More

    ದಾವಣಗೆರೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಯೋಗ ಶಿಕ್ಷಕರ ಪ್ರಾಂತ ಪ್ರಶಿಕ್ಷಣ ಶಿಬಿರ ಜು.20ರಿಂದ

    ದಾವಣಗೆರೆ: ಪತಂಜಲಿ ಯೋಗ ಶಿಕ್ಷಣ ಸಮಿತಿ, ಪತಂಜಲಿ ಯೋಗ ಫೌಂಡೇಷನ್‌ನಿಂದ ನಗರದಲ್ಲಿ ಜು.20ರಿಂದ 24ರ ವರೆಗೆ ಅಂತಾರಾಷ್ಟ್ರೀಯ ಮಟ್ಟದ ಯೋಗ ಶಿಕ್ಷಕರ ಪ್ರಾಂತ ಪ್ರಶಿಕ್ಷಣ ಶಿಬಿರ ಆಯೋಜನೆಗೊಂಡಿದೆ.

    ಪ್ರಾಂತ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಯೋಗ ಶಿಕ್ಷಕರು ಸೇರಿ 8 ವಿಭಾಗದಲ್ಲಿ ಶಿಬಿರ ನಡೆಯಲಿದೆ ಎಂದು ಪತಂಜಲಿ ಯೋಗ ಶಿಕ್ಷಣ ಸಮಿತಿ ಸಂಚಾಲಕ ಟಿ.ವಿ.ಸತ್ಯನಾರಾಯಣ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಬಾಪೂಜಿ ಬ್ಯಾಂಕ್ ಸಮುದಾಯ ಭವನ, ನಿಮಿಷಾಂಬ ಸಮುದಾಯ ಭವನ, ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಪುರುಷರು, ಮಹಿಳೆಯರು, ಯುವತಿಯರು, ಹಿರಿಯ ನಾಗರಿಕರು, ವೃತ್ತಿಪರರು ಹಾಗೂ ಯೋಗಶಿಕ್ಷಕರಿಗೆ ಹೀಗೆ ಪ್ರತಿ ವಿಭಾಗಕ್ಕೆ ಪ್ರತ್ಯೇಕ ಶಿಬಿರ ನಡೆಯಲಿದೆ. ಯೋಗ ನಡಿಗೆ, ಲಲಿತ ಸಹಸ್ರನಾಮ, ಭಜನೆ, ಸತ್ಸಂಗ ಸೇರಿ ಹಲವು ಕಾರ್ಯಕ್ರಮಗಳು ಇರಲಿವೆ.

    ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಮಿತಿ ಪ್ರಾಂತ ಸಂಘಟನಾ ಪ್ರಮುಖ ಮಂಜುನಾಥ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಡಾ.ಮಂಜುನಾಥ ಕುರ್ಕಿ ಸೇರಿ ಹಲವು ಗಣ್ಯರು ಭಾಗವಹಿಸುವರು. ಜು.24ರ ಬೆಳಗ್ಗೆ 11.30ರಿಂದ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.

    ಪತಂಜಲಿ ಯೋಗ ಶಿಕ್ಷಣ ಸಮಿತಿ ದೇಶಾದ್ಯಂತ ಹಲವು ಶಾಖೆಗಳನ್ನು ಹೊಂದಿದ್ದು, ದಾವಣಗೆರೆಯಲ್ಲಿ 2008ರಂದು ಆರಂಭವಾಗಿದ್ದು, 40ಕ್ಕೂ ಹೆಚ್ಚು ಶಾಖೆಗಳಿದ್ದು, ಜನರಿಗೆ ಉಚಿತವಾಗಿ ಯೋಗ ಶಿಕ್ಷಣ ನೀಡುತ್ತಿದೆ ಎಂದು ವಿವರಿಸಿದರು.

    ಸಮಿತಿಯ ಆರ್.ಸಿದ್ದೇಶಪ್ಪ, ಎಸ್.ಎಸ್. ಕಲ್ಲೇಶ್, ಲೀಲಾವತಿ, ಭಾರತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts