More

    ಹ್ಯಾಪಿ ಬರ್ತ್​ಡೇ ಜೂ. ಯಶ್​: ಯಶ್- ರಾಧಿಕಾ ಪುತ್ರನಿಗೆ ಮೊದಲ ವರ್ಷದ ಸಂಭ್ರಮ

    ಬೆಂಗಳೂರು: ಸ್ಯಾಂಡಲ್​ವುಡ್​ನ ಸ್ಟಾರ್ ಜೋಡಿ ಯಶ್​ ಮತ್ತು ರಾಧಿಕಾ ಪಂಡಿತ್​ ಇದೀಗ ಸಂಭ್ರಮದಲ್ಲಿದ್ದಾರೆ. ಯಥರ್ವ ಇಂದಿಗೆ ಒಂದು ವರ್ಷ ಪೂರೈಸಿ ಮೊದಲ ಬರ್ತಡೇ ಖುಷಿಯಲ್ಲಿದ್ದಾನೆ. ಈ ಖುಷಿಯ ವಿಚಾರವನ್ನು ಸೋಷಿಯಲ್​ ಮೀಡಿಯಾದಲ್ಲಿ ಹುಟ್ಟಿದಾಗಿನಿಂದ ಇಲ್ಲಿಯವರೆಗಿನ ಒಂದಷ್ಟು ಫೋಟೋಗಳನ್ನು ರಾಧಿಕಾ ಪಂಡಿತ್​ ಶೇರ್​ ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: ಅದಿತಿ ಪ್ರಭುದೇವ ಅಕೌಂಟಲ್ಲಿ ಇನ್ನೆರಡು ಸಿನಿಮಾ

    ಕಳೆದ ವರ್ಷ ಅಕ್ಟೋಬರ್ 30ರಂದು ಯಥರ್ವನ ಆಗಮನವಾಗಿತ್ತು. ಇದೀಗ ಆ ಖುಷಿಗೆ ಒಂದು ವರ್ಷದ ಸಂಭ್ರಮ. ಪುತ್ರನ ಜನ್ಮದಿನಕ್ಕೆ ಅಷ್ಟೇ ವಿಶೇಷವಾದ ಸಾಲನ್ನು ರಾಧಿಕಾ ಬರೆದುಕೊಂಡಿದ್ದಾರೆ. ‘ಪ್ರೀತಿಯ ನನ್ನ ಬೇಬಿಗೆ ಜನ್ಮದಿನದ ಶುಭಾಶಯಗಳು. ಲವ್​ ಯೂ’ ಎಂದಿದ್ದಾರೆ.

    ಪುತ್ರಿ ಐರಾ ಒಂದು ವರ್ಷ ತುಂಬಿದ ಬೆನ್ನಲ್ಲೇ ನಟ ಯಶ್​ ಅದ್ದೂರಿ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಸ್ಯಾಂಡಲ್​ವುಡ್​ನ ಬಹುತೇಕ ಕಲಾವಿದರು, ಆಪ್ತರು ಸ್ನೇಹಿತರು ಆಗಮಿಸಿದ್ದರು. ಆದರೆ, ಇದೀಗ ಕರೊನಾ ಹಿನ್ನೆಲೆಯಲ್ಲಿ ಯಥರ್ವನ ಜನ್ಮದಿನವನ್ನು ಸರಳವಾಗಿ ಆಚರಣೆ ಮಾಡಲು ಕುಟುಂಬ ನಿರ್ಧರಿಸಿದೆ.

    ಕಲರ್​ಫುಲ್​ ಬಿಕಿನಿಯಲ್ಲಿ ಕ್ಯಾಮೆರಾಗೆ ಪೋಸ್​ ನೀಡಿರುವ ಬೋಲ್ಡ್​ ಬ್ಯೂಟಿ ಯಾರೆಂದು ಗುರುತಿಸುವಿರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts