2 ಬಸ್​ಗಳ ಮಧ್ಯೆ ಭೀಕರ ಅಪಘಾತ: ಒಬ್ಬ ಚಾಲಕನಿಗೆ ಗಂಭೀರ ಗಾಯ, 50ಕ್ಕೂ ಹೆಚ್ಚು ಪ್ರಯಾಣಿಕರು ಆಸ್ಪತ್ರೆಗೆ ದಾಖಲು..

ಶಿವಮೊಗ್ಗ: ಕೆಎಸ್​ಆರ್​ಟಿಸಿ ಮತ್ತು ಖಾಸಗಿ ಬಸ್​ ಮಧ್ಯೆ ಅಪಘಾತ ಸಂಭವಿಸಿದ್ದು, ಇದರಲ್ಲಿ ಒಬ್ಬ ಚಾಲಕನಿಗೆ ಗಂಭೀರವಾದ ಗಾಯವಾಗಿದ್ದು, 50ಕ್ಕೂ ಹೆಚ್ಚು ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಮೊಗ್ಗ ತಾಲೂಕಿನ ತೋಟದಕೆರೆ ಬಳಿ ಈ ಅಪಘಾತ ಸಂಭವಿಸಿದೆ. ಖಾಸಗಿ ಬಸ್ ಚಾಲಕ ಶ್ರೀಧರ್ ಸ್ಥಿತಿ ಗಂಭೀರವಾಗಿದ್ದು, ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಾತ್ರವಲ್ಲದೆ ಇಬ್ಬರು ಪ್ರಯಾಣಿಕರಿಗೂ ತೀವ್ರ ಗಾಯಗಳಾಗಿವೆ. ಗಾಯಗೊಂಡಿರುವ ಇತರ 50ಕ್ಕೂ ಹೆಚ್ಚು ಪ್ರಯಾಣಿಕರಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಖಾಸಗಿ ಬಸ್​ ಶಿವನೊಗ್ಗದಿಂದ ಶೃಂಗೇರಿಗೆ ಹಾಗೂ … Continue reading 2 ಬಸ್​ಗಳ ಮಧ್ಯೆ ಭೀಕರ ಅಪಘಾತ: ಒಬ್ಬ ಚಾಲಕನಿಗೆ ಗಂಭೀರ ಗಾಯ, 50ಕ್ಕೂ ಹೆಚ್ಚು ಪ್ರಯಾಣಿಕರು ಆಸ್ಪತ್ರೆಗೆ ದಾಖಲು..