ ಹಲ್ಲೆ; ಕಾರು ಅಡ್ಡಗಟ್ಟಿ ರಾಡ್ನಿಂದ ಥಳಿಸಿದ ದುಷ್ಕರ್ಮಿಗಳು..
ವಿದ್ಯಾರ್ಥಿಯಾಗಿರುವ ಹರಿಕೀರ್ತನ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಅದೇ ವಿಚಾರಕ್ಕೆ ಮುತ್ತುರಾಜ್ ಜೊತೆ ದ್ವೇಷ ಬೆಳೆದಿತ್ತು. ಆ ಯುವತಿಯನ್ನು ಭೇಟಿ ಆಗಬಾರದು ಎಂದು ಹರಿಕೀರ್ತನ್ಗೆ ಮುತ್ತುರಾಜ್ ಎಚ್ಚರಿಕೆಯನ್ನೂ ಕೊಟ್ಟಿದ್ದ. ಆದರೆ ಅದನ್ನು ಲೆಕ್ಕಿಸದ ಹರಿಕೀರ್ತನ್ ಆಕೆಯನ್ನು ಭೇಟಿಯಾಗಿದ್ದ.
ಇದನ್ನೂ ಓದಿ: ಗಾಂಜಾ ವ್ಯಸನಿಗಳ ವಿರುದ್ಧ ಪೊಲೀಸರಿಗೆ ಮಾಹಿತಿ ನೀಡಿದ್ದ ಕರಾಟೆ ಮಾಸ್ಟರ್‌ಗೇ ಚೂರಿ ಇರಿತ
ಇದರಿಂದ ಸಿಟ್ಟಾದ ಮುತ್ತುರಾಜ್, ಹೇಮಂತ್ ಎಂಬಾತನ ಜತೆಗೂಡಿ ನಿನ್ನೆ ಸುಂಕದಕಟ್ಟೆ ಬಳಿ ಬಸ್ವೊಂದನ್ನು ಅಡ್ಡಗಟ್ಟಿ ಹರಿಕೀರ್ತನ್ನನ್ನು ತರಾಟೆಗೆ ತೆಗೆದುಕೊಂಡಿದ್ದರು. ಮಾತ್ರವಲ್ಲದೆ ಚಾಕುವಿನಿಂದ ಆತನ ಎದೆ ಮತ್ತಿತರ ಭಾಗಕ್ಕೆ ಇರಿದು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರು ಪೊಲೀಸರು, ಆರೋಪಿಗಳಿಬ್ಬರನ್ನು ಇಂದು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
9 ವರ್ಷಗಳ ಬಳಿಕ ನಕ್ಸಲ್ ನಂಟು ಆರೋಪದಿಂದ ಮುಕ್ತರಾದ್ರು ವಿಠಲ ಮಲೆಕುಡಿಯ ಮತ್ತು ತಂದೆ; ಆರೋಪಮುಕ್ತಗೊಳಿಸಿದ ನ್ಯಾಯಾಲಯ