More

    ಸ್ವರ್ಣ ಸಾಧಕ ನೀರಜ್ ಅಸ್ವಸ್ಥ, ತವರಿನ ಸ್ವಾಗತ ಸಮಾರಂಭ ಮೊಟಕು

    ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ಸ್ವರ್ಣ ಪದಕ ವಿಜೇತ ನೀರಜ್ ಚೋಪ್ರಾಗೆ ಸಣ್ಣ ಪ್ರಮಾಣದಲ್ಲಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರ ತವರೂರು ಪಾಣಿಪತ್‌ನಲ್ಲಿ ಆಯೋಜಿಸಲಾಗಿದ್ದ ಸ್ವಾಗತ ಸಮಾರಂಭವನ್ನು ಮೊಟಕುಗೊಳಿಸಲಾಯಿತು. 23 ವರ್ಷದ ನೀರಜ್ ಚೋಪ್ರಾ ಆಗಸ್ಟ್ 9ರಂದು ತವರಿಗೆ ಬಂದ ಬಳಿಕ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಬಳಲಿದ್ದಾರೆ. ದೇಹಕ್ಕೆ ವಿಶ್ರಾಂತಿ ಇಲ್ಲದೆ ಸಾಕಷ್ಟು ಬಳಲಿದ್ದರು. ಈ ಮುನ್ನ ಭಾರಿ ಜ್ವರದಿಂದಾಗಿ ಅವರು ಹರಿಯಾಣ ಮತ್ತು ಪಂಜಾಬ್ ಸರ್ಕಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭಕ್ಕೂ ಗೈರಾಗಿದ್ದರು. ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿತ್ತು. ಆದರೆ ಬಳಿಕ ರಾಷ್ಟ್ರಪತಿ ಮತ್ತು ಪ್ರಧಾನಿ ಭೇಟಿಗೆ ಹಾಜರಾಗಿದ್ದರು. ಈ ನಡುವೆ ಕೆಂಪುಕೋಟೆಯ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲೂ ಭಾಗವಹಿಸಿದ್ದರು.

    ಇದನ್ನೂ ಓದಿ: ಲಾರ್ಡ್ಸ್ ಟೆಸ್ಟ್ ಪಂದ್ಯದ ಭರ್ಜರಿ ಗೆಲುವಿನ ಗುಟ್ಟು ಬಿಚ್ಚಿಟ್ಟ ವಿರಾಟ್ ಕೊಹ್ಲಿ

    ಟೋಕಿಯೊದಿಂದ ಮರಳಿದ ಬಳಿಕ ಕಳೆದ 8 ದಿನಗಳಿಂದ ನವದೆಹಲಿಯಲ್ಲಿ ಸರಣಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ನೀರಜ್, ಅಂತಿಮವಾಗಿ ಮಂಗಳವಾರ ಪಾಣಿಪಾತ್‌ನಿಂದ 15 ಕಿಲೋಮೀಟರ್ ದೂರದಲ್ಲಿರುವ ಹುಟ್ಟೂರು ಖಾಂಡ್ರಾ ಗ್ರಾಮಕ್ಕೆ ಆಗಮಿಸಿದರು. ಈ ವೇಳೆ ಸ್ಥಳೀಯರು ಮೆರವಣಿಗೆ ನಡೆಸಿ ಅದ್ದೂರಿ ಸ್ವಾಗತ ಕೋರಿದರು. ‘ನೀರಜ್ ಚೋಪ್ರಾಗೆ ತುಂಬಾ ವಿಶ್ರಾಂತಿ ಅಗತ್ಯವಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅವರು ಸ್ವಾಗತ ಸಮಾರಂಭದಿಂದ ದೂರ ಉಳಿದರು’ ಎಂದು ನೀರಜ್ ಆಪ್ತ ಮೂಲಗಳ ತಿಳಿಸಿವೆ. ನೀರಜ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

    ಇದನ್ನೂ ಓದಿ: ಈ ಬಾರಿ ರಕ್ಷಾ ಬಂಧನಕ್ಕೆ ಪ್ರಧಾನಿ ಮೋದಿ ಬಯಸಿರುವ ಉಡುಗೊರೆ ಏನು ಗೊತ್ತೇ?

    ‘ನೂರಾರು ಕ್ರೀಡಾಭಿಮಾನಿಗಳು ನೀರಜ್ ಅವರನ್ನು ಸ್ವಾಗತಿಸಲು ಆಗಮಿಸಿದ್ದರು. ಆದರೆ, ಮೆರವಣಿಗೆಯ ಮಧ್ಯದಲ್ಲಿಯೇ ಅವರಿಗೆ ದಣಿದಂತೆ ಕಂಡ ನೀರಜ್ ಅವರಿಗೆ ಸಣ್ಣ ಪ್ರಮಾಣದಲ್ಲಿ ಜ್ವರ ಕಾಣಿಸಿಕೊಂಡಿತು’ ಎಂದು ಮೂಲಗಳು ತಿಳಿಸಿವೆ. ಕಳೆದ ಗುರುವಾರ ಹಾಗೂ ಶುಕ್ರವಾರವೂ ಜ್ವರದಿಂದ ದಣಿದಿದ್ದ ನೀರಜ್, ಪಂಜಾಬ್ ಹಾಗೂ ಹರಿಯಾಣ ಸರ್ಕಾರಗಳು ಆಯೋಜಿಸಿದ್ದ ಸನ್ಮಾನ ಸಮಾರಂಭದಿಂದಲೂ ಹೊರಗುಳಿದಿದ್ದರು. ಬಳಿಕ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿತ್ತು.

    VIDEO: ಗೋಲ್‌ಕೀಪರ್ ಶ್ರೀಜೇಶ್‌ಗೆ ಪ್ರಧಾನಿ ಮೋದಿ ನೀಡಿದ ಸಲಹೆ ಏನು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts