More

    ಮಾದಕ ದ್ರವ್ಯ ಸೇವನೆಯಿಂದ ಯುವ ಪೀಳಿಗೆ ಹಾಳು

    ಶಿರಸಿ: ಮಾದಕ ದ್ರವ್ಯ ಸೇವನೆಯಿಂದ ಯುವ ಪೀಳಿಗೆ ಹಾಳಾಗುತ್ತಿದೆ. ಯುವಜನತೆ ದುಶ್ಚಟಗಳಿಂದ ದೂರವಿದ್ದು, ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದು ಡಿವೈಎಸ್​ಪಿ ಗಣೇಶ ಕೆ.ಎಲ್. ಹೇಳಿದರು.

    ಶಿರಸಿ ನಗರ ಪೊಲೀಸ್ ಠಾಣೆ ಮತ್ತು ಶಿರಸಿ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಮಾದಕ ದ್ರವ್ಯ ವಿರೋಧ ಮತ್ತು ವ್ಯಸನದಿಂದ ಸಮಾಜದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಜಾಥಾ ಮತ್ತು ಮಾದಕ ವ್ಯಸನ ಮುಕ್ತ ಭಾರತಕ್ಕಾಗಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಶಿರಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂದೇಶ ಭಟ್ ಬೆಳಖಂಡ ಮಾತನಾಡಿ, ಪೊಲೀಸ್ ಇಲಾಖೆ ಮಾದಕ ವಸ್ತುಗಳ ಸೇವನೆ, ಸಾಗಾಟದ ತಂಡದ ಮೇಲೆ ದಾಳಿ ನಡೆಸಿದಾಗ ಇನ್ನೂ ಹದಿಹರೆಯವರೆ ಇದರಲ್ಲಿ ಭಾಗಿಯಾಗಿರುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.

    ಸಹಿ ಸಂಗ್ರಹ ಮತ್ತು ಜಾಥಾ ಅಭಿಯಾನವು ಶಿರಸಿ ನಗರದ ಬಿಡ್ಕಿ ಸರ್ಕಲ್​ದಿಂದ ಪ್ರಾರಂಭಗೊಂಡು ಡ್ರೈವರ್ ಕಟ್ಟೆ, ಶಿವಾಜಿ ಚೌಕ್, ಬಿಡ್ಕಿ, ಸಿ.ಪಿ. ಬಜಾರ, ಬಾರ್ಕರ್ ಚೌಕ್, ವಾಜಪೇಯಿ ವೃತ್ತ, ನಟರಾಜ್ ರಸ್ತೆ ಮೂಲಕ ಸಂಚರಿಸಿ ಹಳೇ ಬಸ್ ನಿಲ್ದಾಣದ ಹತ್ತಿರ ಸಂಪನ್ನಗೊಂಡಿತು.

    ಸಿಪಿಐ ರಾಮಚಂದ್ರ ನಾಯಕ, ನಗರ ಠಾಣೆ ಪಿಎಸ್​ಐಗಳಾದ ನಾಗಪ್ಪ ಬಿ, ಮಹಾಂತೇಶ ಕುಂಬಾರ, ಪತ್ರಕರ್ತರಾದ ಪ್ರದೀಪ ಶೆಟ್ಟಿ, ನರಸಿಂಹ ಅಡಿ, ಮಂಜುನಾಥ ಸಾಯೀಮನೆ, ರಾಜೇಂದ್ರ ಹೆಗಡೆ, ಮಂಜುನಾಥ ಈರ್ಗೆಪ್ಪ, ಶಿವಪ್ರಸಾದ ಹಿರೇಕೈ, ಹುಲಿಗೇಶ್, ಗಣೇಶ ಆಚಾರ್ಯ, ಗುರುಪ್ರಸಾದ ಶಾಸ್ತ್ರೀ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts