More

    ಕೊರಿಯನ್​ ವ್ಲಾಗರ್​ಗೆ ಗುಪ್ತಾಂಗ ಪ್ರದರ್ಶಿಸಿದ ಯುವಕ: ವಿಡಿಯೋ ಹರಿಬಿಟ್ಟ ಸಂತ್ರಸ್ತೆ, ನೆಟ್ಟಿಗರ ಆಕ್ರೋಶ

    ನವದೆಹಲಿ: ಕೊರಿಯನ್​ ವ್ಲಾಗರ್​ಗೆ ಗುಪ್ತಾಂಗ ಪ್ರದರ್ಶಿಸುವ ಮೂಲಕ ಅಸಭ್ಯವಾಗಿ ವರ್ತಿಸಿದ ಯುವಕನನ್ನು ಬಂಧಿಸಲಾಗಿದೆ. ಈ ಘಟನೆ ರಾಜಸ್ಥಾನದ ಜೋಧ್​ಪುರದಲ್ಲಿ ನಡೆದಿದೆ.

    ಯುವಕ ಗುಪ್ತಾಂಗ ಪ್ರದರ್ಶಿಸಿದ ವಿಡಿಯೋವನ್ನು ಸಂತ್ರಸ್ತ ಕೊರಿಯನ್​ ವ್ಲಾಗರ್​ ಬಿಡುಗಡೆ ಮಾಡಿದ ಬಳಿಕ ಅದರ ಆಧಾರದ ಮೇಲೆ ಯುವಕನನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.

    ಇದನ್ನೂ ಓದಿ: ರಂಜಾನ್​ ಹಿನ್ನೆಲೆ ಯೆಮೆನ್​ನಲ್ಲಿ ನಡೆದ ಚಾರಿಟಿ ಈವೆಂಟ್​ನಲ್ಲಿ ಕಾಲ್ತುಳಿತ: 85 ಸಾವು, 300ಕ್ಕೂ ಅಧಿಕ ಮಂದಿಗೆ ಗಾಯ

    ಹಿಂಬಾಲಿಸಿ ಅನುಚಿತ ವರ್ತನೆ
    ಜೋಧ್‌ಪುರದ ಪ್ರವಾಸಿ ತಾಣದಲ್ಲಿ ಕೊರಿಯನ್​ ಯುವತಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು. ಈ ವೇಳೆ ಆಕೆಯನ್ನು ಹಿಂಬಾಲಿಸಿದ ಯುವಕನೊಬ್ಬ ಆಕೆಯ ಎದುರೇ ತನ್ನ ಗುಪ್ತಾಂಗವನ್ನು ಪ್ರದರ್ಶಿಸಿ ಹದ್ದು ಮೀರಿದ ವರ್ತನೆ ತೋರಿದ್ದ. ವಿಡಿಯೋ ರೆಕಾರ್ಡ್​ ಮಾಡಿದ್ದ ಯುವತಿ ಅದನ್ನು ಜಾಲತಾಣದಲ್ಲಿ ಹರಿಬಿಟ್ಟಿದ್ದಳು. ವಿಡಿಯೋ ವೈರಲ್​ ಆಗಿ ಯುವಕನ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಕೂಡಲೇ ಬಂಧಿಸುವಂತೆ ಒತ್ತಾಯ ಮಾಡಿದ್ದರು.

    ಇದನ್ನೂ ಓದಿ: ಬಿಜೆಪಿ ಲಿಂಗಾಯತ ನಾಯಕರ ಸಭೆ; ಲಿಂಗಾಯತರೇ ಮುಂದಿನ ಸಿಎಂ ಅಂತ ಘೋಷಿಸಲು ಆಗ್ರಹ
    ಸ್ವಾತಿ ಮಾಲಿವಾಲ್​ ಆಕ್ರೋಶ
    ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಅವರು ಕೊರಿಯನ್ ವ್ಲಾಗರ್‌ನ ವೀಡಿಯೊವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಯುವಕನ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಒತ್ತಾಯಿಸಿ ರಾಜಸ್ಥಾನದ ಮುಖ್ಯಮಂತ್ರಿಗೆ ಸ್ವಾತಿ ಮಾಲಿವಾಲ್​ ಪತ್ರ ಬರೆದಿದ್ದಾರೆ. ಇದರ ಬೆನ್ನಲ್ಲೇ ಆರೋಪಿಯನ್ನು ಬಂಧಿಸಿರುವುದಾಗಿ ರಾಜಸ್ಥಾನ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಕಾಂಗ್ರೆಸ್​ನ ಅಂತಿಮ ಪಟ್ಟಿ ಪ್ರಕಟ: ಶಿಡ್ಲಘಟ್ಟ ಹಾಲಿ ಶಾಸಕ ಮುನಿಯಪ್ಪಗೆ ಟಿಕೆಟ್ ಮಿಸ್

    ರಂಜಾನ್​ ಹಿನ್ನೆಲೆ ಯೆಮೆನ್​ನಲ್ಲಿ ನಡೆದ ಚಾರಿಟಿ ಈವೆಂಟ್​ನಲ್ಲಿ ಕಾಲ್ತುಳಿತ: 85 ಸಾವು, 300ಕ್ಕೂ ಅಧಿಕ ಮಂದಿಗೆ ಗಾಯ

    ಕಾಂಗ್ರೆಸ್​ ಐದನೇ, ಜೆಡಿಎಸ್​ ಮೂರನೇ ಪಟ್ಟಿ ಬೆನ್ನಿಗೇ ಬಿಜೆಪಿ ನಾಲ್ಕನೇ ಪಟ್ಟಿ ಬಿಡುಗಡೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts