More

    ಕುಡಿವ ನೀರಲ್ಲಿ ಫ್ಲೋರೈಡ್ ಅಂಶ ಹೇರಳ

    ಯಲಬುರ್ಗಾ: ನೀರು ಸೇವನೆಯಿಂದ ವಾಂತಿಭೇದಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯ ಪ್ರಯೋಗಾಲಯ ಸಿಬ್ಬಂದಿ ಗುರುವಾರ ತಾಲೂಕಿನ ಶಿರಗುಂಪಿ ಗ್ರಾಮಕ್ಕೆ ಭೇಟಿ ನೀಡಿ ಪರೀಕ್ಷಿಸಿತು.

    ಪ್ರಯೋಗಾಲಯದ ಕಿರಿಯ ತಾಂತ್ರಿಕ ಸಹಾಯಕ ಎ.ಕೆ.ಶರಣಬಸವ, ಸಿಬ್ಬಂದಿ ಬಸವರಾಜ ಹೂಗಾರ, ಆದಪ್ಪ ಕಬ್ಬಿಣದ ತಂಡ ಮನೆ ಮನೆಗೆ ಭೇಟಿ ನೀಡಿ, ನೀರು ಸಂಗ್ರಹಿಸಿ ಸ್ಥಳದಲ್ಲೇ ನೀರಿನ ಗುಣಮಟ್ಟ ಪರೀಕ್ಷಿಸಿ, ವಾಂತಿ, ಜ್ವರಗಳಿಗೆ ಕಾರಣವಾದ ನೀರಿನ ಮೂಲ ಗುರುತಿಸಿತು. ಗ್ರಾಮದಲ್ಲಿ ಎರಡು ಕೊಳವೆಬಾವಿಗಳ ಮೂಲಕ ನೀರು ಸರಬರಾಜಾಗುತ್ತಿದ್ದು, ನೀರಿನಲ್ಲಿ ಫ್ಲೋರೈಡ್ ಅಂಶ ಹೇರಳವಾಗಿ ಕಂಡು ಬಂದಿದೆ. ಇದರಿಂದ ಜನರು ಅನಾರೋಗ್ಯಕ್ಕೆ ಈಡಾಗಿದ್ದಾರೆ ಎಂದು ತಂಡ ತಿಳಿಸಿತು.

    ಮುಖ್ಯಶಿಕ್ಷಕ ಯಮನೂರಪ್ಪ ಛಲವಾದಿ, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಶ್ರೀದೇವಿ ಕಂಬಳಿ, ಆಶಾ ಕಾರ್ಯಕರ್ತೆಯರಾದ ರೇಣುಕಾ ಇಳಿಗೇರ್, ನಂದಮ್ಮ ಶಂಕರಗೋಡಿಮಠ, ಗ್ರಾಪಂ ನೌಕರ ಈರಪ್ಪ ಜಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts