More

    12 ಗಂಟೆಯೊಳಗೆ ವಾಪಸ್​ ಬರುವುದಿದ್ದರೆ ಆ ಪ್ರಯಾಣಕ್ಕೆ ಟೋಲ್​ ಇಲ್ಲ!: ಏನಿದರ ಅಸಲಿಯತ್ತು?

    ನವದೆಹಲಿ: ದೇಶದಲ್ಲಿ ಎಲ್ಲೇ ಹೋದರೂ ಒಂದಲ್ಲ ಒಂದು ಕಡೆ ಟೋಲ್ ಮೂಲಕ ಹಾದುಹೋಗಬೇಕಾದ್ದು ಅನಿವಾರ್ಯ. ಮಾತ್ರವಲ್ಲ, ಅಂಥ ಪ್ರಯಾಣಕ್ಕೆ ತಕ್ಕ ಟೋಲ್ ಶುಲ್ಕ ಕೊಡಬೇಕಾದ್ದು ಕೂಡ ಅನಿವಾರ್ಯ. ಸೋಷಿಯಲ್ ಮೀಡಿಯಾದಲ್ಲಿ ಈ ಟೋಲ್​ ಕುರಿತ ಸುದ್ದಿಯೊಂದು ಹರಿದಾಡುತ್ತಿದ್ದು, ಒಂದಷ್ಟು ಗೊಂದಲ ಕೂಡ ಉಂಟಾಗಲಾರಂಭಿಸಿದೆ.

    ಅದರಲ್ಲೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಹೆಸರಿನಲ್ಲೇ ವದಂತಿಯೊಂದನ್ನು ಹರಿಬಿಟ್ಟು ಗೊಂದಲ ಉಂಟು ಮಾಡಲಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಪ್ರೆಸ್​ ಇನ್​ಫಾರ್ಮೇಷನ್​ ಬ್ಯೂರೋ (ಪಿಐಬಿ) ಸತ್ಯಪರಿಶೀಲನೆ ನಡೆಸಿ ಸ್ಪಷ್ಟನೆಯನ್ನೂ ನೀಡಿದೆ.

    ಟೋಲ್​ನಲ್ಲಿ 12 ಗಂಟೆಯೊಳಗೆ ವಾಪಸ್​ ಬರುವುದಿದ್ದರೆ ಆ ವಾಪಸ್ ಪ್ರಯಾಣಕ್ಕೆ ಟೋಲ್ ಪಾವತಿಸುವಂತಿಲ್ಲ ಎಂದು ಸಚಿವ ನಿತಿನ್​ ಗಡ್ಕರಿ ಆದೇಶ ಹೊರಡಿಸಿದ್ದಾರೆ. ಅವರಿಗೆ ಧನ್ಯವಾದಗಳು ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಇದು ಸುಳ್ಳು, ಸರ್ಕಾರ ಇಂಥ ಯಾವುದೇ ಆದೇಶ ಮಾಡಿಲ್ಲ ಎಂದು ಪಿಐಬಿ ಸ್ಪಷ್ಟಪಡಿಸಿದೆ.

    ರಾಜ್ಯದಲ್ಲಿ ಬಿಡುವು ಕೊಟ್ಟಿದ್ದ ಭಾರಿ ಮಳೆ ಮತ್ತೆ ಶುರು; ಯಾವಾಗಿಂದ? ಇಲ್ಲಿದೆ ಮಾಹಿತಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts