More

    ಒಣಗಿಸಿದ್ದ ಬಟ್ಟೆ ತರಲು ಹೋದ ಯುವತಿಯನ್ನು ಅಪಹರಿಸಿ ರೇಪ್​ ಮಾಡಿದ ಪಾಪಿಗಳು!

    ಪಟನಾ: ತೊಳೆದು ಒಣೆಸಿದ್ದ ಬಟ್ಟೆಯನ್ನು ತರಲು ಮನೆಯಿಂದ ಹೊರನಡೆದ ಯುವತಿಯನ್ನು ಯುವಕರ ಗ್ಯಾಂಗ್ ಒಂದು ಅಪಹರಿಸಿ ಅತ್ಯಾಚಾರವೆಸಗಿರುವ ಘಟನೆ ಬಿಹಾರದ ಮುಜಾಫರ್​ಪುರದಲ್ಲಿ ನಡೆದಿದೆ. ಯುವತಿ ಬುಧವಾರ ಬೆಳಗ್ಗೆ ಮನೆ ಹತ್ತಿರದ ಮೋರಿಯ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ಹೇಳಲಾಗಿದೆ.

    ಇದನ್ನೂ ಓದಿ: ಬ್ರಿಟನ್‌ನಿಂದ ಬಂದಿರುವ ವ್ಯಕ್ತಿಯ ಪ್ರಾಥಮಿಕ ಸಂಪರ್ಕಿತನಿಗೆ ಕರೊನಾ ; ತುಮಕೂರು ಜಿಲ್ಲಾಡಳಿತ ನಿದ್ದೆಗೆಡಿಸಿದ ವರದಿ

    ಮುಜಾಫರ್​ಪುರದ ಕಾಂತಿ ಪೊಲೀಸ್​ ಠಾಣಾ ವ್ಯಾಪ್ತಿಯ ಪುಟ್ಟ ಗ್ರಾಮವೊಂದರಲ್ಲಿ ವಾಸಿಸುವ ಕುಟುಂಬದ ಮಗಳು ಮಂಗಳವಾರ ರಾತ್ರಿ 10 ಗಂಟೆ ಹೊತ್ತಿಗೆ ಮನೆಯಿಂದ ಹೊರಗೆ ಬಂದಿದ್ದಾಳೆ. ಅಂಗಳದಲ್ಲಿ ಒಣಗಿಸಿದ್ದ ಬಟ್ಟೆ ತೆಗೆದುಕೊಂಡು ರೂಮಿಗೆ ಹೋಗಲು ಮುಂದಾಗಿದ್ದಾಳೆ. ಮೊದಲೇ ಹೊಂಚು ಹಾಕಿ ಕುಳಿತಿದ್ದ ಯುವಕರ ಗ್ಯಾಂಗ್​ ಒಂದು ಹಿಂದಿನಿಂದ ಆಕೆಯ ಬಾಯಿಯನ್ನು ಒತ್ತಿ ಹಿಡಿದು ಎಳೆದುಕೊಂಡು ಹೋಗಿದೆ. ಎಷ್ಟು ಹೊತ್ತಾದರೂ ಮಗಳು ಮನೆ ಒಳಗೆ ಬಾರದಿರುವುದು ನೋಡಿ ತಂದೆ ತಾಯಿ ಎಲ್ಲೆಡೆ ಮಗಳಿಗಾಗಿ ಹುಡುಕಾಡಿದ್ದಾರೆ.

    ಇದನ್ನೂ ಓದಿ: ಇವ್ನು ನನ್ನ ಗಂಡ… ಇವ್ನು ನನ್ನ ಗಂಡ… ಒಬ್ಬನಿಗಾಗಿ ಅಕ್ಕ-ತಂಗಿ ಕಿತ್ತಾಟ: ಪೊಲೀಸರಿಗೆ ತಲೆನೋವು!

    ಬುಧವಾರ ಬೆಳಗ್ಗೆ ಯುವತಿಯು ಪ್ರಜ್ಞಾಹೀನ ಸ್ಥಿತಿಯಲ್ಲಿ ಮನೆಯ ಹತ್ತಿರವಿದ್ದ ಮೋರಿಯ ಬಳಿ ಸಿಕ್ಕಿದ್ದಾಳೆ. ತಕ್ಷಣ ಪೊಲೀಸರಿಗೆ ವಿಚಾರ ಮುಟ್ಟಿಸಲಾಗಿದೆ. ಗ್ರಾಮಸ್ಥರ ಸಹಾಯದಿಂದ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ. ಈ ವಿಚಾರವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಸರ್ಪೈಸ್​ ನೀಡಲು ಮನೆಗೆ ಬಂದ ಗಂಡನಿಗೆ ಕಾದಿತ್ತು ಬಿಗ್​ ಶಾಕ್​! ಹೆಂಡತಿಯ ಇನ್ನೊಂದು ರೂಪ ನೋಡಿದ ಗಂಡ ಮಾಡಿದ್ದೇನು?

    ಮೂಗಿನ ಸರ್ಜರಿ ಮಾಡಿಸಿ, ಎರಡೂ ಕಾಲು ಕಳೆದುಕೊಂಡ ಯುವತಿ! ಚಿಕನ್​ ತಿಂದಿದ್ದೇ ಕಾರಣ ಎಂದ ಆಸ್ಪತ್ರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts