More

    ಹೈದರಾಬಾದ್​ಗೆ ಮರುನಾಮಕರಣ ಮಾಡಲು ಹೊರಟ ಯೋಗಿ; ಬಿಜೆಪಿ ಗೆದ್ದರೆ ಭಾಗ್ಯನಗರವೆಂದು ಹೆಸರು ಬದಲಾವಣೆ

    ಹೈದರಾಬಾದ್​: ತೆಲಂಗಾಣದ ಹೈದರಾಬಾದ್​ನಲ್ಲಿ ಮಹಾನಗರ ಪಾಲಿಕೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿವೆ. ಟಿಆರ್​ಎಸ್​, ಎಐಎಂಐಎಂ ಮತ್ತು ಬಿಜೆಪಿ ಪಕ್ಷಗಳು ನಗರದಲ್ಲಿ ಚುನಾವಣಾ ಪ್ರಚಾರ ಮುಂದುವರಿಸಿವೆ. ಬಿಜೆಪಿ ಪರವಾಗಿ ಪ್ರಚಾರಕ್ಕೆ ಬಂದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ, ಹೈದರಾಬಾದ್​ನ ಹೆಸರನ್ನು ಬದಲಾಯಿಸುವುದಾಗಿ ಹೇಳಿದ್ದಾರೆ.

    ಇದನ್ನೂ ಓದಿ: ಲಾಕ್​ಡೌನ್​ನಲ್ಲಿ ಅತ್ತೆ ಮನೆಯಲ್ಲಿದ್ದ ಅಳಿಯನಿಗೆ ನಾದಿನಿ ಮೇಲೆ ಪ್ರೀತಿ; ತಂಗಿಯೊಡನೆ ಕಾಲ್ಕಿತ್ತ ಪತಿರಾಯ

    ನಾವು ಫೈಜಾಬಾದ್​ ಅನ್ನು ಅಯೋಧ್ಯೆಯಾಗಿ ಮರುನಾಮಕರಣ ಮಾಡಿದ್ದೇವೆ. ಅಲಹಾಬಾದ್​ನ್ನು ಪ್ರಯಾಗ್​ರಾಜ್​ ಮಾಡಿದ್ದೇವೆ. ಹಾಗಿದ್ದ ಮೇಲೆ ಹೈದರಾಬಾದ್​ ಹೆಸರನ್ನು ಬದಲಾಯಿಸಲು ಏಕೆ ಸಾಧ್ಯವಿಲ್ಲ. ಒಂದು ವೇಳೆ ಬಿಜೆಪಿ ಇಲ್ಲಿ ಅಧಿಕಾರಕ್ಕೆ ಬಂದರೆ ಹೈದರಾಬಾದ್​ನ್ನು ಭಾಗ್ಯನಗರವಾಗಿ ಬದಲಾಯಿಸುತ್ತೇವೆ ಎಂದು ಅವರು ಹೇಳಿದರು.

    ಇದನ್ನೂ ಓದಿ: ಮಕ್ಕಳ ಮೊಬೈಲ್​ನಲ್ಲಿ ಅಮ್ಮನ ರಾಸಲೀಲೆ ಫೋಟೋಸ್​! ದೂರಾದ ಲವರ್​ನಿಂದ ಮಹಿಳೆಗೆ ಕಾದಿತ್ತು ಶಾಕ್​

    ಎಐಎಂಐಎಂನ ಮುಖ್ಯ ಭೂಮಿ ಎಂದು ಕರೆಸಿಕೊಳ್ಳುವ ಹೈದರಾಬಾದ್​ನಲ್ಲಿ, ಎಂಐಎಂಐಎಂನ ವಿರುದ್ಧ ಸಾಕಷ್ಟು ದೂರನ್ನು ಯೋಗಿ ಮಾಡಿದ್ದಾರೆ. ಎಂಐಎಂಐಎಂ ಶಾಸಕ ಬಿಹಾರದಲ್ಲಿ ಪ್ರಮಾಣವಚನ ಸ್ವೀಕರಿಸುವಾಗ ಹಿಂದೂಸ್ಥಾನ ಎಂದು ಹೇಳಲಾಗುವುದಿಲ್ಲ ಎಂದರು. ಭಾರತ್​ ಎಂದು ಪ್ರಮಾಣವಚನ ಸ್ವೀಕರಿಸಿದರು. ಅವರಿಗೆ ಬದುಕಲು ಹಿಂದೂಸ್ಥಾನವೇ ಬೇಕು ಆದರೆ ಪ್ರಮಾಣ ವಚನ ಸ್ವೀಕರಿಸಲು ಬೇಡ. ಇದು ಎಐಎಂಐಎಂನ ನಿಜವಾದ ಮುಖ ಎಂದು ಅವರು ದೂರಿದ್ದಾರೆ. (ಏಜೆನ್ಸೀಸ್​)

    ತಾಯಿಯನ್ನು ಬಲಿ ಪಡೆದಿದ್ದ ಉಮಾಶ್ರೀ ಕಾರಿಗೆ ಮಗಳ ಜೀವವೂ ಹೋಯ್ತು!

    ಇನ್ನೇನು ಮೃತದೇಹ ಶವಗಾರದಲ್ಲಿಡಬೇಕು ಅಷ್ಟರಲ್ಲಿ ದಿಢೀರನೆ ಎದ್ದು ಕುಳಿತು ಕಣ್ಣೀರಿಟ್ಟ ಸತ್ತ ವ್ಯಕ್ತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts