More

    ಎತ್ತಿನಹೊಳೆ ಯೋಜನೆೆ ನಿಲ್ಲಿಸುವ ಪ್ರಯತ್ನ

    ತಿಪಟೂರು: ಎತ್ತಿನಹೊಳೆ ಯೋಜನೆಗೆ ಕೈ ಬಿಡಲಾಗಿದ್ದ ತಾಲೂಕಿನ 3 ಹೋಬಳಿಗಳನ್ನು ಸೇರಿಸಿದ್ದು ನಾನು, ಈ ಬಗ್ಗೆ ನಾನು ಜೀವಂತ ಇರುವಾಗಲೇ ಕೆಲವರು ಏನೂ ಕೊಡುಗೆ ನೀಡಲ್ಲವೆಂದು ಸುಳ್ಳುಸುದ್ದಿ ಹಬ್ಬಿಸುದ್ದಿದ್ದಾರೆ ಎಂದು ವಾಜಿ ಶಾಸಕ ಕೆ.ಷಡಕ್ಷರಿ ಅಸವಾಧಾನ ವ್ಯಕ್ತಪಡಿಸಿದರು.

    ಕೆ.ಕರಿಕೆರೆಯಲ್ಲಿ ಭಾನುವಾರ ಹಾಲಿನ ಡೇರಿ ಕಟ್ಟಡ ಪ್ರಾರಂಭೋತ್ಸವ ಉದ್ಘಾಟಿಸಿ ಮಾತನಾಡಿದರು.
    ಶಾಸಕನಾದ ಬಳಿಕ ಬೆಳಗಾವಿ ಅಧಿವೇಶನದಲ್ಲಿ ನೀರಾವರಿ ಇಲಾಖೆ ಕಾರ್ಯನಿರ್ವಾಹಕ ನಿರ್ದೇಶಕ ರುದ್ರಪ್ಪ ಜತೆಗೆ ಚರ್ಚಿಸಿ ತಾಲೂಕಿನ ಕಿಬ್ಬನಹಳ್ಳಿ, ಹೊನ್ನವಳ್ಳಿ ಮತ್ತು ಕಸಬಾ ಹೋಬಳಿಗಳನ್ನು ಎತ್ತಿನಹೊಳೆ ಯೋಜನೆಗೆ ಸೇರಿಸುವಲ್ಲಿ ಯಶಸ್ವಿಯಾದೆ. ಇದರಲ್ಲಿ ನನ್ನ ಕೊಡುಗೆ ಏನಿಲ್ಲವೆಂಬಂತೆ ನಾನು ಬದುಕಿರುವಾಗಲೇ ಕೆಲವರು ಸುಳ್ಳುಸುದ್ದಿ ಹಬ್ಬಿಸುತ್ತಿದ್ದಾರೆ ಮಾಡುತ್ತಿದ್ದಾರೆ ಎಂದು ಬೇಸರಿದರು.

    ಜಿಲ್ಲೆಗೆ ಮಂಜೂರಾಗಿರುವ 24 ಟಿಎಂಸಿ ಹೇವಾವತಿ ನೀರಿನಿಂದ ತಾಲೂಕಿನ 18 ಕೆರೆಗಳನ್ನು ತುಂಬಿಸಿಕೊಳ್ಳಲು ಅವಕಾಶವಿದ್ದ ಕಾರಣ ಸಂಸದ ಎಸ್.ಪಿ.ಮುದ್ದಹನುಮೇಗೌಡ ಜತೆಗೂಡಿ ಎಸ್.ಎಂ.ಕೃಷ್ಣ ಬಳಿ ಚರ್ಚಿಸಿ ತಾಲೂಕಿಗೆ ಏತನೀರಾವರಿ ಯೋಜನೆ ತರುವಲ್ಲಿ ಯಶಸ್ವಿಯಾಗಿದ್ದೆವು ಎಂದರು. ಕರಿಕೆರೆ, ಶಿವರ, ಮತ್ತಿಹಳ್ಳಿ, ಆದಿಹಳ್ಳಿ ಮತ್ತು ಬೈರನಾಯಕನಹಳ್ಳಿ ಗ್ರಾಮಗಳ ಕೆರೆಗಳಿಗೆ ಹೇಮೆ ನೀರು ಹರಿಸುವ ಸಲುವಾಗಿ ಯೋಜನೆ ರೂಪಿಸಿ, ಡಿಪಿಆರ್ ಟೆಂಡರ್ ಮುಗಿದಿದ್ದರೂ, ನೀರು ಸರಾಗವಾಗಿ ಹರಿಯಲ್ಲ ಎಂದು ಸಿಎಂಗೆ ದಾರಿ ತಪ್ಪಿಸಿ, ರಾಜಕೀಯ ದ್ವೇಷದಿಂದ ಇಡೀ ಯೋಜನೆಯನ್ನೇ ನಿಲ್ಲಿಸುವ ಪ್ರಯತ್ನ ನಡೆದಿದೆ ಎಂದರು. ಡೇರಿ ಸದಸ್ಯರಿಗೆ ತಲಾ 8 ಲೀಟರ್ ಸಾಮರ್ಥ್ಯದ ಹಾಲಿನ ಕ್ಯಾನ್ ವಿತರಿಸಿ ಮಾತನಾಡಿದ ಸಿಎಂ ಆಪ್ತ ಸಹಾಯಕ ನೊಣವಿನಕೆರೆ ಎನ್.ಆರ್.ಸಂತೋಶ್, ತುಮಕೂರು ಜಿಲ್ಲೆಯಲ್ಲಿ ಮೆಗಾ ಡೇರಿ ಸ್ಥಾಪಿಸಲು ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಬಳಿ ಚರ್ಚೆ ನಡೆಸುವುದಾಗಿ ತಿಳಿಸಿದರು.

    ತುಮುಲ್ ಅಧ್ಯಕ್ಷ ಸಿ.ವಿ.ಮಹಲಿಂಗಪ್ಪ, ಎಪಿಎಂಸಿ ಅಧ್ಯಕ್ಷ ಎಂ.ಬಿ.ಲಿಂಗರಾಜು. ಬಿಜೆಪಿ ಮಖಂಡ ಲೋಕೇಶ್ವರ್, ರಾಜ್ಯ ಹಾಲು ಒಕ್ಕೂಟದ ನಿರ್ದೇಶಕ ವಾದಿಹಳ್ಳಿ ಪ್ರಕಾಶ್, ತಾಲೂಕು ಪಂಚಾಯಿತಿ ಸದಸ್ಯರಾದ ಎನ್.ಎಂ. ಸುರೇಶ್, ಸಿದ್ದಾಪುರ ಸುರೇಶ್, ಎಪಿಎಂಸಿ ಸದಸ್ಯ ಎಚ್.ಬಿ.ದಿವಾಕರ್, ತುಮುಲ್ ವ್ಯವಸ್ಥಾಪಕ ನಿರ್ದೇಶಕ ಸುಬ್ಬರಾಯಭಟ್ ಮತ್ತಿತರರು ಇದ್ದರು.

    ಶಾಸಕರಿಂದ ದ್ವೇಷ ರಾಜಕಾರಣ: ತಿಪಟೂರಿಗೆ ನನ್ನ ಅವಧಿಯಲ್ಲಿ ಮಂಜೂರಾದ ಟೆಂಡರ್‌ಗಳನ್ನು ನಿಲ್ಲಿಸುವ ಪ್ರಯತ್ನ ನಡೆದಿದೆ. ನಾನು ವಾಡಿದ ಕಾಮಗಾರಿಗಳಿಗೆ ಹಾಲಿ ಶಾಸಕ ಬಿ.ಸಿ.ನಾಗೇಶ್ ಮತ್ತೊಮ್ಮೆ ಭೂಮಿಪೂಜೆ ವಾಡುತ್ತಿದ್ದಾರೆ. ಇದು ದ್ವೇಷ ರಾಜಕಾರಣವಾಗಿದ್ದು, ಸಿಎಂ ಯಡಿಯೂರಪ್ಪ ಈ ಪೀಡೆಗಳ ಕಾಟದಿಂದ ಹೊರಬರಬೇಕು ಎಂದು ಮಾಜಿ ಕೆ.ಷಡಕ್ಷರಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts