More

    ಸಾಹಿತಿ ಸಿದ್ಧರಾಮಸ್ವಾಮಿ ಹಿರೇಮಠ ಲಿಂಗೈಕ್ಯ

    ಯಲಬುರ್ಗಾ: ಪಟ್ಟಣದ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿಗಳ ತಂದೆ ಶ್ರೀ ಸಿದ್ಧರಾಮಸ್ವಾಮಿ ಹಿರೇಮಠ (ಸಿಹಿ) (96) ಸೋಮವಾರ ಲಿಂಗೈಕ್ಯರಾದರು.

    ಗದಗದಲ್ಲಿ ಪ್ರಾಥಮಿಕ, ಕುಷ್ಟಗಿಯಲ್ಲಿ ಮಾಧ್ಯಮಿಕ, ಧಾರವಾಡದಲ್ಲಿ ಪ್ರೌಢ ಹಾಗೂ ಹೈದರಾಬಾದ್ ನಿಜಾಮ ಕಾಲದ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಕಾಲೇಜು ಶಿಕ್ಷಣ ಪಡೆದಿದ್ದರು. ಕನ್ನಡ, ಹಿಂದಿ, ಉರ್ದು ಭಾಷೆಯಲ್ಲಿ ಪಾಂಡಿತ್ಯ ಹೊಂದಿದ್ದರು. ಗದಗ ಜಿಲ್ಲೆಯ ಕಲ್ಮಠದಲ್ಲಿ 1927ರಲ್ಲಿ ಜನಿಸಿದ ಶ್ರೀಯುತರು, ಯಲಬುರ್ಗಾ ಸಂಸ್ಥಾನ ಹಿರೇಮಠದ ಶ್ರೀ ವಿದ್ಯಾಸಾಗರ ಸ್ವಾಮೀಜಿಗಳ ಉತ್ತರಾಧಿಕಾರಿಯಾಗಿ ಮಠದ ಧಾರ್ಮಿಕ ಪರಂಪರೆ ಹೆಚ್ಚಿಸಿದ್ದಾರೆ. ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆ ತೆರೆದು ಸಾವಿರಾರು ಮಕ್ಕಳಿಗೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಶಿಕ್ಷಣ ಕೊಡುತ್ತಾ ಬಂದಿದ್ದಾರೆ. ತಮ್ಮ ತೃತೀಯ ಪುತ್ರ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿಯನ್ನು ಸಂಸ್ಥಾನ ಹಿರೇಮಠದ ಉತ್ತರಾಧಿಕಾರಿಯಾಗಿ ನೇಮಕ ಮಾಡಿದ್ದಾರೆ. ಲಿಂ. ಶ್ರೀಗಳಿಗೆ ಓರ್ವ ಪುತ್ರಿ, ಮೂವರು ಪುತ್ರರು ಇದ್ದಾರೆ.

    ಶ್ರೀ ಮಠದಲ್ಲಿ ಶಿವಾನುಭವ ಗೋಷ್ಠಿ ಹಾಗೂ ಸಂಗೀತ ಕಾರ್ಯಕ್ರಮ ನಡೆಸುವ ಮೂಲಕ ಭಕ್ತರಲ್ಲಿ ಶರಣರ ಚಿಂತನೆ, ಮಠದ ಪರಂಪರೆ ಮುಂದುವರಿಯಲು ಕಾರಣರಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಅಗಾದ ಸಾಧನೆ ಮಾಡಿರುವ ಶ್ರೀಗಳು, ಶ್ರೀ ಸಿದ್ದರಾಮೇಶ್ವರ ಸುಪ್ರಭಾತ, ಅನ್ವೇಷಣೆ, ಸಿದ್ದೇಶ್ವರ ವಚನಗಳು, ರಾಜಶ್ರೀಗುರು ವಿದ್ಯಾಸಾಗರ, ಅರಿವರಿದ ಗುರು, ದಾಂಪತ್ಯ ಧರ್ಮ ಚರಿತ್ರೆ, ಅರಿವಿನ ಬೆಳಕು, ಕುಲವಧು ಗೌರಿ, ಸಂಸ್ಕೃತಿ ಸಂಪದ, ಆತ್ಮ ಚರಿತ್ರೆ, ಆರೋಗ್ಯ ಭಾಗ್ಯ, ಮಾನವನ ಶರೀರ, ವಚನ ವೈಭವ ಹೀಗೆ 13ಕ್ಕೂ ಅಧಿಕ ಕೃತಿ ರಚಿಸಿದ್ದಾರೆ. ಸಿದ್ಧರಾಮೇಶ್ವರ ವಿದ್ಯಾಸಂಸ್ಥೆ ಆವರಣದಲ್ಲಿ ವೀರಶೈವ ಲಿಂಗಾಯತ ವಿಧಿ ವಿಧಾನಗಳಂತೆ ಅಂತ್ಯಕ್ರಿಯೆ ನಡೆಯಿತು. ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ಭಕ್ತರು ಅಂತಿಮ ದರ್ಶನ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts