More

    ಕೊಬ್ಬರಿ ಬೆಲೆ 15 ಸಾವಿರ ರೂಪಾಯಿ ಹೆಚ್ಚಿಸುವೆ; ಮಾಜಿ ಸಿಎಂ ಕುಮಾರಸ್ವಾಮಿ

    ತಿಪಟೂರು: ಪಂಚರತ್ನ ರತ್ನಯಾತ್ರೆ ಮೂಲಕ ತಾಲೂಕಿನ ಹಲವಡೆ ಮಿಂಚಿನ ಸಂಚಾರ ಮಾಡಿ ಕೆ.ಬಿ.ಕ್ರಾಸ್‌ನಲ್ಲಿ ಬುಧವಾರ ರಾತ್ರಿ ವಾಸ್ತವ್ಯ ಮಾಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ, ಗುರುವಾರ ರೈತರ ಹೋರಾಟಕ್ಕೆ ಧ್ವನಿಯಾದರು.

    ನಗರದ ಒಕ್ಕಲಿಗರ ಭವನದ ಆವರಣದಲ್ಲಿ ಗಣಪತಿ ದೇವಸ್ಥಾನ ಮತ್ತು ಕುವೆಂಪು ಭವನ ಉದ್ಘಾಟನೆ ಮಾಡಿದ ಬಳಿಕ, ಕೊಬ್ಬರಿಗೆ ಸೂಕ್ತ ಬೆಲೆಗಾಗಿ ಒತ್ತಾಯಿಸಿ ಎ.ಸಿ.ಕಚೇರಿ ಎದುರು 18 ದಿನದಿಂದ ಧರಣಿ ನಡೆಸುತ್ತಿರುವ ಸ್ಥಳಕ್ಕೆ ಭೇಟಿ ಮಾಡಿದ ಕುಮಾರಸ್ವಾಮಿ, ರೈತರಿಗೆ ಧೈರ್ಯ ಹೇಳಿದರು.

    ಸರ್ಕಾರ ಯಾವುದೇ ಕಾರಣಕ್ಕೂ ಕೊಬ್ಬರಿ ಬೆಲೆ ಹೆಚ್ಚಿಸಲ್ಲ. 15 ಸಾವಿರ ಬೆಂಬಲ ಬೆಲೆ ಕೊಡುತ್ತೇವೆ ಎಂದು ರಾಜ್ಯ ಸರ್ಕಾರ ಘೋಷಿಸಿದರೆ ಕೂಡಲೇ ತಂತಾನೇ ಕ್ವಿಂಟಾಲ್ ಕೊಬ್ಬರಿ ಬೆಲೆ 18 ರಿಂದ 19 ಸಾವಿರ ರೂಪಾಯಿಗೆ ಹೆಚ್ಚುತ್ತೆ. ಆತುರಪಡದೇ, 2 ತಿಂಗಳ ಕಾಲ ಕೊಬ್ಬರಿ ಮಾರಬೇಡಿ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 14 ರಿಂದ 15 ಸಾವಿರ ರೂಪಾಯಿ ಕೊಡುತ್ತೇವೆ ಎಂದರು.

    ಜಿಎಸ್‌ಟಿಗೆ ಅಂದೇ ವಿರೋಧಿಸಿದ್ದೆ. ರಾಜ್ಯದಲ್ಲಿ ಜಿಎಸ್‌ಟಿ ಜಾರಿಯಾಗುವ ಮೂಲಕ ನಾವೇ ಹಗ್ಗಕೊಟ್ಟು, ಕತ್ತನ್ನೂ ಕೊಟ್ಟಂತಾಗಿದೆ. ರಾಜ್ಯದಿಂದ ಸಂಗ್ರಹವಾದ ಜಿ.ಎಸ್.ಟಿ ಹಣದ ಬಹುಪಾಲು ಉತ್ತರಪ್ರದೇಶ ಮತ್ತು ಪಂಜಾಬಿಗೆ ಹೊಗುತ್ತಿದೆ. ಜಿ.ಎಸ್.ಟಿ. ಸಂಗ್ರಹದಲ್ಲಿ 53- 47 ಪಸೆರ್ಂಟ್ ಲೆಕ್ಕಾಚಾರ ಇಟ್ಟುಕೊಂಡಿರುವ ಕೇಂದ್ರ ಸರ್ಕಾರದ ಕೆಲ ರಾಜ್ಯಗಳಿಗೆ ಕೇವಲ 3 ರಿಂದ 4 ಪರ್ಸೆಂಟ್ ನೀಡುತ್ತಿದೆ. ನಮ್ಮ ಕಾರ‌್ಯಕ್ರಮವೇ ಪಂಚರತ್ನ ಯೋಜನೆ. ನಾವೆಂದೂ ರೈತರ ಪರ, ಮತ್ತು ಸಂವಿಧಾನದ ಆಶಯದಂತೆ ಸರಿ, ಸಮನಾದ ಬದುಕು ಕಟ್ಟಿಕೊಡುವುದೇ ನಮ್ಮ ಸಂಕಲ್ಪ. ಹಳ್ಳಿಗಳ ಅಭಿವೃದ್ದಿ. ರೈತರಿಗೆ ನೆರವು. ಪ್ರೋತ್ಸಾಹ ಎಂದಿಗೂ ಇರುತ್ತೆ ಎಂದು ಕುಮಾರಸ್ವಾಮಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts