More

    ಮೇರಠ್ ಕ್ರೀಡಾ ವಿಶ್ವವಿದ್ಯಾಲಯಕ್ಕೆ ಹಾಕಿ ದಿಗ್ಗಜ ಧ್ಯಾನ್‌ಚಂದ್ ಹೆಸರು?

    ಮೇರಠ್: ಹಾಕಿ ದಿಗ್ಗಜ ಮೇಜರ್ ಧ್ಯಾನ್‌ಚಂದ್ ಹೆಸರನ್ನು ಮೇರಠ್ ಕ್ರೀಡಾ ವಿಶ್ವವಿದ್ಯಾಲಯಕ್ಕೆ ಇಡಲು ಉತ್ತರಪ್ರದೇಶ ಸರ್ಕಾರ ತೀರ್ಮಾನಿಸಿದೆ. ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಎರಡು ಪ್ರಮುಖ ನಿರ್ಧಾರಗಳನ್ನು ಘೋಷಿಸಿದರು. ಕ್ರೀಡಾ ವಿಶ್ವವಿದ್ಯಾಲಯಕ್ಕೆ ಧ್ಯಾನ್‌ಚಂದ್ ಹೆಸರು ಹಾಗೂ ಎರಡೂ ಕ್ರೀಡೆಗಳನ್ನು ದತ್ತು ಪಡೆಯುವುದಾಗಿ ಹೇಳಿದರು. ಈಗಾಗಲೇ ಕೇಂದ್ರ ಸರ್ಕಾರ ಪ್ರತಿಷ್ಠಿತ ಖೇಲ್‌ರತ್ನ ಪ್ರಶಸ್ತಿಗೆ ಧ್ಯಾನ್‌ಚಂದ್ ಹೆಸರನ್ನು ಮರುನಾಮಕರಣ ಮಾಡಿದೆ. ಉತ್ತರ ಪ್ರದೇಶ ಅಲ್ಲದೆ, ಬೇರೆ ರಾಜ್ಯಗಳ ಕ್ರೀಡಾಪಟುಗಳಿಗೂ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.

    ಇದನ್ನೂ ಓದಿ: ಕ್ರಿಕೆಟ್ ಚಟುವಟಿಕೆಗಳಿಗೆ ಅಡ್ಡಿ ಮಾಡಲ್ಲ ಎಂದ ತಾಲಿಬಾನಿ ಉಗ್ರರು

    ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತರನ್ನು ಸನ್ಮಾನಿಸಿ ಮಾತನಾಡಿದ ಯೋಗಿ ಆದಿತ್ಯನಾಥ್, ಕುಸ್ತಿ ಹಾಗೂ ಕ್ರೀಡಾ ಇಲಾಖೆ ಸೂಚಿಸುವ ಮತ್ತೊಂದು ಕ್ರೀಡೆಯನ್ನು ದತ್ತು ಪಡೆಯುವುದಾಗಿ ಘೋಷಿಸಿದರು. ಮೇರಠ್‌ನಲ್ಲಿ ನಿರ್ಮಿಸಲಾಗುತ್ತಿರುವ ಕ್ರೀಡಾ ವಿಶ್ವವಿದ್ಯಾಲಯಕ್ಕೆ ಮೇಜರ್ ಧ್ಯಾನ್‌ಚಂದ್ ಹೆಸರು ಇಡಲು ನಿರ್ಧರಿಸಲಾಗಿದೆ. ಅಲ್ಲದೆ, ಲಖನೌದಲ್ಲಿ ರೆಸ್ಲಿಂಗ್ ಅಕಾಡೆಮಿ ಸ್ಥಾಪಿಸುವುದಾಗಿ ಹೇಳಿದರು.

    ಇದನ್ನೂ ಓದಿ: ಲಿಯೋನೆಲ್ ಮೆಸ್ಸಿ ಬಳಸಿದ್ದ ಟಿಶ್ಯು ಪೇಪರ್ 7.44 ಕೋಟಿ ರೂಪಾಯಿಗೆ ಸೇಲ್!

    ಟೋಕಿಯೊ ಒಲಿಂಪಿಕ್ಸ್ ಸ್ವರ್ಣ ಪದಕ ವಿಜೇತ ನೀರಜ್ ಚೋಪ್ರಾಗೆ 2 ಕೋಟಿ ರೂ. ಬೆಳ್ಳಿ ಪದಕ ವಿಜೇತರಾದ ರವಿ ದಹಿಯಾ ಹಾಗೂ ಮೀರಾಬಾಯಿ ಚಾನುಗೆ ತಲಾ 1.5 ಕೋಟಿ ರೂ, ಕಂಚಿನ ಪದಕ ವಿಜೇತರಾದ ಪಿವಿ ಸಿಂಧು, ಭಜರಂಗ್ ಪೂನಿಯಾ ಹಾಗೂ ಲವ್ಲಿನಾ ಬೋರ್ಗೊಹೈನ್‌ಗೆ ತಲಾ 1 ಕೋಟಿ ರೂ. ನೀಡಿದರು. ರೆಸ್ಲರ್ ದೀಪಕ್ ಪೂನಿಯಾಗೆ ಹಾಗೂ ಕರ್ನಾಟಕದ ಗಾಲ್ಫ್ ಆಟಗಾರ್ತಿ ಅಧಿತಿ ಅಶೋಕ್‌ಗೆ ತಲಾ 50 ಲಕ್ಷ ರೂಪಾಯಿ ನೀಡಿದರು. ಪುರುಷರ ಹಾಗೂ ಮಹಿಳಾ ಹಾಕಿ ತಂಡದ ಸದಸ್ಯರಿಗೆ ತಲಾ 50 ಲಕ್ಷ ರೂ. ನೀಡಿದರು. ಮೀರಾಬಾಯಿ ಕೋಚ್ ವಿಜಯ್ ಶರ್ಮಗೆ 10 ಲಕ್ಷ ರೂ. ಹಾಕಿ ತಂಡಗಳ ಸಹಾಯಕ ಸಿಬ್ಬಂದಿಗೆ ತಲಾ 10 ಲಕ್ಷ ನೀಡಲಾಯಿತು. ಕಂಚಿನ ಪದಕ ವಿಜೇತ ತಂಡದ ಸದಸ್ಯ ಲಲಿತ್ ಕುಮಾರ್ ಉಪಾದ್ಯಾಯಗೆ 1.25 ಕೋಟಿ ರೂ. ಹಾಗೂ ಮಹಿಳಾ ತಂಡದ ಸದಸ್ಯೆ ವಂದನಾ ಕಟಾರಿಯಾಗೆ 75 ಲಕ್ಷ ರೂ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts