More

    ಯಳಂದೂರಿನ ಸಾರ್ವನಿಕ ಆಸ್ಪತ್ರೆ ಸೀಲ್‌ಡೌನ್

    ಳಂದೂರು: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವ್ಯಾಬ್ ಟೆಸ್ಟ್ ಮಾಡುತ್ತಿದ್ದ ಸಿಬ್ಬಂದಿಗೆ ಕರೊನಾ ಸೋಂಕು ತಗುಲಿದ್ದು ಆಸ್ಪತ್ರೆಯನ್ನು ಸೀಲ್‌ಡೌನ್ ಮಾಡಲಾಗಿದೆ.


    ಮೂರು ದಿನಗಳಿಂದ ಸಿಬ್ಬಂದಿಗೆ ಅನಾರೋಗ್ಯ ಕಾಡಿತ್ತು. ನಂತರ ಸ್ವ್ಯಾಬ್ ಟೆಸ್ಟ್‌ನಲ್ಲಿ ಗುರುವಾರ ಕರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಲ್ಯಾಬ್ ಸೇರಿದಂತೆ ಆಸ್ಪತ್ರೆ, ಪಕ್ಕದಲ್ಲಿರುವ ಆರೋಗ್ಯ ಇಲಾಖೆಯ ಕಚೇರಿ ಹಾಗೂ ವೈದ್ಯರು ಹಾಗೂ ದಾದಿಯರು ಇರುವ ವಸತಿ ಗೃಹಗಳ ಸಮುಚ್ಚಯಕ್ಕೆ ಸೋಂಕು ನಿವಾರಕ ಸಿಂಪಡಿಸಲಾಗಿದೆ.


    ಅಲ್ಲದೆ ಆಸ್ಪತ್ರೆಯಲ್ಲಿರುವ ವೈದ್ಯರು, ದಾದಿಯರು ಹಾಗೂ ಸಿಬ್ಬಂದಿ ಸ್ವಯಂ ಪ್ರೇರಿತರಾಗಿ ತಮ್ಮ ಗಂಟಲು ದ್ರವದ ಸ್ಯಾಂಪಲ್ ನೀಡಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ನಿತ್ಯ ನೂರಾರು ರೋಗಿಗಳು ಬರುತ್ತಿದ್ದು ಇಲ್ಲಿನ ಸಿಬ್ಬಂದಿಗೆ ಕರೊನಾ ದೃಢಪಟ್ಟಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಆತಂಕ ಮತ್ತಷ್ಟು ಉಲ್ಭಣವಾಗಿದೆ.


    ಮತ್ತೆ ವಕ್ಕರಿಸಿದ ಕರೊನಾ ಮಹಾಮಾರಿ: ಜು. 3 ರಂದು ಪಟ್ಟಣದ ಆಶ್ರಯ ಬಡಾವಣೆಯ ನಿವಾಸಿಗೆ ಮೊದಲ ಸೋಂಕು ಕಾಣಿಸಿಕೊಂಡಿತ್ತು. ಈಗ ಶಿಕ್ಷಕಿಯಾಗಿರುವ ಇವರ ಮಡದಿ ಹಾಗೂ ಹೆಣ್ಣು ಮಗುವಿಗೂ ಕರೊನಾ ದೃಢಪಟ್ಟಿದೆ. ಅಲ್ಲದೆ ತಾಲೂಕಿನ ಯರಗಂಬಳ್ಳಿ ಗ್ರಾಮದ ಯುವಕನಿಗೂ ದೃಢಪಟ್ಟಿದ್ದು ಈತ ಇತ್ತೀಚೆಗೆ ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಬಂದಿದ್ದ ಎನ್ನಲಾಗಿದೆ.


    ತಾಲೂಕಿನಲ್ಲಿ ಗುರುವಾರ ಒಂದೇ ದಿನ 4 ಪಾಸಿಟಿವ್ ಪ್ರಕರಣಗಳು ಬಂದಿವೆ. ಮುಂಜಾಗ್ರತಾ ಕ್ರಮವಾಗಿ ಯರಗಂಬಳ್ಳಿ ಗ್ರಾಮದ ಲಿಂಗಾಯತರ ಬೀದಿಯನ್ನು ಕಂಟೇನ್ಮೆಂಟ್ ವಲಯವಾಗಿ ಪರಿವರ್ತಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts