More

    ಭಾರತ್ ಜೋಡೋ ಯಾತ್ರೆ 2.0ನಲ್ಲಿ ರಾಹುಲ್ ಜತೆಯಾಗಲಿದ್ದಾರೆ ಸಹೋದರಿ ಪ್ರಿಯಾಂಕಾ ಗಾಂಧಿ

    ನವದೆಹಲಿ: ಲೋಕಸಭೆ ಚುನಾವಣೆ ಸನಿಹವಾಗುತ್ತಿರುವ ಬೆನ್ನಲ್ಲೇ ಎರಡನೇ ಹಂತದ ಭಾರತ್ ಜೋಡೋ ಯಾತ್ರೆ ಆರಂಭಿಸಲು ಕಾಂಗ್ರೆಸ್ ನಿರ್ಧರಿಸಿದೆ. ಜನವರಿ ಮೊದಲ ವಾರದಿಂದಲೇ ಯಾತ್ರೆ ಆರಂಭವಾಗಬಹುದು. ಮೂಲಗಳ ಪ್ರಕಾರ, 2024 ರ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್​ ಗಾಂಧಿ ಜತೆಯಾಗಿ ಸಹೋದರಿ ಪ್ರಿಯಾಂಕಾ ಗಾಂಧಿ ಕೂಡಾ ಇರಲಿದ್ದಾರೆ ಎನ್ನಲಾಗಿದೆ.

    ಭಾರತ್ ಜೋಡೋ ಯಾತ್ರೆಯ ಮೊದಲ ಹಂತವು 2022ರ ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಗಿ ಜನವರಿ 2023 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಅಂತ್ಯವಾಯಿತು. ಇದು 126 ದಿನಗಳಲ್ಲಿ 12 ರಾಜ್ಯಗಳ 75 ಜಿಲ್ಲೆಗಳ ಮೂಲಕ ಸರಿಸುಮಾರು 4,080 ಕಿಲೋಮೀಟರ್ ದೂರವನ್ನು ಕ್ರಮಿಸಿತು ಇದು ಭಾರತದ ಅತೀ ಉದ್ದದ ಪಾದಯಾತ್ರೆ ಎಂದು ಗುರುತಿಸಲಾಗಿದೆ.

    2024ರ ಭಾರತ್ ಜೋಡೋ ಯಾತ್ರೆ 2.0 ಜನವರಿಯಿಂದ ದೇಶದ ಪೂರ್ವದಿಂದ ಪಶ್ಚಿಮಕ್ಕೆ ಹೋಗುವ ಮಾರ್ಗದಲ್ಲಿ ಗಾಂಧಿ ಒಡಹುಟ್ಟಿದವರು ಒಟ್ಟಿಗೆ ಸೇರಬಹುದು. ಪಕ್ಷ ಈ ಯಾತ್ರೆಯನ್ನು ಯೋಜಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

    ಸೆಪ್ಟೆಂಬರ್ 2022 ರಿಂದ 2023 ರ ಜನವರಿವರೆಗೆ ಸುಮಾರು 150 ದಿನಗಳಲ್ಲಿ ರಾಹುಲ್ ಗಾಂಧಿಯವರು ಕನ್ಯಾಕುಮಾರಿಯಿಂದ ಶ್ರೀನಗರದ ಕಾಲ್ನಡಿಗೆಯ ಮೆರವಣಿಗೆ ಅಂತಿಮಗೊಳಿಸುವಾಗ ಕೆಲವು ಸಲಹೆಯನ್ನು ಯೋಜಕರು ಚರ್ಚಿಸಿದ್ದಾರೆ. “ಇಡೀ ಯಾತ್ರೆಯಲ್ಲಿ ಸಹೋದರಿ ಸಹೋದರನೊಂದಿಗೆ ಸೇರಿಕೊಳ್ಳುವ ಪ್ರಸ್ತಾಪವನ್ನು ಚರ್ಚಿಸಲಾಗಿದೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಜತೆಯಾಗಿ ನಡೆಯುವುದಾಗಿ ದೊಡ್ಡ ಪ್ರಸ್ತಾಪವಾಗಿದೆ. ಆದರೆ ಈ ಕುರಿತಾಗಿ ಯಾವುದೇ ತೀರ್ಮಾನವನ್ನು ಕೈ ಗೊಂಡಿಲ್ಲ. ಆದರೆ ಲೋಕಸಭೆ ಚುನಾವಣೆ ಇರುವುದರಿಂದ ಎಲ್ಲಾ ಸೂಕ್ಷ್ಮತೆಯನ್ನು ಪರಿಗಣಿಸಿ ತೀರ್ಮಾನ ತೆಗೆದುಕೊಳ್ಳುವುದು ಮುಖ್ಯವಾಗಿದೆ. ಆದರೆ ಈ ಕುರಿತಾಗಿ ಯಾವುದೇ ಅಂತೀಮ ತೀರ್ಮಾನವನ್ನು ಕೈಗೊಂಡಿಲ್ಲ ಎಂದು ಕಾಂಗ್ರೆಸ್​​ ನಾಯಕರೊಬ್ಬರು ತಿಳಿಸಿದ್ದಾರೆ.

    ಈ ಹಿಂದೆ ನಡೆದ ಭಾರತ್​ ಜೋಡೋ ಯಾತ್ರೆಯಲ್ಲಿ ಕೆಲವು ಕಲಾವಿಧರು ಭಾಗಿಯಾಗಿ ಈ ಯಾತ್ರೆಗೆ ಇನ್ನುಷ್ಟು ಮೆರಗೆ ಹಾಗೂ ಮಹತ್ವವನ್ನು ತಂದಿದ್ದರು. ಅಂತೆಯೆ ಈ ಬಾರಿಯೂ ಕೂಡಾ ಸ್ಟಾರ್​ ಕಲಾವಿದರನ್ನು ಈ ಯಾತ್ರೆಯ ಭಾಗವಾಗಿ ಕರೆತರಲು ಯೋಚಿಸಲಾಗಿದೆ. ಒಟ್ಟಾರೆಯಾಗಿ ರಾಹುಲ್​​ ಗಾಂಧಿ ಹಾಗೂ ಪ್ರಿಯಾಂಕಾ ಅವರು ಮುಂದಾಳತ್ವದಲ್ಲಿ ನಡೆಯುತ್ತಿರುವ ಈ ಯಾತ್ರೆಯಲ್ಲಿ ಮಹಿಳೆಯರು, ಯುವಜನತೆ, ಗ್ರಾಮೀಣ ಜನರ ಗಮನ ಸೆಳೆಯುವುದನ್ನು ಕೇಂದ್ರಿಕರಿಸಲಾಗಿದೆ.

    ಕಾಂಗ್ರೆಸ್​​ ಕಾರ್ಯಕಾರಿ ಸಮಿತಿಯಲ್ಲಿ ಭಾರತ್​ ಜೋಡೋ ಯಾತ್ರೆ 2.0 ಮಾಡುವುದಾಗಿ ರಾಹುಲ್​​ ಗಾಂಧಿ ಪ್ರಸ್ತಾಪಿಸಿದ್ದಾರೆ. ಆದರೆ ಲೋಕಸಭೆಯ ಚುನಾವಣೆ ಸಮೀಪವಾದ ಹಿನ್ನೆಲೆ ನಾಲ್ಕೈದು ತಿಂಗಳು ರಸ್ತೆಯಲ್ಲಿಯೇ ಸಮಯ ಕಳೆಯಲು ಸಾಧ್ಯವಿಲ್ಲ ಎನ್ನುವುದನ್ನು ಗಮನಿಸಲಾಗಿದೆ. ಹೀಗಾಗಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಎರಡನೇ ಹಂತದ ಭಾರತ್ ಜೋಡೋ ಯಾತ್ರೆ ಹೈಬ್ರಿಡ್ ಮೋಡ್‍ನಲ್ಲಿರಲಿದೆ, ಯಾತ್ರೆಯಲ್ಲಿ ಭಾಗವಹಿಸುವವರು ಕಾಲ್ನಡಿಗೆಯಲ್ಲಿ ಅಥಾವ ಮತ್ತು ವಾಹನ ಬಳಬಹುದಾಗಿದ್ದು ರಾಹುಲ್‍ಗಾಂಧಿ ಮಾತ್ರ ಕಾಲ್ನಡಿಗೆಯಲ್ಲಿ ಯಾತ್ರೆ ಮಾಡಲಿದ್ದಾರೆ ಎನ್ನಲಾಗಿದೆ.

    ಪ್ರಿಯಾಂಕಾ ಅವರನ್ನು ಭಾರತ್​ ಜೋಡೋ ಯಾತ್ರೆ ಕಣಕ್ಕಿಳಿಸಲು ಹೆಚ್ಚುವರಿ ಕಾರಣವೆಂದರೆ, ರಾಹುಲ್ ಅವರನ್ನು ಚುನಾವಣಾ ಕಾರ್ಯಕ್ರಮಗಳಿಗೆ ಅಥವಾ ಸಭೆಗಳಿಗೆ ಯಾತ್ರೆಯ ಮಾರ್ಗದಿಂದ ಹೊರಗೆ ಹೋಗಲು ಮುಕ್ತವಾಗಿ ಬಿಡುತ್ತಾರೆ ಎಂದು ಮೂಲಗಳು ತಿಳಿಸಿವೆ.

    ಕೈಯಿಂದ ತಿನ್ನುವುದು ಏಕೆ ಒಳ್ಳೆಯದು…ವೈಜ್ಞಾನಿಕ ಕಾರಣ ತಿಳಿಯಿರಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts