More

    ದೈಹಿಕ, ಮಾನಸಿಕ ಆರೋಗ್ಯಕ್ಕೆ ಯೋಗ ಸಹಕಾರಿ

    ಹುಬ್ಬಳ್ಳಿ: ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಸಹಕಾರಿ. ಪ್ರತಿಯೊಬ್ಬರೂ ನಿಯಮಿತವಾಗಿ ಯೋಗ, ಪ್ರಾಣಾಯಾಮಗಳನ್ನು ಮಾಡಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.
    ಹುಬ್ಬಳ್ಳಿ ಪಿರಮಿಡ್ ಧ್ಯಾನ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆ (ವರ್ಚುವಲ್) ಕಾರ್ಯಕ್ರಮಕ್ಕೆ ಯೋಗಾಭ್ಯಾಸ ಮಾಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
    ಜೂ. 21 ಅನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿಶ್ವ ಸಂಸ್ಥೆಗೆ ಮಾಡಿಕೊಂಡ ಮನವಿಗೆ ಮಾನ್ಯತೆ ಸಿಕ್ಕಿದ್ದರಿಂದ ಯೋಗಕ್ಕೆ ಜಾಗತಿಕ ಮಾನ್ಯತೆ ದೊರಕಿದೆ. ಇಂದು ಬಹುತೇಕ ರಾಷ್ಟ್ರಗಳ ಕೋಟ್ಯಂತರ ಜನರು ಯೋಗ ದಿನ ಆಚರಿಸುತ್ತಿದ್ದಾರೆ ಎಂದರು.
    ಜಿ.ಪಂ. ಸಿಇಒ ಡಾ.ಬಿ. ಸುಶೀಲಾ, ಹು-ಧಾ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಯಶವಂತ ಮದೀನಕರ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಮೀನಾಕ್ಷಿ, ತಹಸೀಲ್ದಾರ್ ಶಶಿಧರ ಮಾಡ್ಯಾಳ, ಇತರರು ಭಾಗವಹಿಸಿದ್ದರು. ಯೋಗ ಶಿಕ್ಷಕ ಸಂಗಮೇಶ ನಿಂಬರಗಿ ಅವರ ತಂಡದವರು ರಾಷ್ಟ್ರೀಯ ಆಯುಷ್ ಮಾರ್ಗಸೂಚಿಗಳ ಅನುಸಾರ ನಿಗದಿಪಡಿಸಲಾದ ಯೋಗಾಸನಗಳ ಕ್ರಮಗಳ ಕುರಿತು ಪ್ರಾತ್ಯಕ್ಷಿಕೆ ನೀಡಿ, ಅವುಗಳ ಉಪಯೋಗ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts