ಹೂಡಿಕೆಯ ಮೊತ್ತ ಎಷ್ಟೇ ದೊಡ್ಡದಾಗಿರಲಿ ಅಥವಾ ಚಿಕ್ಕದಾಗಿರಲಿ ಇನ್ನೂ ಅನೇಕ ಮಂದಿಗೆ ಹೂಡಿಕೆಯ ಮೂಲಕ ಉತ್ತಮ ಲಾಭ ಗಳಿಸುವಂತಹ ಯೋಜನೆಗಳ ಬಗ್ಗೆ ತಿಳಿದಿಲ್ಲ. ಹೂಡಿಕೆದಾರರು ಹೆಚ್ಚಿನ ಲಾಭ ಪಡೆಯಲು ಅಂಚೆ ಇಲಾಖೆಯಲ್ಲಿ ಹಲವು ಯೋಜನೆಗಳಿವೆ. ಅವುಗಳನ್ನು ಸರಿಯಾಗಿ ತಿಳಿದುಕೊಂಡು ಹೂಡಿಕೆ ಮಾಡಿದಾಗ ಹೆಚ್ಚಿನ ಲಾಭ ಪಡೆದು ಜೀವನದಲ್ಲಿ ಆರ್ಥಿಕ ದೃಢತೆಯನ್ನು ಕಾಯ್ದುಕೊಳ್ಳಬಹುದಾಗಿದೆ. ಇಂಥದ್ದೆ ಯೋಜನೆಯೊಂದರ ಬಗ್ಗೆ ನಾವಿಂದು ನಿಮಗೆ ತಿಳಿಸುತ್ತೇವೆ.
ಏನಿದು ದಿ ನ್ಯಾಷನಲ್ ಸೇವಿಂಗ್ಸ್ ಟೈಮ್ ಡೆಪಾಸಿಟ್ ಅಕೌಂಟ್ (ಎನ್ಎಸ್ಡಿಎ) ಯೋಜನೆ?
ಇದೊಂದು ಸ್ಥಿರ ಅಥವಾ ನಿಶ್ಚಿತ ಹೂಡಿಕೆ ಯೋಜನೆಯಾಗಿದೆ. ಹೂಡಿಕೆದಾರರು ಕ್ರಮವಾಗಿ ಒಂದು, ಎರಡು, ಮೂರು ಮತ್ತು ಐದು ವರ್ಷಗಳಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕಾದ ಕನಿಷ್ಠ ಮೊತ್ತ 1000 ರೂಪಾಯಿ. ನಂತರ ಮಾಸಿಕ ಠೇವಣಿಗಳನ್ನು 100ರ ಗುಣಕಗಳಲ್ಲಿ ಇಡುತ್ತಾ ಹೋಗಬಹುದು. ಯಾವುದೇ ಮೊತ್ತವನ್ನು ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
ಬಡ್ಡಿ ದರ
ಒಂದು ವರ್ಷದ ನಿಶ್ಚಿತ ಠೇವಣಿಗೆ ಶೇ. 6.9 ಬಡ್ಡಿ, ಎರಡು ವರ್ಷದ ಠೇವಣಿಗೆ ಶೇ. 7 ಬಡ್ಡಿ, ಮೂರು ವರ್ಷಗಳ ಠೇವಣಿಗೆ ಶೇಕಡಾ 7.1 ಬಡ್ಡಿ ಮತ್ತು ಐದು ವರ್ಷಗಳ ಠೇವಣಿಗೆ ಶೇ. 7.5 ಬಡ್ಡಿ. ಠೇವಣಿದಾರರು ವಾರ್ಷಿಕವಾಗಿ ಅಥವಾ ಮೂರು ತಿಂಗಳಲ್ಲಿ ನಾಲ್ಕು ಕಂತುಗಳಲ್ಲಿ ಬಡ್ಡಿಯನ್ನು ಪಡೆಯುತ್ತಾರೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 30ಸಿ ಅಡಿಯಲ್ಲಿ ಐದು ವರ್ಷಗಳ ಸ್ಥಿರ ಹೂಡಿಕೆಯು ಹೆಚ್ಚುವರಿ ತೆರಿಗೆ ಪ್ರಯೋಜನಗಳನ್ನು ಪಡೆಯುತ್ತದೆ.
ಉದಾಹರಣೆಗೆ ನೀವು ಒಂದು ವರ್ಷಕ್ಕೆ 10 ಲಕ್ಷ ರೂಪಾಯಿಗಳ ನಿಶ್ಚಿತ ಠೇವಣಿ ಮಾಡಿದರೆ, ನಿಮಗೆ ವರ್ಷಕ್ಕೆ 70,806 ರೂ. ಬಡ್ಡಿ ಸಿಗುತ್ತದೆ. ಅಲ್ಲದೆ, ಹೂಡಿಕೆದಾರರಿಗೆ ಹೂಡಿಕೆ ಹಣ ಸೇರಿ ಒಂದೇ ವರ್ಷದಲ್ಲಿ 10,70806 ರೂ. ದೊರೆಯುತ್ತದೆ. ಅದೇ ರೀತಿ ನೀವು ಎರಡು ವರ್ಷಗಳ ಯೋಜನೆಯಲ್ಲಿ 10 ಲಕ್ಷ ರೂ. ಹೂಡಿಕೆ ಮಾಡಿದರೆ, ನಿಮಗೆ 148,882 ರೂ. ಬಡ್ಡಿಯನ್ನು ಪಡೆಯುತ್ತೀರಿ, ಒಟ್ಟು 11,488,82 ರೂ. ದೊರೆಯುತ್ತದೆ. ಮೂರು ವರ್ಷಕ್ಕೆ 10 ಲಕ್ಷ ಹೂಡಿಕೆ ಮಾಡಿದರೆ 2,35,075 ಬಡ್ಡಿ ಹಣ ದೊರೆಯುತ್ತದೆ. ಒಟ್ಟು 12,35,075 ರೂ. ದೊರೆಯುತ್ತದೆ. ಐದು ವರ್ಷಗಳ ದೀರ್ಘ ಸಮಯದವರೆಗೆ 10 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ನಿಮಗೆ 449,948 ರೂಪಾಯಿ ಬಡ್ಡಿಯೊಂದಿಗೆ ಒಟ್ಟು 14,499,48 ರೂಪಾಯಿಗಳನ್ನು ಪಡೆಯಬಹುದು.
ಈ ಯೋಜನೆಗೆ ಯಾರು ಸೇರಬಹುದು?
ವಯಸ್ಕರು ವೈಯಕ್ತಿಕವಾಗಿ ಅಥವಾ ಮೂರು ಗುಂಪುಗಳಲ್ಲಿ ಯೋಜನೆಗೆ ಸೇರಬಹುದು ಮತ್ತು ಹತ್ತು ವರ್ಷದೊಳಗಿನ ಮಕ್ಕಳಿಗಾಗಿ ಪಾಲಕರು ಕೂಡ ಯೋಜನೆಗೆ ಸೇರಬಹುದು. (ಏಜೆನ್ಸೀಸ್)
ದಯವಿಟ್ಟು ಈ ರೀತಿ ಮಾಡ್ಬೇಡಿ ತುಂಬಾ ನೋವಾಗಿದೆ! ಕ್ಯಾಮೆರಾ ಮುಂದೆ ನಟಿ ಮೀನಾ ಕಣ್ಣೀರು