More

    ರಸ್ತೆಯಲ್ಲಿ ಹುಚ್ಚುಚ್ಚಾಗಿ ಡಾನ್ಸ್​ ಮಾಡಿದ ಹುಡುಗಿಯ ವಿರುದ್ಧ ಹುಬ್ಬಳ್ಳಿ ಹುಲಿ ವಿಶ್ವನಾಥ್​ ಸಜ್ಜನರ್ ಕಿಡಿ!

    ನವದೆಹಲಿ: ಶಾಲಾ ಸಮವಸ್ತ್ರದಲ್ಲಿ ವಾಹನ ನಿಬಿಡ ರಸ್ತೆಯಲ್ಲೇ ಹುಡುಗಿಯೊಬ್ಬಳು ಹುಚ್ಚು ಹುಚ್ಚಾಗಿ ಕುಣಿದು ಟ್ರಾಫಿಕ್​ನಲ್ಲಿ ಕಿರಿಕಿರಿ ಉಂಟು ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವುದನ್ನು ಗಮನಿಸಿರುವ ಟಿಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಹುಬ್ಬಳ್ಳಿ ಹುಲಿ ವಿಶ್ವನಾಥ್​ ಸಜ್ಜನರ್ ಟೀಕಿಸಿದ್ದಾ​ರೆ.

    ಇಂದಿನ ಯುವಕರು ಇನ್‌ಸ್ಟಾ-ರೀಲ್‌ಗಳು ಮತ್ತು ಯೂಟ್ಯೂಬ್ ಶಾರ್ಟ್‌ಗಳ ಗೀಳನ್ನು ಹೊಂದಿರುವುದು ದುಃಖಕರವಾಗಿದೆ. ಸಮಾಜಕ್ಕೆ ಒಳ್ಳೆಯ ಕೆಲಸಗಳನ್ನು ಮಾಡಿ ನಾಲ್ವರಿಗೆ ಮಾದರಿಯಾಗಿ ನಿಲ್ಲಬೇಕಾದ ಯುವಕರು, ಸಾಮಾಜಿಕ ಜಾಲತಾಣದ ಗೀಳನ್ನು ಅಂಟಿಸಿಕೊಂಡು ಬದುಕನ್ನು ಹಾಳು ಮಾಡಿಕೊಳ್ಳುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ರಾತ್ರೋರಾತ್ರಿ ಜನಪ್ರಿಯವಾಗಲು, ರಸ್ತೆಯಲ್ಲಿ ಇಂತಹ ಹುಚ್ಚು ಹುಚ್ಚುತನಗಳನ್ನು ಮಾಡುತ್ತಾ ಇತರರಿಗೆ ತೀವ್ರ ತೊಂದರೆ ಕೊಡುವುದರಲ್ಲಿ ಏನು ಸಂತೋಷ? ಎಂದು ಟೀಕಾಪ್ರಹಾರ ನಡೆಸಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ಶಾಲಾ ಸಮವಸ್ತ್ರದಲ್ಲಿರುವ ಹುಡುಗಿ, ಟ್ರಾಫಿಕ್​ ಸಿಗ್ನಲ್​ ಇರುವಂತಹ ವಾಹನ ನಿಬಿಡ ರಸ್ತೆಯ ಒಂದು ಬದಿಯಿಂದ ನಿಧಾನವಾಗಿ ಮುಂದಕ್ಕೆ ಚಲಿಸಿ, ನಡು ರಸ್ತೆಗೆ ಬಂದ ಕೂಡಲೇ ತನ್ನ ಬಳಿಯಿದ್ದ ಬ್ಯಾಗ್​ ಅನ್ನು ತೆಗೆದು ರಸ್ತೆಗೆ ಎಸೆಯುತ್ತಾಳೆ. ಆ ಬ್ಯಾಗ್​ ಅನ್ನು ಬೇರೊಬ್ಬ ವಿದ್ಯಾರ್ಥಿ ಎತ್ತಿಕೊಳ್ಳುತ್ತಾನೆ. ಇತ್ತ ಹುಡುಗಿ ದಿಢೀರನೇ ರಸ್ತೆಯ ಮೇಲೆ ಮಲಗಿ ವಿಚಿತ್ರ ಭಂಗಿಯಲ್ಲಿ ಅಶ್ಲೀಲವಾಗಿ ಡಾನ್ಸ್​ ಮಾಡುತ್ತಾಳೆ. ಆದರೆ, ರಸ್ತೆಯಲ್ಲಿ ಏನು ನಡೆಯುತ್ತಿದೆ ಎಂಬ ಅರಿವು ಇಲ್ಲದೆ ಟ್ರಾಫಿಕ್​ನಲ್ಲಿ ನಿಂತ ವಾಹನ ಸವಾರರು ಹುಡುಗಿಯನ್ನೇ ನೋಡುತ್ತಿರುತ್ತಾರೆ.

    ಯಾರು ಈ ಸಜ್ಜನರ್​?
    ಸೈಬರಾಬಾದ್‌ನ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದ ಸಜ್ಜನರ್​ ಅವರು ಪ್ರಸ್ತುತ ಟಿಎಸ್​ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಸಜ್ಜನರ ಅವರು ಸೈಬರಾಬಾದ್‌ ಆಯುಕ್ತರಾಗಿದ್ದಾಗ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಮಾತ್ರವಲ್ಲದೆ ಹಲವಾರು ಸೇವಾ ಕಾರ್ಯಕ್ರಮಗಳನ್ನು ಕೈಗೊಂಡರು. ಸೈಬರಾಬಾದ್ ಪೊಲೀಸ್ ಕಮೀಷನರೇಟ್‌ನಲ್ಲಿ ಹಲವಾರು ಸುಧಾರಣೆಗಳನ್ನು ಪ್ರಾರಂಭಿಸಿದರು ಮತ್ತು ಕೋವಿಡ್ -19 ಮೊದಲ ಅಲೆಯ ಸಮಯದಲ್ಲಿ ವಲಸೆ ಕಾರ್ಮಿಕರು ತಮ್ಮ ಮನೆಗಳನ್ನು ತಲುಪಲು ಸಹಾಯ ಮಾಡುವಲ್ಲಿ ಮುಂಚೂಣಿಯಲ್ಲಿದ್ದರು. ಹೈದರಾಬಾದ್​ನ ಪಶುವೈದ್ಯೆಯನ್ನು ಹತ್ಯೆ ಮಾಡಿದವರನ್ನು ಎನ್​ಕೌಂಟರ್​ ಮಾಡಿದ ಪ್ರಕರಣದಲ್ಲಿ ವಿಶ್ವನಾಥ್​ ಸಜ್ಜನರ್ ಭಾರಿ ಸುದ್ದಿಯಾದರು. ಅವರ​ ಸಾಹಸವನ್ನು ರಾಷ್ಟ್ರದೆಲ್ಲೆಡೆ ಜನರು ಶ್ಲಾಘಿಸಿದರು. ವಿಶ್ವನಾಥ್​ ಅವರು ಮೂಲತಃ ಕರ್ನಾಟಕದ ಹುಬ್ಬಳ್ಳಿ ಮೂಲದವರು.

    ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಹುಡುಗಿಯ ವರ್ತನೆ ವಿರುದ್ಧ ಹರಿಹಾಯ್ದಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಈ ರೀತಿಯ ವರ್ತನೆ ಸರಿಯಲ್ಲ, ಅದರಲ್ಲೂ ಟ್ರಾಫಿಕ್​ ಜಾಮ್​ ಸಂದರ್ಭದಲ್ಲಿ ಈ ರೀತಿ ನಡೆದುಕೊಳ್ಳಬಾರದು. ಇದು ಬೇಜವಾಬ್ದಾರಿತನ ಮತ್ತು ಸಂಭಾವ್ಯ ಅಪಾಯಕಾರಿ ಎಂದು ಟೀಕಿಸುತ್ತಿದ್ದಾರೆ.

    ಹುಡುಗಿಯ ಅತಿರೇಕದ ವರ್ತನೆ ಜನದಟ್ಟಣೆಯ ಸಮಯದಲ್ಲೇ ಸಂಭವಿಸಿದೆ. ಪ್ರಯಾಣಿಕರು ಪೂರ್ವಸಿದ್ಧತೆಯಿಲ್ಲದ ಅನಿರೀಕ್ಷಿತ ಪ್ರದರ್ಶನವನ್ನು ವೀಕ್ಷಿಸಿದರಿಂದ ಸಂಚಾರದಲ್ಲಿ ತಾತ್ಕಾಲಿಕ ಸ್ಥಗಿತವೂ ಆಯಿತು. ಕೆಲ ವಾಹನ ಚಾಲಕರು ಹುಡುಗಿಯ ವಿರುದ್ಧ ಹತಾಶೆಯನ್ನು ವ್ಯಕ್ತಪಡಿಸಿದರು. ಆದರೆ, ಕೆಲವರು ಹುಡುಗಿಯ ಮನನರಂಜನಾ ಸ್ವಭಾವವನ್ನು ಮೆಚ್ಚಿಕೊಂಡರೆ, ಇನ್ನು ಕೆಲವರು ಸಾರ್ವಜನಿಕ ಸುರಕ್ಷತೆ ಮತ್ತು ಸುವ್ಯವಸ್ಥೆಯ ಬಗ್ಗೆ ಹುಡುಗಿಗೆ ಪಾಠ ಮಾಡಿದ್ದಾರೆ.

    ರಾಷ್ಟ್ರ ರಾಜಧಾನಿ ದೆಹಲಿ, ಕೋಲ್ಕತ್ತ, ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರು ಸೇರಿದಂತೆ ಮುಂತಾದ ಮೆಟ್ರೋಪಾಲಿಟನ್ ನಗರಗಳಲ್ಲಿ ಇಂತಹ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ರೀಲ್ಸ್​ಗಾಗಿ ಯುವ ಜನಾಂಗ ಮನಬಂದಂತೆ ವರ್ತಿಸುತ್ತಿದೆ. ಅದರಲ್ಲೂ ಸಾರ್ವಜನಿಕರಿಗೆ ಮುಜುಗರ ಉಂಟು ಮಾಡುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದು, ಇದಕ್ಕೆಲ್ಲ ಕಡಿವಾಣ ಬೀಳಬೇಕಿದೆ. (ಏಜೆನ್ಸೀಸ್​)

    ಹುಬ್ಬಳ್ಳಿ ಹುಲಿ ವಿಶ್ವನಾಥ ಸಜ್ಜನರ್ ವರ್ಗಾವಣೆ: ಸೈಬರಾಬಾದ್​ ಪೊಲೀಸ್​ ಆಯುಕ್ತರಾಗಿ ಸ್ಟೆಫೆನ್​ ರವೀಂದ್ರ ನೇಮಕ!

    ಭಾರತ್ ಜೋಡೋ ಯಾತ್ರೆ 2.0ನಲ್ಲಿ ರಾಹುಲ್ ಜತೆಯಾಗಲಿದ್ದಾರೆ ಸಹೋದರಿ ಪ್ರಿಯಾಂಕಾ ಗಾಂಧಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts