More

    ಕಳಪೆ ಕಾಮಗಾರಿ ಸಾಬೀತಾದರೆ ಕ್ರಮ; ಗಣಿ-ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ ಎಚ್ಚರಿಕೆ

    ಯಲಬುರ್ಗಾ: ನನ್ನ ಅವಧಿಯಲ್ಲಿ ಕ್ಷೇತ್ರದ ಯಾವುದೇ ಕಾಮಗಾರಿ ಕಳಪೆ ನಡೆಸಿ ಬಿಲ್ ಎತ್ತುವಳಿ ಮಾಡಿರುವ ಪ್ರಕರಣ ಸಾಬೀತಾದರೆ ಸಂಬಂಧಿಸಿದವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ ಎಚ್ಚರಿಸಿದರು.

    ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹೆಚ್ಚುವರಿ ತರಗತಿ ಕೊಠಡಿಗಳ ನಿರ್ಮಾಣ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಕಾಮಗಾರಿಯ ಗುಣಮಟ್ಟ ಮತ್ತು ಪಾರದರ್ಶಕವಾಗಿ ಕೆಲಸ ಮಾಡಿಸಿಕೊಳ್ಳುವುದು ಸಮುದಾಯದ ಜವಾಬ್ದಾರಿಯಾಗಿದೆ. ಕ್ಷೇತ್ರದಲ್ಲಿ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಕಳಪೆ, ಅರೆಬರೆ ಕೆಲಸ ಮಾಡಿ ನೂರಾರು ಕೋಟಿ ರೂ. ಲೂಟಿ ಹೊಡೆಯಲಾಗಿದೆ ಎಂದು ದೂರಿದರು.

    ನಾನು ಸಾಮಾಜಿಕ ಕಳಕಳಿಯಿಂದ ಕೆಲಸ ಮಾಡುತ್ತಿದ್ದೇನೆ. ನನ್ನ ಬಗ್ಗೆ ಟೀಕೆ ಮಾಡುವವರಿಗೆ ಅಭಿವೃದ್ಧಿ ಮೂಲಕ ಉತ್ತರ ಕೊಡುತ್ತೇನೆ. ಹಿಂದೆ ಆರ್‌ಡಿಸಿಸಿ ಬ್ಯಾಂಕ್‌ಗೆ ಬೀಗ ಬಿದ್ದಾಗ, ನಾನು ಅಧ್ಯಕ್ಷನಾಗಿ ಎರಡೇ ವರ್ಷದಲ್ಲಿ ಬ್ಯಾಂಕನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದೇನೆ. ಕೊಪ್ಪಳ ಜಿಲ್ಲೆಗೆ ಸರ್ಕಾರ ವಿವಿ ಘೋಷಣೆ ಮಾಡಿದ್ದು, ಶೀಘ್ರವೇ ಕಾರ್ಯ ಚಟುವಟಿಕೆಗಳು ಆರಂಭಗೊಳ್ಳಲಿವೆ. ಕ್ಷೇತ್ರದ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು ಉನ್ನತ ಸ್ಥಾನ ಅಲಂಕರಿಸಬೇಕು ಎಂದರು.

    ಪ್ರಾಚಾರ್ಯ ಎಸ್.ಜಿ.ಗುರಿಕಾರ ರಚಿಸಿದ ಪದವಿ ಪಠ್ಯಕ್ರಮಕ್ಕೆ ಸಂಬಂಧಿಸಿದ ಎರಡು ಪುಸ್ತಕ ಬಿಡುಗೊಳಿಸಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಸಲಿಂಗಪ್ಪ ಭೂತೆ, ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷ ಕಳಕಪ್ಪ ತಳವಾರ, ತಹಸೀಲ್ದಾರ್ ಶ್ರೀಶೈಲ ತಳವಾರ, ಪಪಂ ಮುಖ್ಯಾಧಿಕಾರಿ ಶಿವಕುಮಾರ ಕಟ್ಟಿಮನಿ, ಪ್ರಮುಖರಾದ ವೀರಣ್ಣ ಹುಬ್ಬಳ್ಳಿ, ಶರಣಪ್ಪ ಈಳಿಗೇರ, ಪ್ರಭುರಾಜ ಕಲಬುರ್ಗಿ, ಪ್ರಭುಸ್ವಾಮಿ ಸಾಲಿಮಠ, ಸಿದ್ರಾಮೇಶ ಬೇಲೇರಿ, ಬಸವರಾಜ, ಕಳಕಪ್ಪ ಕಂಬಳಿ, ಬಸನಗೌಡ ತೊಂಡಿಹಾಳ, ಪ್ರಭುಸ್ವಾಮಿ ಸಾಲಿಮಠ, ದೊಡ್ಡಯ್ಯ ಗುರುವಿನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts