More

    ಜೀವನದ ಸಾರ್ಥಕತೆಗೆ ಗುರಿ ಮುಖ್ಯ – ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಆಶೀರ್ವಚನ

    ಯಲಬುರ್ಗಾ: ಜೀವನದಲ್ಲಿ ಸಾರ್ಥಕತೆಯ ಫಲ ದೊರೆಯಬೇಕಾದರೆ, ಗುರಿ ಇರಬೇಕು. ಗುರಿ ಇಲ್ಲದಿದ್ದರೆ ಬದುಕಿಗೆ ಅರ್ಥವಿಲ್ಲ ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

    ತಾಲೂಕಿನ ಗುನ್ನಾಳ ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸದ್ಭಾವನಾ ಪಾದಯಾತ್ರೆಯಲ್ಲಿ ಮಾತನಾಡಿದರು. ಮನುಷ್ಯನಲ್ಲಿ ಅತಿಯಾಸೆ ಇರಬಾರದು. ಜೀವನದಲ್ಲಿ ಸಂತೃಪ್ತಿ ಇಲ್ಲದಿದ್ದರೆ ಬದುಕು ವ್ಯರ್ಥ. ಇನ್ನೊಬ್ಬರಿಗೆ ಕೇಡು ಬಯಸದೆ, ಭಗವಂತ ಕೊಟ್ಟ ಜೀವನವನ್ನು ಪರೋಪಕಾರಕ್ಕಾಗಿ ಮೀಸಲಿಟ್ಟು ಸಾರ್ಥಕಪಡಿಸಿಕೊಳ್ಳಬೇಕು. ಅಧ್ಯಾತ್ಮದ ಕಡೆಗೆ ಒಲವು, ಪುರಾಣ, ಪ್ರವಚನಗಳ ಆಲಿಕೆಯಿಂದ ಮನುಷ್ಯನಲ್ಲಿ ಅಡಗಿರುವ ಅಜ್ಞಾನವೆಂಬ ಕತ್ತಲು ಸರಿದು ಬೆಳಕು ಮೂಡುತ್ತದೆ ಎಂದ ಶ್ರೀಗಳು, ಗುನ್ನಾಳ ಗ್ರಾಮದ ಭಕ್ತರು ಗ್ರಾಮ ಸ್ವಚ್ಛಗೊಳಿಸಿ, ರಂಗೋಲಿ ಚಿತ್ತಾರ ಬಿಡಿಸಿ ಸ್ವಾಗತಿಸಿರುವುದು ನಿಜವಾದ ಸತ್ಕಾರ ಎಂದರು.

    ಹರಿದು ಬಂದ ಭಕ್ತಗಣ: ಹಿರೇವಕಲಕುಂಟಾದಲ್ಲಿ ಮಾ.16 ರಿಂದ ಗವಿಸಿದ್ಧೇಶ್ವರ ಶ್ರೀಗಳಿಂದ 5 ದಿನಗಳ ಅಧ್ಯಾತ್ಮ ಪ್ರವಚನ ಆರಂಭವಾಗಿದೆ. ಈ ನಿಮಿತ್ತ ಕೈಗೊಂಡ ಸದ್ಭಾವನಾ ಪಾದಯಾತ್ರೆ ಈಗಾಗಲೇ ಮಾಟಲದಿನ್ನಿ, ಗಾಣಧಾಳದಲ್ಲಿ ಸಂಚರಿಸಿದೆ. ಶುಕ್ರವಾರ ಗುನ್ನಾಳ ಗ್ರಾಮಕ್ಕೆ ಪಾದಯಾತ್ರೆ ಆಗಮನ ಹಿನ್ನೆಲೆಯಲ್ಲಿ ಮನೆ ಮುಂದೆ ರಂಗೋಲಿ, ಓಣಿಯುದ್ದಕ್ಕೂ ಸಿಂಗಾರಗೊಳಿಸಿ, ಹಬ್ಬದ ವಾತಾವರಣ ನಿರ್ಮಿಸಲಾಗಿತ್ತು. ಅಪಾರ ಸಂಖ್ಯೆಯಲ್ಲಿಭಕ್ತರು ಶ್ವೇತವರ್ಣದ ಉಡುಪು ಧರಿಸಿ, ಚಿಕೇನಕೊಪ್ಪದ ಶಿವಶಾಂತವೀರ ಶರಣರು ಹಾಗೂ ಭಜನಾ ಮಂಡಳಿ ಸದಸ್ಯರೊಂದಿಗೆ ಭಜನಾ ಪದ ಹಾಡುವ ಮೂಲಕ ಗವಿಶ್ರೀಗಳ ಸದ್ಭಾವನಾ ಪಾದಯಾತ್ರೆ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts