More

    ಗ್ರಾಮಸ್ಥರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಹೋದವನ ದುರಂತ ಸಾವು: ‘ಆಘಾತಕಾರಿ’ ಘಟನೆ..

    ಚಿತ್ರದುರ್ಗ: ಈತ ಗ್ರಾಮಸ್ಥರಿಗೆ ಕುಡಿಯುವ ನೀರು ಸಮಸ್ಯೆ ಆಗಿದೆ ಎಂಬ ಕಾರಣಕ್ಕೆ ಅದರ ವ್ಯವಸ್ಥೆ ಮಾಡಲು ಹೋಗಿದ್ದ. ಆದರೆ ವಿಧಿವಿಪರ್ಯಾಸ ಎಂಬಂತೆ ಈತ ಕುಡಿಯುವ ನೀರಿಗಾಗಿ ವ್ಯವಸ್ಥೆ ಮಾಡುವಾಗಲೇ ಸಾವಿಗೀಡಾಗಿದ್ದಾನೆ. ಚಿತ್ರದುರ್ಗ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ.

    ಆದರ್ಶ (24) ಸಾವಿಗೀಡಾದ ಯುವಕ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಮದ್ದನಕುಂಟೆ ಗ್ರಾಮದಲ್ಲಿ ಈ ಅವಘಡ ಸಂಭವಿಸಿದೆ. ಈ ಸಾವಿಗೆ ಗ್ರಾಮಪಂಚಾಯತ್ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮದ್ದನಕುಂಟೆ ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಎರಡು ದಿನಗಳಿಂದ ಸಮಸ್ಯೆ ಉಂಟಾಗಿತ್ತು. ಅಲ್ಲಿನ ವಿದ್ಯುತ್ ಸಂಪರ್ಕ ಸರಿಪಡಿಸಲು ಎಂ.ಡಿ. ಕೋಟೆ ಗ್ರಾಮ ಪಂಚಾಯತ್ ಅಧಿಕಾರಿಗಳು ಆದರ್ಶನನ್ನು ಕಳುಹಿಸಿಕೊಟ್ಟಿದ್ದರು. ಆ ಸಂದರ್ಭದಲ್ಲಿ ಈತ ವಿದ್ಯುತ್ ಪ್ರವಹಿಸಿ, ಆಘಾತಕ್ಕೊಳಗಾಗಿ ಸಾವಿಗೀಡಾಗಿದ್ದಾನೆ.

    ಇದನ್ನೂ ಓದಿ: ಹೆಚ್ಚಾಗುತ್ತಿದೆಯಾ ಪೊಲೀಸರ ಆತ್ಮಹತ್ಯೆ?; ಸರ್ವಿಸ್​ ರಿವಾಲ್ವರ್​​ನಿಂದ ಶೂಟ್​ ಮಾಡ್ಕೊಂಡ ಕಾನ್​ಸ್ಟೆಬಲ್​!

    ಬೇಜವಾಬ್ದಾರಿತನ ತೋರಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸಂಬಂಧಿಕರು-ಸ್ಥಳೀಯರು ಆಗ್ರಹಿಸಿದ್ದಾರೆ. ಐಮಂಗಲ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಯುವಕ ಸಂಬಂಧಪಟ್ಟ ಕೆಲಸ ಮಾಡುವಾತನೇ ಎಂಬ ಕುರಿತು ಖಚಿತ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ.

    ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕನ ಬಂಧನ..

    2 ಬಸ್​ಗಳ ಮಧ್ಯೆ ಭೀಕರ ಅಪಘಾತ: ಒಬ್ಬ ಚಾಲಕನಿಗೆ ಗಂಭೀರ ಗಾಯ, 50ಕ್ಕೂ ಹೆಚ್ಚು ಪ್ರಯಾಣಿಕರು ಆಸ್ಪತ್ರೆಗೆ ದಾಖಲು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts