More

    ಯಲಿಗಾರ ಕುಟುಂಬದ ಸಮಾಜಸೇವೆ ಶ್ಲಾಘನೀಯ

    ಮುನವಳ್ಳಿ: ನಾವೆಲ್ಲರೂ ಒಂದೇ ಎನ್ನುವ ಮನೋಭಾವನೆಯೊಂದಿಗೆ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವೆ ಸಲ್ಲಿಸುತ್ತ ಜನರ ಪ್ರೀತಿಗೆ ಪಾತ್ರರಾಗಿರುವ ಸವದತ್ತಿ ತಾಲೂಕಿನ ರಾಜಕೀಯ ಮುಖಂಡ ರವೀಂದ್ರ ಭೂಪಾಲಪ್ಪ ಯಲಿಗಾರ ಸಾಮಾಜಿಕ ಕಳಕಳಿ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಪಟ್ಟಣದ ಸೋಮಶೇಖರಮಠದ ಮುರುಘೇಂದ್ರ ಸ್ವಾಮೀಜಿ ಹೇಳಿದ್ದಾರೆ.

    ಭಾನುವಾರ ಕೋವಿಡ್-19ನಿಂದ ತತ್ತರಿಸಿರುವ ಬಡವರು ಹಾಗೂ ಕೋವಿಡ್-19 ಸೇನಾನಿಗಳಿಗೆ ಯಲಿಗಾರ ಕುಟುಂಬದವರು ರೈತರಿಂದ ಖರೀದಿಸಿದ ತರಕಾರಿ ಹಾಗೂ ಹಣ್ಣುಗಳನ್ನು ಉಚಿತವಾಗಿ ವಿತರಿಸಿ ಮಾತನಾಡಿದರು. ಸುಮಾರು 1,500 ಬಡಜನತೆಗೆ ಬದನೆ, ಆಲೂಗಡ್ಡೆ, ನುಗ್ಗೆಕಾಯಿ, ಮೂಲಂಗಿ, ಮೆಣಸಿನಕಾಯಿ, ಮತ್ತಿತರ ತರಕಾರಿ ವಿತರಿಸಲಾಯಿತು.

    ಮುಖಂಡ ಅಂಬರೀಷ ಯಲಿಗಾರ ಮಾತನಾಡಿ, ಲಾಕ್‌ಡೌನ್‌ನಿಂದಾಗಿ ಪಟ್ಟಣದ ಬಡ ಕಾರ್ಮಿಕರು ಉದ್ಯೋಗ ನಷ್ಟದಿಂದ ಕಷ್ಟ ಅನುಭವಿಸಿದ್ದಾರೆ. ಅಂಥವರಿಗೆ ಕೈಲಾದಮಟ್ಟಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದರು.

    ಎಂ.ಆರ್.ಗೋಪಶೆಟ್ಟಿ, ಭೀಮರಾವ ಯಲಿಗಾರ, ಈರಣ್ಣ ಕಮ್ಮಾರ, ಶಿವಲಿಂಗಯ್ಯ ಹಿರೇಮಠ, ಅಂದಾನಿ ಗೋಮಾಡಿ, ಗಂಗಪ್ಪ ನಲವಡೆ, ಪ್ರಕಾಶ ಕಮ್ಮಾರ, ಪ್ರಶಾಂತ ಉಜ್ಜಿನಕೊಪ್ಪ, ಕಲ್ಲಪ್ಪ ಕಿತ್ತೂರ, ನಾಗಪ್ಪ ಕಾಮಣ್ಣವರ, ಗಜಾನನ ಕಲಾಲ, ಮಹೇಶ ಯಲಿಗಾರ, ಅಶೋಕ ಪಟ್ಟಣಶೆಟ್ಟಿ, ಶಿವನಗೌಡ ಹಿರಲಿಂಗಣ್ಣವರ, ಪ್ರಶಾಂತ ಶಿವಪೇಟಿ, ವಿನಾಯಕ ರೇವಡಗಿ, ಬಾಬು ಮಾಟನವರ, ಯಶ ಯಲಿಗಾರ, ಮಲ್ಲಣ್ಣ ಹನಸಿ, ಮನೋಹರ ದಿನ್ನಿಮನಿ ಎಂ.ಎ. ಕಮತಗಿ, ಚಂದ್ರು ಹೊಳಿಮಠ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts