More

    ದೇಹವನ್ನು ತಂಪಾಗಿಸುವ ಶೀತಲೀ ಪ್ರಾಣಾಯಾಮ

    ದೇಹವನ್ನು ತಂಪಾಗಿಸುವ ಶೀತಲೀ ಪ್ರಾಣಾಯಾಮನನಗೆ ದೇಹದ ಅತಿಯಾದ ಉಷ್ಣತೆಯಿಂದ ಬಾಯಿಯಲ್ಲಿ ಗುಳ್ಳೆ ಆಗಿದೆ. ಇವು ಯಾವಾಗಲೂ ಇರುತ್ತವೆ. ದಯವಿಟ್ಟು ಯೋಗದಲ್ಲಿ ಪರಿಹಾರವಿದ್ದರೆ ಹಾಗೂ ಇದರ ನಿವಾರಣೆಗೆ ಮಾಡಬೇಕಾದ ಪ್ರಾಣಾಯಾಮ ಹೇಗೆಂದು ತಿಳಿಸಿ.

    | ಪ್ರಕಾಶ್ ಬೈಲವಾಡ 21 ವರ್ಷ ಬೈಲಹೊಂಗಲ

    ಬಾಯಿಯಲ್ಲಿ ಗುಳ್ಳೆಗಳು ಉಂಟಾಗಲು ವಿವಿಧ ಕಾರಣಗಳು ಇರಬಹುದು. ಗಾಯ, ಕ್ಯಾನ್ಸರ್ ಹುಣ್ಣುಗಳು ಮತ್ತು ಇತರ ಕೆಲ ಕಾರಣಗಳು ಬಾಯಿಯ ಗುಳ್ಳೆಯನ್ನು ಉಂಟುಮಾಡುತ್ತವೆ. ಆಕಸ್ಮಿಕವಾಗಿ ನಿಮ್ಮ ತುಟಿಗಳನ್ನು ಕಚ್ಚುವುದು, ಹಾಗೆಯೇ ಅಲರ್ಜಿಗಳು, ಹಲ್ಲಿನ ಕೆಲಸ ಮತ್ತು ಕೆಲವು ಟೂತ್ ಪೇಸ್ಟ್​ಗಳು ಮತ್ತು ಮೌತ್ ವಾಶ್​ಗಳು ಕ್ಯಾನ್ಸರ್ ಹುಣ್ಣುಗಳಿಗೆ ಕಾರಣವಾಗಬಹುದು. ವೈರಸ್​​ಗಳು ಮತ್ತು ಸೋಂಕುಗಳು ತಣ್ಣನೆಯ ಹುಣ್ಣುಗಳು ಮತ್ತು ಬಾಯಿಯ ಹೊರಗೆ ಮತ್ತು ಒಳಗೆ ಇತರ ಗುಳ್ಳೆಗಳಿಗೆ ಸಾಮಾನ್ಯ ಕಾರಣವೆಂದರೆ ಹರ್ಪಿಸ್ ಸಿಂಪ್ಲೆಕ್ಸ್ ವೈರಸ್. ಈ ಸೋಂಕು ಚುಂಬನ, ತಿನ್ನುವ ಪಾತ್ರೆಗಳು ಮತ್ತು ಬಾಯಿಯನ್ನು ಸ್ಪರ್ಶಿಸುವ ಇತರ ವಸ್ತುಗಳನ್ನು ಹಂಚಿಕೊಳ್ಳುವ ಮೂಲಕ ಹರಡಬಹುದು. ದೇಹದ ಉಷ್ಣತೆಯನ್ನು ಕಡಿಮೆಮಾಡಲು ಶೀತಲೀ ಪ್ರಾಣಾಯಾಮ ಸೀತ್ಕಾರೀ ಪ್ರಾಣಾಯಾಮ ಅಭ್ಯಾಸ ನಡೆಸಿ. ಹಾಗೂ ಸೂಚಿತ ಆಸನಗಳು ಹಾಗೂ ಮುದ್ರೆಗಳನ್ನು ನಿತ್ಯ ಅಭ್ಯಾಸ ಮಾಡಿ.

    ನಾಲಿಗೆಯ ಹುಣ್ಣಿನ ಸಮಸ್ಯೆ ಕಡಿಮೆಯಾಗಲು ಸೂಚಿತ ಶೀತಲೀ ಪ್ರಾಣಾಯಾಮ, ಸಿತ್ಕಾರೀ ಪ್ರಾಣಾಯಾಮ ಅಭ್ಯಾಸ ನಡೆಸಿ.

    ಸೂಚಿತ ಆಸನಗಳು: ಪಾದ ಹಸ್ತಾಸನ, ಪ್ರಸಾರಿತ ಪಾದೋತ್ಥಾ ನಾಸನ, ಶಶಾಂಕಾಸನ, ಸರ್ವಾಂಗಾಸನ ಯಾ ಸೇತುಬಂಧ, ಶಲಭಾಸನ, ಶವಾಸನ, ಮುದ್ರೆಗಳಲ್ಲಿ (ಖೇಚರಿ ಮುದ್ರೆ), ವರುಣ ಮುದ್ರೆ, ಕಾಕೀ ಮುದ್ರೆ.

    ಶೀತಲೀ ಪ್ರಾಣಾಯಾಮ: ಈ ಶೀತಲೀ ಪ್ರಾಣಾಯಾಮದಲ್ಲಿ ಮನಸ್ಸಿಗೆ ನೆಮ್ಮದಿ ಮತ್ತು ಶಾಂತಿ ದೊರಕುತ್ತದೆ.

    ವಿಧಾನ: ಯಾವುದಾದರೊಂದು ಸುಖಕರವಾದ ಆಸನದಲ್ಲಿ ಬೆನ್ನು, ಕುತ್ತಿಗೆ ನೇರಮಾಡಿ ನೆಟ್ಟಗೆ ಕುಳಿತುಕೊಳ್ಳಿ. ಕೈಗಳು ಚಿನ್ಮುದ್ರೆಯಲ್ಲಿರಲಿ. ನಾಲಗೆಯನ್ನು ಹೊರಗೆ ಚಾಚಿ ಅದರ ಪಕ್ಕಗಳನ್ನು ಮಡಚಿ ಕೊಳವೆಯಾಕಾರ ಮಾಡಿ. ನಂತರ ನಿಧಾನವಾಗಿ, ದೀರ್ಘವಾಗಿ ಗಾಳಿಯನ್ನು ನಾಲಗೆಯ ಮೂಲಕ ಒಳಕ್ಕೆಳೆದುಕೊಂಡು(ಪೂರಕ), ಕೆಲವು ಸೆಕೆಂಡುಗಳ ಕಾಲ ಗಾಳಿಯನ್ನು ಒಳಗೆಹಿಡಿದಿಡಿ. ನಂತರ ಮೂಗಿನ ಮೂಲಕ ನಿಧಾನವಾಗಿ ಉಸಿರನ್ನು ಹೊರಕ್ಕೆ ಬಿಡಿ (ರೇಚಕ). ಈ ರೀತಿಯಾಗಿ 3 ರಿಂದ 6 ಅಥವಾ 9 ಬಾರಿ ಅಭ್ಯಾಸ ಮಾಡಿ.

    ಪ್ರಯೋಜನ: ಈ ಪ್ರಾಣಾಯಾಮದ ಮುಖ್ಯ ಉದ್ದೇಶ ದೇಹದ ಅಧಿಕ ಉಷ್ಣಾಂಶವನ್ನು ಕಡಿಮೆಗೊಳಿಸುವುದು. ದೇಹವನ್ನು ತಂಪನ್ನಾಗಿಸುತ್ತದೆ. ನಾಲಿಗೆಯಲ್ಲಿ ಹುಣ್ಣು, ಹೈಪರ್ ಆಸಿಡಿಟಿ, ಮತ್ತು ಅಲ್ಸರ್​ನವರಿಗೆ ಪರಿಣಾಮಕಾರಿಯಾಗಿದೆ. ನಿರ್ನಾಳ ಗ್ರಂಥಿಗಳ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಸ್ನಾಯುಗಳ ಸಡಿಲತೆ ಉಂಟುಮಾಡುತ್ತದೆ. ಬಾಯಾರಿಕೆ ಹಸಿವು ನಿಯಂತ್ರಣವಾಗಲು ಸಹಾಯವಾಗುತ್ತದೆ. ಜ್ವರ ಮತ್ತು ಅಜೀರ್ಣಕ್ಕೆ ಸಹಾಯಕವಾಗುತ್ತದೆ. ಹೆಚ್ಚಿನ ರಕ್ತದ ಒತ್ತಡ ನಿಯಂತ್ರಣವಾಗಲು ಸಹಕಾರಿಯಾಗುತ್ತದೆ. ಮನಸ್ಸಿನ ಒತ್ತಡ, ಗೊಂದಲಗಳನ್ನು ನಿವಾರಿಸಲು ಇದು ಉಪಯುಕ್ತವಾಗಿದೆ. ಅಲ್ಲದೆ ಶ್ವಾಸಕೋಶಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಪರಿಹಾರವಾಗಲು ಸಹಕಾರಿಯಾಗಿದೆ.

    ವಿ.ಸೂ: ಖಾಲಿ ಹೊಟ್ಟೆಯಲ್ಲಿ ಅಭ್ಯಾಸ ಮಾಡಿ. ಪ್ರಾಣಾಯಾಮಕ್ಕೆ ಕುಳಿತಾಗ ಬೆನ್ನು ಹುರಿಯು ನೇರವಾಗಿ ಸುಷುಮ್ನಾನಾಡಿ ನೆಲಕ್ಕೆ ಲಂಬವಾಗಿರಲು ಬೆನ್ನು, ಕುತ್ತಿಗೆ, ಶಿರಸ್ಸು ನೇರವಾಗಿರಲಿ. ದೇಹ ಸಡಿಲಗೊಂಡಿರಬೇಕು ಮುಖದಲ್ಲಿ ಪ್ರಸನ್ನತೆ ಇರಲಿ, ಹಾಯಾಗಿ ಅಭ್ಯಾಸ ಮಾಡಿ. ಕಡಿಮೆ ರಕ್ತದೊತ್ತಡ ಇದ್ದವರು ಈ ಪ್ರಾಣಾಯಾಮ ಹೆಚ್ಚು ಮಾಡುವುದು ಬೇಡ. ಶೀತ, ಯಾ ಗಂಟಲಿನ ಸಮಸ್ಯೆ, ತಲೆನೋವು ಇದ್ದವರು ಈ ಪ್ರಾಣಾಯಾಮ ಅಭ್ಯಾಸ ಮಾಡುವುದು ಬೇಡ. ಗುರುಗಳ ಸಲಹೆ, ಸೂಚನೆ, ಮಾರ್ಗದರ್ಶನದಲ್ಲಿಯೇ ಪ್ರಾಣಾಯಾಮ ಕಲಿಯಿರಿ.

    ತುಂಡಾದ ಕಾಲಿನೊಂದಿಗೆ ಆಸ್ಪತ್ರೆಗೆ ಬಂದ ಗಾಯಾಳು; ಯಶಸ್ವಿಯಾಗಿ ಜೋಡಿಸಿದ ವೈದ್ಯರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts