More

    ಮತದಾರರ ಸಾಕ್ಷರತಾ ಸಂಘಗಳ ಸ್ಥಾಪನೆ

    ಶಿವಮೊಗ್ಗ: ಚುನಾವಣಾ ಆಯೋಗದ ನಿರ್ದೇಶನದಂತೆ ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ ಮತದಾರರ ಸಾಕ್ಷರತಾ ಸಂಘಗಳನ್ನು ಸ್ಥಾಪಿಸಲಾಗಿದೆ. ವಿಶೇಷವಾಗಿ ಯುವ ಮತದಾರರ ನೋಂದಣಿ ಕಾರ್ಯ ತ್ವರಿತಗತಿಯಲ್ಲಿ ಸಾಗಬೇಕಾಗಿದೆ ಎಂದು ಜಿಪಂ ಸಿಇಒ ಎಂ.ಎಲ್.ವೈಶಾಲಿ ತಿಳಿಸಿದರು.

    ಶನಿವಾರ ನಗರ ಮೇರಿ ಇಮ್ಯಾಕ್ಯುಲೇಟ್ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಪ್ರಬಂಧ, ರಸಪ್ರಶ್ನೆ, ಭಿತ್ತಿಪತ್ರ ಮತ್ತು ಕೋಲಾಜ್ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಅರ್ಹತೆ ಹೊಂದಿದ ಎಲ್ಲರೂ ಮತದಾನ ಮಾಡುವಂತೆ ಮನವರಿಕೆ ಮಾಡಿಕೊಡಬೇಕೆಂದರು.

    ಡಿಡಿಪಿಐ ಎನ್.ಎಂ.ರಮೇಶ್ ಅಧ್ಯಕ್ಷತೆ ವಹಿಸಿದ್ದರು. ವಿಷಯ ಪರಿವೀಕ್ಷಕ ಎಂ.ಸತೀಶ್, ನವೀದ್ ಅಹಮ್ಮದ್ ಫರ್ವೀಜ್, ಬಿಇಒ ಎಚ್.ಆರ್.ಕೃಷ್ಣಮೂರ್ತಿ ಇತರರಿದ್ದರು.

    ವಿಜೇತರ ವಿವರ: ಪ್ರಬಂಧ ಸ್ಪರ್ಧೆ (ಕನ್ನಡ ಮಾಧ್ಯಮ): 1.ವಿ.ವಿ.ಆದ್ವಿ, ಎಸ್​ಎಸ್​ಎಲ್​ಸಿ, ಜಯನಗರ, ಹೊಸನಗರ ತಾಲೂಕು, 2.ಎಂ.ವಿ.ವರ್ಷಿಣಿ, 9 ನೇ ತರಗತಿ, ರಾಮಕೃಷ್ಣಪುರ ತೀರ್ಥಹಳ್ಳಿ ತಾಲೂಕು, 3.ಎಸ್.ಎನ್.ಮಾನ್ಯ, ಎಸ್​ಎಸ್​ಎಲ್​ಸಿ, ಎಂಎಲ್ ಹಳ್ಳಿ ಸಾಗರ ತಾಲೂಕು

    ಪ್ರಬಂಧ ಸ್ಪರ್ಧೆ (ಆಂಗ್ಲ ಮಾಧ್ಯಮ): 1. ಕೆ.ಪ್ರಿಯಾ, ಎಸ್​ಎಸ್​ಎಲ್​ಸಿ, ಮುರಾರ್ಜಿ ದೇಸಾಯಿ ವಸತಿ ಶಾಲೆ, ಮಂಚಿಕೊಪ್ಪ, ಶಿಕಾರಿಪುರ, 2.ಪಿ.ಕೆ.ರಿಷಿಕುಮಾರ್, ಎಸ್​ಎಸ್​ಎಲ್​ಸಿ, ಬಿಜಿಎಸ್, ಶಿವಮೊಗ್ಗ, 3. ನಿಫಾ, 9ನೇ ತರಗತಿ ಕನಕ ವಿದ್ಯಾ ಸಂಸ್ಥೆ, ಭದ್ರಾವತಿ.

    ರಸಪ್ರಶ್ನೆ: 1. ಎಚ್.ಎಂ.ಶಶಾಂಕ್ ಹಾಗೂ ಶ್ರಾವ್ಯ, ಗುಡ್ಡೇಕೊಪ್ಪ, ತೀರ್ಥಹಳ್ಳಿ ತಾಲೂಕು, 2.ನಾಗಭೂಷಣ ಮತ್ತು ಎಂ.ಸಾತ್ವಿಕ್, ಚಿಕ್ಕಜೇನಿ, ಹೊಸನಗರ ತಾಲೂಕು, 3. ಎ.ತನುಶ್ರೀ ಮತ್ತು ಎಸ್.ಪೂರ್ಣಚಂದ್ರ, ಸಹ್ಯಾದ್ರಿ ಪ್ರೌಢಶಾಲೆ, ಭದ್ರಾವತಿ ತಾಲೂಕು.

    ಭಿತ್ತಿ ಪತ್ರ ಮತ್ತು ಕೋಲಾಜ್: 1.ಮನಸ್ವಿನಿ ಆರ್.ಆಚಾರ್ಯ, ಯು.ಆರ್. ಅನಂತಮೂರ್ತಿ ಪ್ರೌಢಶಾಲೆ, ತೀರ್ಥಹಳಿ, 2.ವೈ.ಎಚ್.ಸ್ಪೂರ್ತಿ, ಕೆಪಿಎಸ್, ಆನಂದಪುರ, ಸಾಗರ ತಾಲೂಕು, 3.ಎಂ.ಎಸ್.ವಿನಾಯಕ, ಸೆಂಟ್ ಚಾರ್ಲ್ಸ್, ಭದ್ರಾವತಿ ತಾಲೂಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts