More

    ಬ್ರಿಟನ್‌ನಿಂದ ಬಂದಿರುವ ವ್ಯಕ್ತಿಯ ಪ್ರಾಥಮಿಕ ಸಂಪರ್ಕಿತನಿಗೆ ಕರೊನಾ; ತುಮಕೂರು ಜಿಲ್ಲಾಡಳಿತದ ನಿದ್ದೆಗೆಡಿಸಿದ ವರದಿ

    ತುಮಕೂರು: ಕರೊನಾ ವೈರಸ್ ರೂಪಾಂತರಿ ಅವಾಂತರ ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ಬ್ರಿಟನ್‌ನಿಂದ ಬಂದಿರುವ ವ್ಯಕ್ತಿಯ ಪ್ರಾಥಮಿಕ ಸಂಪರ್ಕಿತರೊಬ್ಬರಿಗೆ ಕರೊನಾ ದೃಢಪಟ್ಟಿರುವುದು ತೀವ್ರ ಆತಂಕ ಸೃಷ್ಟಿಸಿದೆ.

    ಡಿಸೆಂಬರ್ ಮೊದಲ ವಾರದಿಂದ ಈವರೆಗೆ ಬ್ರಿಟನ್‌ನಿಂದ ಜಿಲ್ಲೆಗೆ 17 ಮಂದಿ ಬಂದಿದ್ದು, ಎಲ್ಲರ ಮಾಹಿತಿ, ವಿಳಾಸ ಪತ್ತೆ ಹಚ್ಚಿ ಅವರ ಗಂಟಲುದ್ರವ ಸಂಗ್ರಹಿಸಿ ಕೋವಿಡ್ ಪರೀಕ್ಷೆಗೊಳಪಡಿಸಲಾಗಿತ್ತು. ಈಗ ಎಲ್ಲರ ವರದಿ ಬಂದಿದ್ದು ಬ್ರಿಟನ್‌ನಿಂದ ಜಿಲ್ಲೆಗೆ ಹಿಂದಿರುಗಿದವರಲ್ಲಿ ಯಾರಿಗೂ ಸೋಂಕು ಇಲ್ಲದಿರುವುದು ವರದಿಯಲ್ಲಿ ದೃಢಪಟ್ಟಿದೆ.

    ಇದನ್ನೂ ಓದಿ: ಒಣಗಿಸಿದ್ದ ಬಟ್ಟೆ ತರಲು ಹೋದ ಯುವತಿಯನ್ನು ಅಪಹರಿಸಿ ರೇಪ್​ ಮಾಡಿದ ಪಾಪಿಗಳು!

    ಬ್ರಿಟನ್‌ನಿಂದ ಬಂದ 17 ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಿ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇವರಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಇದು ಜಿಲ್ಲಾಡಳಿತಕ್ಕೆ ತಲೆಬಿಸಿ ತಂದಿದೆ. ಸೋಂಕಿತನ ಪ್ರಾಥಮಿಕ ಸಂಪರ್ಕಿತರ ಗಂಟಲು ದ್ರವ ಸಂಗ್ರಹಿಸಿ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ.

    ಈ ಹಿನ್ನೆಲೆಯಲ್ಲಿ ಬ್ರಿಟನ್‌ನಿಂದ ಬಂದಿರುವ 17 ಜನ ಹಾಗೂ ಅವರ ಪ್ರಾಥಮಿಕ ಸಂಪರ್ಕಿತರನ್ನು ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದು ಅವರ ಮೇಲೆ ನಿಗಾವಹಿಸಲಾಗಿದೆ. ಆರೋಗ್ಯ ಇಲಾಖೆಯಿಂದ ವಿಶೇಷ ತಂಡಗಳನ್ನು ಮಾಡಿ ಬ್ರಿಟನ್‌ನಿಂದ ಬಂದವರ ಆರೋಗ್ಯದ ಪ್ರತಿದಿನದ ಮಾಹಿತಿ ಪಡೆಯಲು ಸೂಚಿಸಲಾಗಿದೆ. ಯಾವುದೇ ರೀತಿಯ ರೋಗಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಜಿಲ್ಲಾ ಆರೋಗ್ಯ ಇಲಾಖೆ ಸಂಪರ್ಕಿಸಲು ಕಟ್ಟುನಿಟ್ಟಿನ ಆದೇಶ ಕೊಡಲಾಗಿದೆ.

    ಇದನ್ನೂ ಓದಿ: ಇವ್ನು ನನ್ನ ಗಂಡ… ಇವ್ನು ನನ್ನ ಗಂಡ… ಒಬ್ಬನಿಗಾಗಿ ಅಕ್ಕ-ತಂಗಿ ಕಿತ್ತಾಟ: ಪೊಲೀಸರಿಗೆ ತಲೆನೋವು!

    ನಿಮ್ಹಾನ್ಸ್‌ಗೆ ಮಾದರಿ: ಬ್ರಿಟನ್‌ನಿಂದ ಬಂದ ಪ್ರಾಥಮಿಕ ಸಂಪರ್ಕಿತರಲ್ಲಿ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸೋಂಕಿತರ ರಕ್ತ ಮಾದರಿ, ಗಂಟಲುದ್ರವ ಮಾದರಿಯನ್ನು ಬೆಂಗಳೂರಿನ ನಿಮ್ಹಾನ್ಸ್‌ಗೆ ಕಳುಹಿಸಲಾಗಿದ್ದು ಅದು ಕರೊನಾ ಅಥವಾ ರೂಪಾಂತರಿ ಕರೊನಾವೇ ಎಂಬುದನ್ನು ದೃಢಪಡಿಸಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 306: ಜಿಲ್ಲೆಯಲ್ಲಿ 36 ಜನರಿಗೆ ಕರೊನಾ ದೃಢವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 23175ಕ್ಕೇರಿದೆ. ಆಸ್ಪತ್ರೆಯಿಂದ 52 ಜನ ಬಿಡುಗಡೆಯಾಗಿದ್ದು, ಈವರೆಗೆ 22428 ಜನರು ಗುಣಮುಖರಾಗಿದ್ದಾರೆ. 306 ಸಕ್ರಿಯ ಪ್ರಕರಣ ಉಳಿದಿವೆ.  ಚಿಕ್ಕನಾಯಕನಹಳ್ಳಿ, ಗುಬ್ಬಿ, ತಿಪಟೂರು ತಲಾ 3, ಕೊರಟಗೆರೆ, ತುರುವೇಕೆರೆ ತಲಾ 4, ತುಮಕೂರು ತಾಲೂಕಿನಲ್ಲಿ 19 ಜನರು ಒಟ್ಟು 36 ಜನರಿಗೆ ಸೋಂಕು ತಗುಲಿದ್ದು ಕುಣಿಗಲ್, ಮಧುಗಿರಿ, ಪಾವಗಡ, ಶಿರಾ ತಾಲೂಕಿನಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಸೋಂಕಿತರ ಪೈಕಿ ಪುರುಷರು 18, ಮಹಿಳೆಯರು 18 ಜನರಿದ್ದು 60 ವರ್ಷ ಮೇಲ್ಪಟ್ಟ 8 ಹಿರಿಯರಿದ್ದಾರೆ.

    ಸರ್ಪೈಸ್​ ನೀಡಲು ಮನೆಗೆ ಬಂದ ಗಂಡನಿಗೆ ಕಾದಿತ್ತು ಬಿಗ್​ ಶಾಕ್​! ಹೆಂಡತಿಯ ಇನ್ನೊಂದು ರೂಪ ನೋಡಿದ ಗಂಡ ಮಾಡಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts