More

    ಹಳದಿ ಹುಳ ತಿನ್ನೋದಕ್ಕೆ ಓಕೆ ಎಂದ ಯೂನಿಯನ್​! ಇನ್ಮೇಲೆ ಬಿಸ್ಕೆಟ್​, ಪಾಸ್ತಾ ಎಲ್ಲದರಲ್ಲೂ ಹುಳವಿರುತ್ತೆ!

    ಬೆಲ್ಜಿಯಂ: ಊಟದ ಮಧ್ಯೆ ಒಂದೇ ಒಂದು ಸಣ್ಣ ಹುಳ ಸಿಕ್ಕಿಬಿಟ್ಟರೂ ಊಟ ಬಿಟ್ಟು ಕೈ ತೊಳೆಯುವವರು ನಾವು. ಆದರೆ ವಿದೇಶಗಳಲ್ಲಿ ಹಾಗಿಲ್ಲ. ಎಷ್ಟೋ ದೇಶಗಳು ಹುಳಗಳಲ್ಲಿ ಪೌಷ್ಠಿಕಾಂಶ ಹೆಚ್ಚಿರುತ್ತದೆ ಎನ್ನುವ ಕಾರಣ ಕೊಟ್ಟು ಅವುಗಳನ್ನು ಬೇಯಿಸದೆಯೇ ತಿನ್ನುತ್ತವೆ. ಅದೇ ರೀತಿ ಈ ದೇಶಗಳಲ್ಲಿ ಇನ್ನುಮುಂದೆ ಹಳದಿ ಹುಳಗಳನ್ನು ತಿನ್ನುವುದಕ್ಕೆ ಅಲ್ಲಿನ ಸರ್ಕಾರ ಅನುಮತಿ ನೀಡಿದೆ.

    ಯುರೋಪಿಯನ್​ ದೇಶಗಳಲ್ಲಿ ಯೆಲ್ಲೋ ವಾರ್ಮ್ಸ್​ (ಹಳದಿ ಹುಳ)ಗಳನ್ನು ತಿನ್ನಲು ಯುರೋಪಿಯನ್​ ಯೂನಿಯನ್​ ಅನುಮತಿ ನೀಡಿದೆ. ಬಿಸ್ಕೆಟ್​, ಪಾಸ್ತಾ, ಬ್ರೆಡ್​ ತಯಾರಿಸುವ ಹಿಟ್ಟಿನಲ್ಲಿ ಈ ಹುಳಗಳನ್ನು ಬಳಸಬಹುದು ಎಂದು ಯೂನಿಯನ್​ ತಿಳಿಸಿದೆ. ಹಾಗಾಗಿ ಯುರೋಪಿಯನ್​ ದೇಶಗಳ ದೈನಂದಿನ ಊಟ ತಿಂಡಿಯ ಪಟ್ಟಿಯಲ್ಲಿ ಈ ಯೆಲ್ಲೋ ವಾರ್ಮ್ಸ್​ಗಳೂ ಸೇರಿಕೊಳ್ಳಲಿವೆ

    ಯೆಲ್ಲೋ ವಾರ್ಮ್ಸ್​ನಲ್ಲಿ ಹೆಚ್ಚು ಪೌಷ್ಠಿಕಾಂಶ ಇರುತ್ತದೆ. ಹಾಗೆ ಅದರಲ್ಲಿ ಫೈಬರ್​, ಕೊಬ್ಬಿನಾಂಶವೂ ಹೆಚ್ಚಿರುತ್ತದೆ. ಅದರ ಸೇವನೆಯಿಂದ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು ಎನ್ನುತ್ತಾರೆ ಆಹಾರ ವಿಜ್ಞಾನಿ ಎರ್ಮೊಲಾಸ್ ವೇವೆರಿಸ್. (ಏಜೆನ್ಸೀಸ್​)

    ಕೊನೆಯುಸಿರೆಳೆವ ಮುನ್ನ ಐವರಿಗೆ ಹೊಸ ಜೀವನ ಕೊಟ್ಟ 20 ತಿಂಗಳ ಮಗು

    ಮದುವೆಯಾಗೋಕೆ ವರ್ಜಿನಿಟಿ ಟೆಸ್ಟ್ ಮಾಡಿಸಲೇಬೇಕು! ಈ ರಾಷ್ಟ್ರದಲ್ಲಿದೆ ವಿಚಿತ್ರ ರೂಲ್ಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts