More

    ನೇಣು ಬಿಗಿದುಕೊಳ್ಳುವ ವೇಳೆ ಮರದ ಮೇಲಿಂದ ಬಿದ್ದ ಯುವಕ ಸಾವು!

    ದೊಡ್ಡಬಳ್ಳಾಪುರ: ಹಣ ಕೊಡುವ ವಿಚಾರಕ್ಕೆ ಹೆತ್ತವರೊಂದಿಗೆ ಜಗಳವಾಡಿದ ಯುವಕ ಮನನೊಂದು ಮರಕ್ಕೆ ಪಂಚೆ ಕಟ್ಟಿ ನೇಣಿಗೆ ಯತ್ನಿಸಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಸರ್ಕಾರಿ ಶಾಲೆ ಆವರಣದಲ್ಲಿ ಸೋಮವಾರ ಪತ್ತೆಯಾಗಿದೆ.

    ನಗರದ ಭಗತ್ ಸಿಂಗ್ ಕ್ರೀಡಾಂಗಣದ ಮುಂಭಾಗದಲ್ಲಿನ ಸರ್ಕಾರಿ ಶಾಲೆ ಅವರಣದಲ್ಲಿ ಘಟನೆ ನಡೆದಿದ್ದು, ಘಟನೆಯಲ್ಲಿ ನಾಗೇಂದ್ರ ಪ್ರಸಾದ್ ( 29 ) ಸಾವನ್ನಪ್ಪಿದ್ದಾನೆ, ಮೃತ ಯುವಕ ಕರನೇಹಳ್ಳಿಯ ನಿವಾಸಿಯಾಗಿದ್ದು, ಮಗ್ಗದ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಎಂದು ತಿಳಿದು‌ ಬಂದಿದೆ.

    ನೇಣು ಬಿಗಿದುಕೊಳ್ಳುವ ವೇಳೆ ಮರದ ಮೇಲಿಂದ ಬಿದ್ದ ಯುವಕ ಸಾವು!

    ಮಗ್ಗದ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ನಾಗೇಂದ್ರ ಪ್ರಸಾದ್ ಕೂಲಿ ಹಣವನ್ನ ಮನೆಯವರಿಗೆ ಕೊಡುತ್ತಿರಲಿಲ್ಲ, ಕೂಲಿಯಿಂದ ಬಂದ ಹಣವನ್ನ ಸಿನಿಮಾ ನೋಡುವುದಕ್ಕೆ ಖರ್ಚು ಮಾಡುತ್ತಿದ್ದ, ಇದೇ ವಿಚಾರಕ್ಕೆ ಹೆತ್ತವರ ಜೊತೆ ಜಗಳವಾಗುತ್ತಿತ್ತು, ಇದೇ ವಿಚಾರಕ್ಕೆ ಭಾನುವಾರ ಜಗಳವಾಗಿದ್ದು ಇದರಿಂದ ಮನನೊಂದ ಆತ ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿದ್ದಾನೆ.

    ಭಾನುವಾರ ಸಂಜೆಯ ಸುಮಾರಿಗೆ ಭಗತ್ ಸಿಂಗ್ ಕ್ರೀಡಾಂಗಣ ಮುಂಭಾಗದಲ್ಲಿನ ಸರ್ಕಾರಿ ಶಾಲೆಯ ಅವರಣಕ್ಕೆ ಬಂದಿದ್ದಾನೆ, ತಂದಿದ್ದ ಪಂಚೆಯನ್ನು ಮರಕ್ಕೆ ಕಟ್ಟಿ ನೇಣಿಗೆ ಶರಣಾಗುವ ಯತ್ನ ಮಾಡಿದ್ದಾನೆ, ನೇಣಿಗೆ ಕೊರಳೊಡ್ಡಿದ ನಂತರ ಆತ ಕೈಕಾಲು ಜೋರಾಗಿ ಆಡಿಸಿದ್ದಾನೆ, ಈ ವೇಳೆ ಪಂಚೆ ಕಟ್ ಆಗಿ ನೆಲಕ್ಕೆ ಬಿದ್ದಿದ್ದಾನೆ, ತಲೆ ನೇರವಾಗಿ ನೆಲಕ್ಕೆ ತಾಗಿದ ಪರಿಣಾಗಿ ತೀರ್ವವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ, ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts