More

    ಅಂಗವಿಕಲರ ಅಭಿವೃದ್ಧಿಗೆ ಪ್ರೋತ್ಸಾಹ; ಸಚಿವ ಹಾಲಪ್ಪ ಆಚಾರ್ ಹೇಳಿಕೆ

    ಯಲಬುರ್ಗಾ: ಅಂಗವಿಕಲರ ಶ್ರೆಯೋಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.

    ಪಟ್ಟಣದ ಬುದ್ಧ ಬಸವ ಅಂಬೇಡ್ಕರ್ ಭವನದಲ್ಲಿ ವಿಕಲಚೇತನರ ಒಕ್ಕೂಟ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಹಾಗೂ ಅಂಗವಿಕಲರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಜಿಲ್ಲಾ ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ನಾನು ಇಲಾಖೆಯ ಮಂತ್ರಿಯಾಗಿ ಅಂಗವಿಕಲರ ಕಲ್ಯಾಣಕ್ಕಾಗಿ ಗೌರವ ಧನ ಹೆಚ್ಚಳ, ಇತರ ಬೇಡಿಕೆ ಈಡೇರಿಸಿದ್ದೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಂಗವಿಕಲರ ಅಭಿವೃದ್ಧಿಗೆ 25 ಕೋಟಿ ರೂ. ಘೋಷಿಸಿದ್ದಾರೆ. ಅಂಗವಿಕಲರ ಪ್ರಗತಿಗೆ ಪ್ರೋತ್ಸಾಹ ನೀಡುತ್ತಿದ್ದು ಮುಂಬರುವ ದಿನಗಳಲ್ಲಿ ವಿವಿಧ ಯೋಜನೆ ಜಾರಿಗೊಳಿಸಲಾಗುತ್ತದೆ ಎಂದರು.

    ಒಕ್ಕೂಟದ ರಾಜ್ಯ ಕಾರ್ಯದರ್ಶಿ ಎಸ್.ಕೃಷ್ಣಪ್ಪ ಮಾತನಾಡಿ, ರಾಜ್ಯದಲ್ಲಿ 30 ಲಕ್ಷಕ್ಕೂ ಅಧಿಕ ಅಂಗವಿಕಲರಿದ್ದು, ಕನಿಷ್ಠ 3 ರಿಂದ 5 ಸಾವಿರ ರೂ.ವರೆಗೆ ಗೌರವಧನ ಹೆಚ್ಚಿಸಬೇಕು. ಪ್ರತ್ಯೇಕ ಇಲಾಖೆ ರಚಿಸಿ ನಿಗಮ ಮಂಡಳಿ ಸ್ಥಾಪಿಸಬೇಕು. ಸರ್ಕಾರ ಶೇ.5 ಅನುದಾನ ಮೀಸಲಿಡುವಂತೆ ವಿವಿಧ ಇಲಾಖೆಗೆ ಸೂಚಿಸಿದರೂ ಕಾರ್ಯರೂಪಕ್ಕೆ ಬಂದಿಲ್ಲ. ಈ ಕುರಿತು ಸರ್ಕಾರದ ಗಮನಕ್ಕೆ ತರಬೇಕು ಎಂದು ಸಚಿವರಿಗೆ ಮನವಿ ಮಾಡಿದರು.
    ಅಂಧ ಸ್ಕೇಟಿಂಗ್ ಕ್ರೀಡಾಪಟು ಡಾ.ನಾನು ಪಾಟೀಲ್ ಉಪನ್ಯಾಸ ನೀಡಿದರು. 16 ಜನ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಿಸಲಾಯಿತು. ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷ ಕಳಕಪ್ಪ ತಳವಾರ್, ತಹಸೀಲ್ದಾರ್ ಶ್ರೀಶೈಲ ತಳವಾರ್, ತಾಪಂ ಇಒ ಸಂತೋಷ ಪಾಟೀಲ್, ಅಂಗವಿಕಲರ ಒಕ್ಕೂಟದ ಅಧ್ಯಕ್ಷ ಕೆ.ಸುಬ್ರಹ್ಮಣ್ಯ, ಸಂಚಾಲಕ ಜಿ.ದೇವರಾಜ, ಜಿಲ್ಲಾಧ್ಯಕ್ಷ ಬಸನಗೌಡ ಬನ್ನಪ್ಪಗೌಡ, ತಾಲೂಕು ಅಧ್ಯಕ್ಷ ಶರಣಪ್ಪ ಬ್ಯಾಳಿ, ಪ್ರಮುಖರಾದ ಡಿ.ಎನ್.ಮೂಲಿಮನಿ, ಮಲ್ಲಿಕಾರ್ಜುನ ಹೊಸ್ಕೇರಿ, ಈರಣ್ಣ ಕರೆಕುರಿ, ಚಂದ್ರಶೇಖರ ಕುಂಬಾರ, ದೌಲಾಜಿ ಕಂದಕೂರ, ಜಯಶ್ರೀ, ಮಂಜುಳಾ, ಚಂದ್ರಶೇಖರ ಹಿರೇಮನಿ, ವೀರಣ್ಣ ಹುಬ್ಬಳ್ಳಿ, ಶಿವನಗೌಡ ಬನ್ನಪ್ಪಗೌಡ್ರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts