More

    ಯಾರು ಈ ಬಚ್ಚಾ ಖಾನ್? ಇವನಿಗೂ ರವಿ ಪೂಜಾರಿಗೂ ಏನು ನಂಟು?

    ಬೆಂಗಳೂರು: ಬಿಲ್ಡರ್ ಸುಬ್ಬರಾಜ್ ಕೊಲೆ ಪ್ರಕರಣದ ತನಿಖೆಗಾಗಿ ಸಿಸಿಬಿ ಪೊಲೀಸರು, ಭೂಗತ ಪಾತಕಿ ರವಿ ಪೂಜಾರಿ ಸಹಚರ ಯೂಸುಫ್​ ಬಚ್ಚಾಖಾನ್ (48) ಎಂಬಾತನನ್ನು ಕಸ್ಟಡಿಗೆ ಪಡೆದಿದ್ದಾರೆ.

    ಮುಂಬೈ ಮೂಲದ ಯೂಸುಫ್ ಸುಲೇಮಾನ್ ಕದ್ರಿ ಅಲಿಯಾಸ್ ಯೂಸುಫ್ ಬಚ್ಚಾಖಾನ್ ಭೂಗತ ಜಗತ್ತಿನಲ್ಲಿ ಶಸಾಸ್ತ್ರ ಪೂರೈಕೆ ಮಾಡುತ್ತಿದ್ದ. ಭೂಗತ ಪಾತಕಿ ಚೋಟಾ ರಾಜನ್ ಮತ್ತು ಆತನ ಬಂಟ ರವಿ ಪೂಜಾರಿ ಜತೆ ನಿಕಟ ಸಂಪರ್ಕ ಹೊಂದಿದ್ದ. ಮೋಸ್ಟ್ ವಾಟೆಂಡ್ ಉಗ್ರ ದಾವೂದ್ ಇಬ್ರಾಹಿಂ ಜತೆಗೂ ಸಂಪರ್ಕ ಹೊಂದಿದ್ದ.

    ಇದನ್ನೂ ಓದಿ; ಚೀನಾ ಸಂಘರ್ಷದಲ್ಲಿ ಬಲಿಯಾದ ಯೋಧನ ಕುಟುಂಬಕ್ಕೆ ಐದು ಕೋಟಿ ರೂ., ಪತ್ನಿಗೆ ಸಹಾಯಕ ಆಯುಕ್ತೆ ಹುದ್ದೆ ನೀಡಿದ ತೆಲಂಗಾಣ

    ಮುಂಬೈ ಸ್ಫೋಟ ಪ್ರಕರಣ, 1998ರಲ್ಲಿ ಕಲಿಯಾ ಕೊಲೆ ಪ್ರಕರಣ, 1999ರಲ್ಲಿ ಬಾಂದ್ರಾ ನಿಲ್ದಾಣದಲ್ಲಿ ಸ್ಫೋಟದಲ್ಲಿಯೂ ಭಾಗಿಯಾಗಿದ್ದ. 2000ರಲ್ಲಿ ರವಿ ಪೂಜಾರಿ ಗ್ಯಾಂಗ್ ಜತೆ ಕೈ ಜೋಡಿಸಿ ಸುಬ್ಬರಾಜ್ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದಾನೆ.
    2001ರಲ್ಲಿ ವೈಯಾಲಿಕಾವಲ್ ಸಮೀಪ ಭೂ ವಿವಾದ ಸಂಬಂಧ ರಿಯಲ್ ಎಸ್ಟೇಟ್ ಉದ್ಯಮಿ ಸುಬ್ಬರಾಜ್ ಹತ್ಯೆ ನಡೆದಿತ್ತು. ಈ ಕೇಸಿನಲ್ಲಿ ಮುಂಬೈ ಮೂಲದ ಯೂಸುಫ್ ಬಚ್ಚಾಖಾನ್ ಸೇರಿ ಐವರಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದ್ದು, ನಗರದ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ.

    ರವಿ ಪೂಜಾರಿ ವಿರುದ್ಧದ ಪ್ರಕರಣಗಳ ತನಿಖೆ ಹೊಣೆಯನ್ನು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದ ತಂಡ ವಹಿಸಿದೆ. ಪೂಜಾರಿ ಹೇಳಿಕೆ ಮೇರೆಗೆ ಬಚ್ಚಾಖಾನ್‌ನನ್ನು ಸೋಮವಾರ ಕಸ್ಟಡಿಗೆ ಪಡೆದಿದೆ. ಬಿಲ್ಡರ್ ಸುಬ್ಬರಾಜ್ ಹತ್ಯೆಗೆ ಮತ್ತೊಬ್ಬ ಭೂಗತ ಪಾತಕಿಗೆ ರವಿ ಪೂಜಾರಿ ಸುಪಾರಿ ನೀಡಿದ್ದ. ಸುಪಾರಿ ಪಡೆದ ಬಚ್ಚಾಖಾನ್ ಗ್ಯಾಂಗ್ 2001ರಲ್ಲಿ ಸುಬ್ಬರಾಜ್‌ನ ಹತ್ಯೆ ಮಾಡಿತ್ತು. ಅದರ ತನಿಖೆ ಕೈಗೊಂಡ ಅಂದಿನ ಐಪಿಎಸ್ ಅಧಿಕಾರಿ ಗೋಪಾಲ್ ಬಿ. ಹೊಸೂರ್ ತಂಡ, ಗ್ಯಾಂಗ್‌ಸ್ಟರ್ ಬಚ್ಚಾಖಾನ್ ಸೇರಿ ಕೆಲವರನ್ನು ಬಂಧಿಸಿತ್ತು. ಇದರಲ್ಲಿ ಐವರಿಗೆ ಶಿಕ್ಷೆಯಾಗಿ ಮುತ್ತಪ್ಪ ರೈ ನಿರ್ದೋಷಿ ಎಂದು ಸಾಬೀತಾಗಿತ್ತು.

    ಇದನ್ನೂ ಓದಿ; 20 ವರ್ಷ ಜೀವಂತವಾಗಿರುತ್ತೆ ಕರೊನಾ; ಹಸಿ ಮಾಂಸ, ಮೀನು ಮುಟ್ಟಬೇಡಿ; ಚೀನಾ ತಜ್ಞರ ಎಚ್ಚರಿಕೆ

    ಬಿಲ್ಡರ್ ಹತ್ಯೆ ಪ್ರಕರಣದ ಹೆಚ್ಚುವರಿ ತನಿಖೆ ಕೈಗೊಂಡಿರುವ ಸಿಸಿಬಿ ಪೊಲೀಸರು, ಕೈದಿ ಬಚ್ಚಾಖಾನ್‌ನನ್ನು ವಶಕ್ಕೆ ಪಡೆದಿದ್ದು, ಹೇಳಿಕೆ ಪಡೆದು ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸಲಿದ್ದಾರೆ. ಇದೇ ಕೇಸಿನಲ್ಲಿ ಮುತ್ತಪ್ಪ ರೈನನ್ನೂ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದರು.

    ನಟ ಸುಶಾಂತ್​ ಸಿಂಗ್​ ರಜಪೂತ್​ ತಿಂಗಳಿಗೆಷ್ಟು ಖರ್ಚು ಮಾಡುತ್ತಿದ್ದರು? ಹಳೇ ಮ್ಯಾನೇಜರ್​ ನೀಡಿದ್ದಾರೆ ಪೊಲೀಸರಿಗೆ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts